ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13!! “ಈ ದೇಶವು ಬಹಳ ಫಲವತ್ತಾದದ್ದು, ಈ ಯುದ್ಧಕ್ಕೆ ತೊಡಗಿರುವ ಉಭಯ ಕಕ್ಷಿಯವರೂ ಸುಖವಾಗಿರುವುದಕ್ಕೆ ಬೇಕಾದ ಸಂಪತ್ತುಗಳನ್ನೆಲ್ಲಾ ದೇವರು ನಿಮಗೆ ದಯಪಾಲಿಸಿರುತ್ತಾನೆ. ಈ ಸಂಪತ್ತನ್ನು ಅನುಭವಿಸುವ ಮಾರ್ಗ ಮಾತ್ರ ನಿಮಗೆ ಸಂಪೂರ್ಣವಾಗಿ ಗೊತ್ತಾಗಿರುವಂತೆ ತೋರುವುದಿಲ್ಲ, ಇದಕ್ಕಾಗಿ ನಾನು ತುಂಬಾ ವ್ಯಸನಪಡುತ್ತೇನೆ. ನಿಮ್ಮ ಹಕ್ಕು ಬಾಧ್ಯತೆಗಳ ರಕ್ಷಣೆಗೋಸ್ಕರ ಯುದ್ಧ ಮಾಡು ವುದಕ್ಕೆ ನೀವು ಬಂದಿರುತ್ತೀರಿ. ಇದು ನಿಮ್ಮ ಕರ್ತವ್ಯವೇ ಸರಿ, ಧರ್ಮಕ್ಕೆ ಲೋಸ ಬಂದರೆ ಶಾಂತಿಯು ಪರಿತ್ಯಾಗ ಮಾಡಲ್ಪಡಬೇಕು, ಅಧರ್ಮಪ್ರವರ್ತಕರು ತಿದ್ದಲ್ಪಡಬೇಕು. ಹಾಗೆ ತಿದ್ದುವುದು ಅಸಾಧ್ಯವಾದರೆ ಅವರನ್ನು ಮೂಲೋತ್ಪಾ ಟನ ಮಾಡಬೇಕು, ಹಾಗೆ ಮಾಡುವುದು ಅಸಾಧ್ಯವಾದರೆ ಧರ್ಮಸಂಸ್ಥಾಪನೆ ಗೋಸ್ಕರ ದೇಹವನ್ನಾ ದರೂ ಬಿಡಬೇಕು, ಇದೇ ನಿಮ್ಮ ಮುಖ್ಯ ಉದ್ದೇಶವೆಂದು ತೋರುತ್ತದೆ. ನಿಮ್ಮ ಮನೋಭಾವವು ಧರ್ಮವಾದದ್ದು, ನೀವು ಧರ್ಮಸಂ ಸ್ಥಾಪನೆಗೊಸ್ಕರ ದಂಡೆತ್ತಿ ಬಂದಿರುತ್ತೀರಿ, ನಿಮ್ಮ ಪ್ರಯತ್ನ ವನ್ನು ದೇವರು ಮೆಚ್ಚಿರುವನು. ನಾನೂ ಮೆಚ್ಚಿರುತ್ತೇನೆ. ಇಂಥಾ ಕೆಲಸಗಳನ್ನು ಮಾಡುವುದು ಅವಶ್ಯಕ, ಆದರೆ ಹೀಗೆ ಮಾಡುವುದರಲ್ಲಿ ಯುದ್ಧ ಮಾಡದೆ, ಅರ್ಥಹಾನಿ, ಪ್ರಾಣ ಹಾನಿ, ಮಾನಹಾನಿಗಳಾಗದಂತೆ ಮಾಡುವುದು ಸಾಧ್ಯವಾದರೆ ಯುದ್ಧವನ್ನು ಮಾಡಬಾರದು, ನಿಮ್ಮಲ್ಲಿ ಮಹಾಮಹಿಮೆಯುಳ್ಳವರು ಅನೇಕರಿರುತ್ತೀರಿ, ನೆಸ್ಟ್ ರನು ಇಲ್ಲಿರುವನು. ಎಲೈ ನೆಸ್ಟರೇ, ಮುಂದಕ್ಕೆ ಬಾ, ಇವರಲ್ಲೆಲ್ಲಾ ವಯ ಸ್ಸಿನಲ್ಲಿಯೂ, ಜ್ಞಾನದಲ್ಲಿಯೂ ನೀನು ವೈದನು. ಯುದ್ಧದಿಂದಾಗತಕ್ಕ ಅನರ್ಧಗಳನ್ನೆಲ್ಲಾ ನೀನು ಬಲ್ಲೆ, ಯುದ್ಧವು ಎಲ್ಲಾ ಕೇಡುಗಳಲ್ಲಿಯೂ ಅತ್ಯಂತ ಅನರ್ಧ ಕಾರಿಯಾದ ಕೇಡಾಗಿರುತ್ತದೆ. ನಿಧಿಯಿಲ್ಲದೆ ಇದ್ದರೆ ಯುದ್ಧಮಾ ಡಬೇಕು. ಯುದ್ಧ ಮಾಡದೆ ಉಭಯ ಪಂಗಡದವರೂ ಧರದಿಂದ ನಡೆ ಯುವುದು ಸಾಧ್ಯವಾದರೆ ಯುದ್ಧಕ್ಕೆ ಅವಕಾಶವನ್ನು ಕೊಡಬಾರದು. ಟ್ರಾಮ್ ಸಾಸದಲ್ಲಿ ಹತ್ತು ವರ್ಷಗಳು ಯುದ್ಧವು ನಡೆಯಿತು, ಕೋಟ್ಯಂತರ ಜನಗಳು ಸತ್ತರು, ಕೋಟ್ಯಂತರ ಸ್ತ್ರೀಯರು ನಿತಂತುಗಳಾದರು. ಅನೇಕ ಕೋಟಿ ಮಕ್ಕಳು ಅನಾಥರಾದರು, ವೀರಾವೇಶದಿಂದ ಯುದ್ಧಮಾಡಿ, ಯೋಧರು ಏಟುಗಳನ್ನು ತಿಂದು, ಪ್ರಾಣಹೋಗುವುದಕ್ಕೆ ಮುಂಚೆ ಎಷ್ಟು ಯಾತನೆಯನ್ನು - ೧ ಕಿ. 11