ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

115 • • • • . • • • • • . ಸಾರವಾಗಿ ನಡೆದುಕೊಳ್ಳುವದಕ್ಕೆ ಸಿದ್ದ ನಾಗಿನೆ. ನಾನು ಈ ಸಾಂತ್ಯಕ್ಕೆ ಬಂದಾಗ ಈ ಭೂಮಿಯು ಕಾಡುಟಗಳಿ೦ದ ವಾಸಮಾಡಲ್ಪಟ್ಟಿತು. ಇವರು ಷಿಕಾರಿ ಮಾಡಿ ಕಾಡುಮೃಗಗಳನ್ನು ಕೊಂದು ಅವುಗಳನ್ನೂ, ಹಣ, ಗೆಜ್ಜೆ. ಗೆಣಸು ಮೊದವುಗಳನ್ನೂ ತಿಂದು ಬೇಸಿಸುತ್ತಿರು ವನ್ನು ಸಡಗುಗಳನ್ನು ನೋಡಿದ ಕೂಡ೨ ಇವರು ಆ ಪ್ರಾತಿಥ್ಯವನ್ನು ಐ, ಬೆಟ್ಟಗಳಿಗೂ, ಗುಡ್ಡಗಳಿಗೂ ಹೋದರು, ನಾವು ಅವರನ್ನು ಅನುಸರಿಸಿ: ಹೋಗೆವು ಅವರ ಮುಖಂಡರಲ್ಲಿ ಒಬ್ಬನು ನನ್ನನ್ನು ಕುರಿತು ಹೇಳಿದ್ದೇನಂದರೆ: _' ಸಮುದ್ರ ತೀರದ ಪ್ರಾಂತ್ಯಗೆ ಳನ್ನೆಲ್ಲಾ ನಾವು ನಿಮಗೋಸ್ಕರ ಬಿಟ್ಟಿರುತ್ತೇವೆ. ಅವುಗಳನ್ನು ನೀವು ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿರಬಹುದು. ಈ ಬೆಟ್ಟಗಳು ನಮಗೆ ಸಾಕು, ನೀವು ಮೈದಾನ ಗಳಲ್ಲಿರಿ ನಾವು ಈ ಬೆಟ್ಟದ ಪ್ರಾಂತ್ಯದಲ್ಲಿರುತ್ತೇವೆ ನೀವು ಪರದೇಶೀಯರು. ಈ ಪ್ರಾಂತ್ಯ ಗಳನ್ನು ನಿಮಗೆ ಕೊಡುತ್ತೇವೆ, ಅವುಗಳನ್ನು ತೆಗೆದುಕೊಂಡು, ಇಲ್ಲಿ ನೆಲೆಯಾಗಿ ನಿಲ್ಲಿ, ಸಮಾಧಾನದಿಂದ ಇರಿ. ನಾವೆಲ್ಲರೂ ಸಹೋದರಭಾವ ದಿಂದ ಇ ರೋಣ, ನಾವು ಕಾಡುಜನಗಳಾದಾಗ , ಕಾಡುಜನಗಳ, ಊರು ಜನಗಳ ಎಲ್ಲರೂ ಬದುಕಬೇಕೆಂಬುವುದೇ ನಮ್ಮ ಮುಖ್ಯ ಉದ್ದೇಶ, ನಾವು ಭಯದಿಂದ ಈ ತೀರ ದೇಶವನ್ನು ಬಿಟ್ಟು ಬೆಟ್ಟಗಳ ಕಡೆಗೆ ಹೋಗುತ್ತೇವೆಂದು ತಿಳಿದುಕೊಳ್ಳಬೇಡಿ ನೀವು ನಿರ್ಭಯವಾಗಿ ಈ ತೀರದೇಶದಲ್ಲಿರಿ ಎಂದ, ನಾವೆ ಲ್ಲರೂ ಪರಸ್ಪರ ಪ್ರೀತಿಯಿಂದ ಬದುಕುವ ಸಂಭವವು ಉಂಟಾಗಲೆಂದೂ ನಾವು ಈ ಪ್ರಾಂತ್ಯಕ್ಕೆ ಹೋಗುತ್ತಿದ್ದೇವೆ. ಎಂದು ಹೇಳಿದನು. ಕಾಡುಜನಗಳಾದಾಗ್ಯೂ, ಇವರು ಅಸಾಧಾರಣವಾದ ಶಾಂತಿಯನ್ನು ತೋರಿ ಸಿದರು. ಇದು ನನಗೆ ತು೦ ತಾ ಸಂತುಷ್ಟಿ ಯನ್ನು ೦ಟುಮಾಡಿತು, ನನ್ನ ಆಧಿಕಾ ಗಳಿಗೆ ಇದು ತೋರಲಿಲ್ಲ, ತಾವು ಈ ದೇಶಕ್ಕೆ ಪ್ರಭುಗಳಾಗಿದ್ದರೆ ಹೇಗೋ ಹಾಗೆ ಈ ಕಾಡುಜನಗಳು ತಿಳಿದುಕೊಂಡಿರುವರೆಂಬದಾಗಿಯ, ಇವರನ್ನು ಜಯಿಸಿ, ಈ ದೇಶವನ್ನು ತೆಗೆದುಕೊಳ್ಳುವುದು ಕರ್ತವ್ಯವೆಂಬದಾಗಿಯ, ಹಾಗೆ ಚಯಿಸುವುದು - ಬಹಳ ಸುಲಭವೆಂಬದಾಗಿಯೂ, ಅವರ ಉಪಕಾರಕ್ಕೆ ನಾವು ಬದ್ಧರೆಂಬ ಪ್ರತ್ಯಯಕ್ಕೆ ಅವಕಾಶ ಕೊಡುವುದು ತಪ್ಟೆಂಬದಾಗಿಯೂ, ಈ ದೇಶವನ್ನು ನಾವು ಅವರಿಂದ ಗೆದ್ದು ಇಲ್ಲಿ ಪ್ರಭುತ್ವವನ್ನು ಮಾಡುತ್ತೇವೆಂಬ ಅಭಿಪ್ರಾಯವನ್ನು ೦ಟುಮಾಡಬೇಕೆಂಬದು