ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{1}4 - * * • : ವಾಗಿರಬೇಕಾದರೆ, ಹೇಗೆ ಇರಬೇಕೋ ಆ ರೀತಿಯಲ್ಲಿ ಈ ದೇವಸ್ಥಾನವು ಕಟ್ಟಲ್ಪ ಟ್ಟಿತ್ತು. ಸ್ಪಟಿಕ ಶಿಲೆಗಳಿಂದ ಮಾಡಲ್ಪಟ್ಟ ಕಂಭಗಳೂ, ಬೆಳ್ಳಿಯಿಂದ ಮಾಡಲ್ಪಟ್ಟ ಬೋದಿಗೆಗಳೂ ಥಳಥಳಿಸುತ್ತಿದ್ದವು, ಎಲ್ಲಿ ನೋಡಿದಾಗ್ಯೂ ಭಕ್ತಿಗೆ ನಿಧಿಗಳಾದ ಮಹನೀಯರ ವಿಗ್ರಹಗಳು ಇದ್ದವು. ಗರ್ಭಗುಡಿಯಲ್ಲಿ ಜಗದೀಶ್ವರನಾದ ಜೂವಿಟ ರನ ವಿಗ್ರಹವೂ, ಜಗನ್ಮಾತೆಯಾದ ಯರೋಪಾ ಎಂಬ ಶಕ್ತಿಯ ವಿಗ್ರಹವೂ ಇದ್ದವು. ಇವರ ಮಗನಾದ ಮೈನಾಸ್ ಎಂಬುವನ ಪ್ರಥಿಮೆ ಯು ಇದ್ದಿತು. ಈ ಮೈನಾಸನು ಲೋಕವಿಖ್ಯಾತನು, ಪಾಶ್ಚಾತ್ಯರಲ್ಲಿ ಸಕಲ ರಾಜಧರ್ಮಗಳಿಗೂ ಇವನು ಜನಕನಾಗಿರುವನು. ಇಂಡಿಯಾದಲ್ಲಿ ಮನುವೆಂಬ ಹೆಸರಿನಿಂದ ಪ್ರಸಿದ್ಧನಾಗಿರುವ ಧರ್ಮಶಾಸ್ತ್ರಜ್ಞನೂ, ಈ ಮೈನಾಸರೂ ಇಬ್ಬರೂ ಬೇರೆ ಹೆಸರಿನಿಂದ ಪ್ರಸಿದ್ಧರಾದ ಒಬ್ಬರಾಗಿರಬಹುದೆಂದು ಅನೇಕರು ಭಾವಿಸುತ್ತಾರೆ. ಈ ಮೂರು ವಿಗ್ರಹಗಳೂ ನಿಶ್ಚಲವಾಗಿದ್ದದ್ದರಿಂದ, ವಿಗ್ರಹಗಳಂತೆ ಕಾಣಬಂದವು, ಅವುಗಳನ್ನು ನೋಡಿದ ಕೂಡಲೆ, ಟೆಲಿಮಾಕಸ್ಸಸಿಗೆ ಇವರು ಮಹಾಪುರುಷರೆಂಬ ಜ್ಞಾನವುಂಟಾಯಿತು, ಈ ಮರು ವಿಗ್ರಹಗಳನ್ನೂ ನೋಡಿ, ಆಶ್ಚಯ್ಯಪಟ್ಟು, ಮುಂದಕ್ಕೆ ಹೊರಟರು. ಟ್ರಾಯ್ ಯುದ್ಧದಲ್ಲಿ ತೈವಿಂಗ್ ಎಂಬ ಮಹಾ ಶೂರನನ್ನು ಕೊಂದ ರೀಸಸ್ ಎಂಬ ಮಹಾ ಪರಾಕ್ರಮಶಾಲಿಯ ರಥದ ಕುದುರೆಗಳನ್ನು ನಿಲ್ಲಿಸುವುದಕ್ಕೆ ಉರು, ಕನಾಗಿ, ಎಕ ಲೀಸನ ವ೩ ಕವಚವನ್ನು ಏಚಾಕ್ಸ್ ಎಂಬ ರಾಕ್ಷಸನಿಂದ ಅಪಹರಿಸುವುದರಲ್ಲಿ ಉದ್ದು, ಕನಾಗಿದ್ದ ಒಬ್ಬ ಮಹಾವೀರನ ಪ್ರಮೆಯು ಟೆಲಿಮಾಕಣ್ಣಿನ ದೃಷ್ಟಿ ಪಥಕ್ಕೆ ಬಿದ್ದಿತು, ಕುದುರೆಯ ಮೇಲಿನಿಂದ ಇಳಿದು, ರಥದ ಕುದುರೆಗಳನ್ನು ನಿಲ್ಲಿಸಿ, ಏಜಾಕ್ಸನಿಗೆ ಗರ್ಭನಿರ್ಧೆದವಾಗುವಂತೆ ಮಾಡುತ್ತಲಿರುವಂತೆ ರಚಿಸಲ್ಪಟ್ಟಿದ್ದ ಈ ಮಹಾವೀರನ ಆಕೃತಿಯನ್ನು ನೋಡಿ, ಟಿಲವಕಸ್ಸನು ವಿಸ್ಮಿತನಾದನು, ಕೂಡಲೆ ಆ ಮಹಾವೀರನೆ ತನ್ನ ತಂದೆಯೆಂದು ಗೊತ್ತಾಯಿತು. ಯಲಿಸಿಸ್ಸನು ಮಾಡಿದ ಅಮಾನುಷ ಕೃತ್ಯಗಳನ್ನು ಮೆಂಟರು ಇವನಿಗೆ ತಿಳಿಸಿದ್ದನು. ಇಂಥಾ ಕೃತ್ಯಗಳನ್ನು ಮಾಡುವ ರೀತಿಯಲ್ಲಿ ರಸಿಸಲ್ಪಟ್ಟಿದ ಪ್ರಥಿ ಹಿಯನ್ನು ನೋಡಿದ ಕೂಡಲೆ, ಟೆಲಿಮಾ ಕಸಸ್ಸಿಗೆ ಮಣ್ಣಲ್ಲಿ ಕಣವಳ ಉಂಟಾಯಿತು, ಕಣ್ಣುಗಳಲ್ಲಿ ಸಂತೋಷ ವ್ಯಸನ ಗರ್ಭಿತಗಳಾದ ನೀರುಗಳು ತುಂ:ದವು, ತನ್ನ ತಂದೆಯು ಹೇಗೆ ಲೋಕೈಕವೀರನಾ ಗಿದ್ದನೋ, ಆ ಭಾವನೆಯು೦ಟಾದಪ್ಪಗಿಂದ, ೬೭ಗನಿಗೆ ಆನಂದ ಉ೦೬Jಾಯಿತು.