ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ನೀನಿರುವ ಸ್ಥಿತಿಗೂ, ಪೂರ್ವದಲ್ಲಿ ಸೀನಿದ್ದ ಸ್ಥಿತಿಗೂ ವ್ಯತ್ಯಾಸವು ವಿಶೇಷವಾಗಿರುವು ದಿಲ್ಲ, ಆದರೆ, ನಿನ್ನ ಮನೋಭಾವವು ಬಹಳ ವ್ಯತ್ಯಾಸವನ್ನು ಹೊಂದಿರುವುದು. ನೀನು ಬಹಳ ಕಷ್ಟವನ್ನು ಅನುಭವಿಸಿರುವಿ, ಬಹಳ ಕ್ಷೇಶವನ್ನು ಪಟ್ಟಿ ರುವಿ, ನಿನಗೆ ಜ್ಞಾನೋದಯವಾಗಿರುವುದಕ್ಕೆ ಇವುಗಳೆಲ್ಲಾ ತುಂಬಾ ಸಾಧಕವಾದವು. ದುರ್ಗು ಣಗಳನ್ನು ಬೇರುಸಹಿತ ಕಿತ್ತು ಹಾಕಿ, ಸುಗುಣಗಳನ್ನು ನೆಟ್ಟು, ಅವುಗಳು ಕಲ್ಪವ್ಯ ಕ್ಷಗಳಾಗುವಂತೆ ಮಾಡುವುದು ಸುಲಭವಲ್ಲ, ಅದು ಭಗೀರಥ ಪ್ರಯತ್ನ ಎಂದು ಹೇಳ ಬಹುದು. ಕರ್ಮಪರಿಪಾಕದಿಂದ ಕಷ್ಟವು ಬರುವುದು, ಕ್ಷೇಶಗಳುಂಟಾಗುವುವು. ದಾರಿದ್ರವು ಬರುವುದು ಬದುಕುವುದಕ್ಕಿಂತ ಸಾಯುವುದು ಮೇಲೆಂದು ತೋರುವ ಸ್ಥಿತಿಯು ಬರುವುದು, ಇವುಗಳೆಲ್ಲಾ ದುರದೃಷ್ಟದ ಪರಿಣಾಮವೆಂದು ಅಜ್ಞಾನಿಗಳು ತಿಳಿದುಕೊಳ್ಳುವರು, ಸಾವಧಾನವಾಗಿ ಪರಿಶೀಲಿಸಿದರೆ, ಇವು ಗಳೆಲ್ಲಾ ಕರ್ಮಪರಿಪಾಕವೆಂದು ಗೊತ್ತಾಗುವುವು, ಸಂಪತ್ತು ಬಂದಾಗ, ನಾವು ದುರ್ವಿಷಯಗಳಲ್ಲಿ ಉದ್ಯುಕ್ತರಾಗುತ್ತೇವೆ, ಮಿತಿಮೀರಿದ ಭೋಗಾದಿಗ ೪೦ದ ನಮ್ಮ ದೇಹವು ಕೆಡುವುದು, ನಮ್ಮ ಮನಸ್ಸು ದುರ್ಬಲವಾಗುವುದು. ಆಯು ರಾರೋಗ್ಯಶ್ವದ್ಯಾದಿಗಳಿಗೆ ಮಿತಿಮೀರಿದ ಸುಖಗಳು ವಿಷಪ್ರಯೋಗವೆಂದು ನಮ್ಮ ಹಿರಿಯರು ಹೇಳುವರು. 'ಇದು ಅನುಭವಸಿದ್ಧವಾದದ್ದು, ರಾಜಯಕ್ಷ್ಯವೇ ಮೊದಲಾದ ರೋಗಗಳಿಗೆ ಕಾರಣವನ್ನು ವಿಚಾರಿಸಿದರೆ, ಸಂಪತ್ತೇ ಕಾರಣವೆಂದು ಗೊತ್ತಾಗುತ್ತದೆ. ಸಂಪತ್ತಿನಲ್ಲಿ ಮುಳುಗಿ ತೇಲತಕ್ಕ ವರಿಗೆ ಪುತ್ರ ಸಂತಾನವೂ ಕೂಡ ಆಗುವುದಿಲ್ಲ, ಇದಕ್ಕೆ ಕಾರಣವು ಸಂಪತ್ತಾಗೇ ಇರುವುದು, ಸಂಪ ತಿಲ್ಲದವರು ಅನ್ನ ವಸ್ತ್ರಗಳನ್ನು ಸಂಪಾದಿಸಿಕೊಳ್ಳುವುದಕ್ಕೆ ದೇಹಶಕ್ತಿಯನ್ನೂ, ಬುದ್ಧಿಶಕ್ತಿಯನ್ನೂ ಉಪಯೋಗಿಸಿ, ಕೆಲಸ ಮಾಡಬೇಕು, ನಿಷಾದ್ರವ್ಯ ಸೇವನೆ ಯನ್ನು ಪರಿತ್ಯಾಗ ಮಾಡಬೇಕು. “ ಅತಿ ಸರ್ವತ್ರ ವರ್ಜಯೇತ್ ಎಂಬ ವಿಧಿ ಯನ್ನನು ಸರಸಿ ನಡೆಯಬೇಕು, ದುರ್ವಿಷಗಳಲ್ಲಿ ಪರಾಣ್ಮುಖರಾಗಬೇಕು, ಅರಿಷ ಡ್ವರ್ಗಗಳನ್ನು ಜೈಸಬೇಕು, ಶಾಂತಿಯನ್ನೂ, ದಾಂತಿಯನ್ನೂ ಸಮಗ್ರವಾಗಿ, ಹೊಂದಬೇಕು, ಸರಿಣಾಮ ಫಲವನ್ನು ಪರ್ಯಾಲೋಚಿಸಿ, ಕರ್ಮಗಳನ್ನು ಮಾಡಬೇಕು, ಶಕ್ತಿಗನುಸಾರವಾಗಿ ಕೆಲಸವನ್ನು ಮಾಡಬೇಕು, ಬೇಜಾರು ಪರಿ ಹಾರವಾಗುವಂತಹ ವಿಶ್ರಾಂತಿಯನ್ನು ಹೊಂದಬೇಕು. ಇವುಗಳಲ್ಲಿ ಯಾವುದೂ