ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ತಿಳಿದುಕೊಂಡೆ, ನಮ್ಮ ಉದ್ದರಣ ಕ್ಕೂ, ನರ್ತನಕ್ಕೂ ನಮ್ಮ ಮನೋವಾಕ್ಕರ್ಮ ಗಳ ಪಾರಿಶುದ್ಧತ್ವ ನೇ ಕಾರಣವೆಂದು ನಿನಗೆ ಗೊ ತ್ಯಾ ತು. ಈ ಧರ್ಮ ವೇ ನಿನ್ನನ್ನು ಕಾಪಾಡವುದು ಈ ಧರ್ಮದ ಮಹಿಮೆಯಿಂದಲೇ ಈ ವ ಪ ಾನುಭಾವ ರುಗಳಾದ ಟಿಲಮಕಸ್ ಮತ್ತು ವೆಂಟರುಗಳು ನಿನಗೆ ಸಹಾಯ ಮಾಡುವುದಕ್ಕೆ ಸ್ಕರ ಈಶ್ವರಾಚ್ಛೆಯಿಂದ ಬಂದಿರುವರು. ನಿನಗೆ ಸನ್ಮಂಗಳಗಳಾಗು ಎಂದು ಹೇಳಿದನು, ಕೂಡಲೇ ಆವೇಶವು ಪರಿಹಾರವಾಯಿತು. ಮೈನಾಸನಿಗೆ ಅರ್ಚ ನೆಯು ಮಾಡಲ್ಪಟ್ಟಿತು. ಇಡುಮಿನಿಯಸ್ಸನೇ ಮೊದಲಾದವರಿಗೆ ತೀರ್ಥಪ್ರಸಾದ ಗಳು ಕೊಡಲ್ಪಟ್ಟವು, ಅವುಗಳನ್ನು ಇವರು ಪರಿಗ್ರಹಿಸಿದರು. ಈ ಅರ್ಚಕನು ಹೇಳಿ ದ್ದನ್ನು ಕೇಳಿ, ಎಲ್ಲರಿಗೂ ವಿಸ್ಮಯವಾಯಿತು. ಇಡುವಿಾನಿಯಸ್‌ ಎಂಬವನ ಕೈಕಾಲುಗಳು ನಡುಗುವುದಕ್ಕೆ ಉಪಕ್ರಮವಾಯಿತು. ಇವನು ಭ್ರಾಂತನಾದನು. ಟೆಲಿಮಾಕಸ್ಸನು ವಿಸ್ಮಿತನಾದನು, “ಈ ಆರ್ಚಕನು ಹೇಳಿದ್ದೆಲ್ಲಾ ನಿಜವಾಗಿದ್ದೀತೇ ? ಇದು ನಂಬಿಕೆಗೆ ಅರ್ಹವಾದದ್ದೆ' ಎಂದು ಯೋಚಿಸುತ್ತಿದ್ದನು. ವೆಂಟರನು ಸಂಪೂರ್ಣವಾಗಿ ಉದಾಶೀನನಾಗಿದ್ದನು. ಇಡ ವಿಾನಿಯಸ್ಸನನ್ನು ಕುರಿತು ಇವನು ಹೇಳಿದ್ದೇನಂದರೆ : - ಈ ಅರ್ಚಕನು ಹೇಳಿದ್ದು ಅವನ ಸ್ವಕಪೋಲಕಲ್ಪಿತಗಳಲ್ಲ. ಇದು ದೇವರ ಸಂಕಲ್ಪ, ನೀನು ಸದುದ್ದೇಶವುಳ್ಳವನಾಗಿ ಪರಿಣಮಿಸಿರುವಿ, ಸತ್ಸಂ ಕಲ್ಪದಿಂದ ಹೊರಡತಕ್ಕ ವರಿಗೆ ದೇವರ ಸಹಾಯವು ಅಪ್ರಾರ್ಥಿತವಾಗಿ ಬರುವುದು. ದೈವ ಸಹಾಯವುಳ್ಳವರಿಗೆ ಪರಾಜಯದ ಶಂಕೆ ಎಲ್ಲಿಯದು ? ನಾವು ಇಲ್ಲಿ ಬರಬೇ ಕೆಂದು ಉದ್ದೇಶಿಸಿರಲಿಲ್ಲ, ನಿನಗೆ ಸಹಾಯ ಮಾಡಬೇಕೆಂಬ ಅಭಿನಿವೇಶವೂ ನಮಗೆ ಇರಲಿಲ್ಲ, ನಿನಗೂ, ನಿನ್ನ ಶತ್ರುಗಳಿ : ಆಗತಕ್ಕೆ ಎದ್ದದಲ್ಲಿ ನಾವು ಭಾಗಿಗಳಾ ಗುತ್ತೇವೆಂದು ತಿಳಿದು ಕೊಂಡು ಇರಲಿಲ್ಲ. ಇವುಗಳೆಲ್ಲಾ ಅಪ್ರಾರ್ಥಿತವಾ ಗಿಯೇ ಸಂಭವಿಸಿದವು, ನಿನಗೆ ಜಯವಾಗುವುದಕ್ಕೆ ಇವೆಲ್ಲಾ ಶುಭ ಸೂಚನೆಗಳು.” ಈ ರೀತಿಯಲ್ಲಿ ಮೆಂಟರನು ಹೇಳಲು, ಇಡುಮೀನಿಯಸ್ಸನು ಉತ್ತರವನ್ನು ಕೊಡಬೇಕೆಂದು ಪ್ರಯತ್ನ ಮಾಡಿದನು. ಇವನ ಪ್ರಯತ್ನವು ನಿಷ್ಪಲವಾಯಿತು. ಶಬ್ಬಗಳು ಬಾಯಿನಿಂದ ಹೊರಡಲಿಲ್ಲ, ಟೆಲಿಮಾಕಸ್ಸನು ಇದನ್ನು ನೋಡಿದನು. ಮೆಂಟರನ ಕಡೆಗೆ ತಿರುಗಿ, ಎಲೈ ಮಹಾನುಭಾವನೇ.-ಈ ಅರ್ಚಕನ ಕೊನೇ ಮಾತು ಗಳಿಗೆ ನನಗೆ ಸರಿಯಾದ ಅರ್ಥವಾಗಲಿಲ್ಲ, ನಾನು ಪುನಃ ನೋಡುವೆನೆಂದು ಈತನು