ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10:) MMA ~ * * * * ಹೇಳಿದನು, ನನ್ನ ತಂದೆ ಯನ್ನು ನೋಡುವೆನೇ ? ಅಧವಾ ನನ್ನ ದೇಶವನ್ನು ನೋ ಡುವೆನೇ ? ಇವರ ಮಾತು ಏತಕೆ, ಸಂಗ್ರವಾಗಿ ಉಚ್ಚರಿಸಲ್ಪಟ್ಟಿತು ? ನನ್ನ ತಂದೆ ಯನ್ನು ನೋಡುವ ಪುಣ್ಯವು ನನಗೆ ಲಭ್ಯವಾಗುವುದೇ ? ಅವನು ಬದುಕಿರುವನೇ ? ಆತನ ದರುಶನ ಲಾಭವು ನನಗೆ ದೊರೆಯುವುದೆ ? ನಮ್ಮ ತಾಯಿಯು ಬದುಕಿರು ವಳೇ ? ಅವಳು ವಿಷ ಸೇವೆಯನ್ನು ಮಾಡಿ, ಪ್ರಾಣವನ್ನು ಕಸಿದುಕೊಂಡಿಲ್ಲವೇ ? ಲೋಕೈಕವೀರನಾ ವ ಯಸಸ್ಸನನ್ನು ನೋಡುವ ಸು ವು G 'ಗೆ ದೊರೆಯು ವುದೇ ? ಈ ಅರ್ಚಕನ ಮಾತು ನಿಜವೇ ? "ಇವನು ದೇವರಿಂದ ಪ್ರೇರಿತನಾಗಿ ಈ ಭವಿಷ್ಪ ದ್ಯಾ ಕೈವನ ಹೇಳಿರುವನೇ ? ಇವನು ಹೇಳಿದ್ದು ಕೇವಲ ಶುಭಸೂಚಕಗ ಳಾಗಿವೆ ನನು ಕೇವಲ ದುರದೃಷ್ಟಶಾಲಿಯು, ಇಂಥಾ ಸಂಸತ್ತು ನನಗೆ ಲಭ್ಯ ವಾಗುವುದು ಕಷ್ಟವೆಂದು ತೋರುತ್ತದೆ. ಬಂದ ಕಷ್ಟಗಳನ್ನೆಲ್ಲಾ ಅನುಭವಿಸುತ್ತ ಅದೇನೆ ಆದರೆ ಈ ಅರ್ಚಕನು ಹೇಳಿದ ಶುಭವು ಉಂಟಾಗುವುದೋ ಇಲ್ಲವೋ ಎಂಬ ಸಂದೇಹವು ನನಗೆ ಉ೦ಟಾಗಿ ಇದೆ. ಆದರೆ, ಈ ಅE: "ಕನು ದೇವರಿಂದ ಪ್ರೇರಿತನಾಗಿ ಈ ರೀತಿಯಲ್ಲಿ ಹೇಳಿರುವನೆಂದು ನೀನು ಇಡುವಿಾನಿಯಸ್ಥನಿಗೆ ಅಪ್ಪಣೆ ಕೊಡಿಸಿದ್ದನ್ನು ಕೇಳಿ, ನನ್ನ ಸಂತೋಷವು ಸಾರಾ ಕಾಷ್ಟ್ರದೆಸೆಯನ್ನು ಹೊಂದುತ್ತಲಿದೆ. ದೇವರ ಸಂಕಲ್ಪವು ನಡೆಯಲೇಬೇಕು, ಅದಕ್ಕೆ ಅನುಸಾರವಾಗಿ ನಡೆಯುವುದು ನಮ್ಮ ಕರ್ತವ್ಯ, ಆ ರೀತಿಯಲ್ಲಿ ನಡೆಯುವುದಕ್ಕೆ ನಾನು ಸಿದ್ದವಾಗಿದೇನೆ.' ಈ ರೀತಿಯಲ್ಲಿ ಟೆಲಿಮಾಕಸ್ಥನು ಹೇಳಿದನು. ಅಷ್ಟರಲ್ಲಿ ಇಡುವಿಾನಿಯ ಸೃನು ಚೇತರಿಸಿಕೊಂಡನು. ಟಿಲಿ ಕಾಕಸ್ಸನನ್ನೂ, ವೆಂಟರನನ್ನೂ ತನ್ನ ಸಹಾಯ ಕ್ರೋಸ್ಕರ ಕಳತ ಸಿದ ಸವೆ: ೯ಶ್ವರನಿಗೆ ವಂದನೆಯನ್ನು ಮಾಡಿದನು, ಸರ್ವರಿಗೂ ಸಂತರ್ಪಣೆಯು ಮಾಡಲ್ಪಟ್ಟಿತು, ಟೆಲಿಮಾಕಸ್ಸನಿಗೂ, ಮೆಂಟಕಿಗೂ ಭೋಜನ ವಾದ ಮೇಲೆ, ಅವರನ್ನು ಕುರಿತು ಇಡುಮಾನಿಯಸ್ಸನು ಹೇಳಿದ್ದೇನಂದರೆ: -- “ ಟ್ರಾಯ್ ದೇಶದಿಂದ ನಾನು ಕ್ರೀಟ್ ದೇಶಕ್ಕೆ ವಾಪಸು ಬಂದಾಗ, ರಾಜನೀತಿ ಗಳ ನಿಯಮಗಳನ್ನು ಕೂಡ ತಿಳಿದುಕೊಂಡಿರಲಿಲ್ಲ. ನನಗೆ ರಾಜತಂತ್ರಗಳ ಗಂಧವೇ ಇರಲಿಲ್ಲ. ಪ್ರಜೆಗಳನ್ನು ಸುಖವಾಗಿಟ್ಟು ಕೊಳ್ಳುವ ಧರ್ಮಸೂಕ್ಷ್ಯಗಳು ನನಗೆ ತಿಳಿಯದೆ ಇದ್ದದ್ದರಿಂದ ಅನೇಕ ತಪ್ಪುಗಳನ್ನು ಮಾಡಿದೆನು, ಶಾಂತಿಯಿಲ್ಲದೆ, ಅನೇಕ ಸಂದರ್ಭಗಳಲ್ಲಿ ನಿರಂಕುಶವಾಗಿ ನಡೆದನು, ಕೋಪತಾಪಗಳಿಗೆ ಅಧೀನನಾಗಿ