ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1340 \ \\\ \ P ಆ \ + ಅನುಭವಿಸಿದರೋ ಅದನ್ನು ನೀನು ಸಾಕ್ಷಾತ್ಕಾಗಿ ನೋಡಿರುವಿ, ಮಹಾಪರಾಕ್ರಮ ಶಾಲಿಯಾದ ಹೆಕ್ಟರನು ಪ್ಲೇಗ್ ಮೊದಲಾದ ಭಯಂಕರವಾದ ರೋಗಗಳಂತೆ ಗ್ರೀಸ್ ದೇಶೀಯರನ್ನು ಹೇಗೆ ಸಂಯುಸಿದನೋ ಅದು ನಿನಗೆ ವೇದ್ಯವೇ ಇರುತ್ತದೆ. ಯು ದಕ್ಕೆ ತೊಡಗಬೇಡಿ. ಈ ವಿಷಯದಲ್ಲಿ ದುಡುಕಬೇಡಿ, ಯುದ್ಧದಲ್ಲಿ ಗೆದ್ದಾಗ ಸೋತಂತಾಗುವುದು. ಸೋತರೆ ಸತ್ತಂತಾಗುವುದು. ಇಡುವಿಾನಿಯಸ್ಸನು ಸಾಮಾ ನ್ಯನಲ್ಲ: ಟ್ರಾಯ' ಯುದ್ದದಲ್ಲಿ ಅವನು ತೋರಿಸಿರತಕ್ಕ ಧೈರ್ಯವನ್ನೂ, ಅವನು ಮಾಡಿರತಕ್ಕ ಸಾಹಸ ಕೃತ್ಯಗಳನ್ನೂ ನೀನು ಪ್ರತ್ಯಕ್ಷವಾಗಿ ನೋಡಿರುವಿ, ಸಹೋ ದರಭಾವದಿಂದಲೂ ನಡೆದುಕೊಳ್ಳುವುದು ಉಭಯ ಪಂಗಡದವರಿಗೂ ಶ್ರೇಯಸ್ಕರವಾ ದದ್ದು, ದುಡುಕಿದರೆ ಉಭಯ ಪಂಗಡ ಕ ಅಶ್ರೇಯಸ್ಸುಂಟಾಗುವುದು. ಇಡು ಮಾನಿಯಸ್ಸನು ಪ್ರಾಮಾಣಿಕನು, ಇವನು ವಂಚಕನಲ್ಲ, ಇವನು ದ್ರೋಹಿಯೆಂದು ನೀವು ತಿಳಿದುಕೊಂಡಿರುವಿರಿ, ಕಾಡುಜನಗಳೊಡನೆ ಮಾಡಲ್ಪಟ್ಟ ಕೌಲನ್ನು ಇವನು ಉಲ್ಲಂಘಿಸಿದನೆಂದು ನೀವು ತಿಳಿದುಕೊಂಡಿರುವಿರಿ. ಇದು ನಿಜವಲ್ಲ, ಇವನು ಮಾಡಿಕೊಂಡ ಕೌಲು ಪ್ರಚಾರ ಮಾಡಲ್ಪಡುವುದಕ್ಕೆ ಮುಂಚೆಯೇ ಇವನ ಸೇನಾನಾ ಯಕರು ಈ ಕಾಡುಜನಗಳ ಮೇಲೆ ಬಿದ್ದು ಯುದ್ಧವನ್ನು ಮಾಡಿದರು, ಅವರಿಗೆ ಈ ಕೌಲಿನ ವಿಷಯವು ತಿಳಿದಿರಲಿಲ್ಲ, ಅದಕ್ಕಾಗಿ ಇಡು ವಿಾನಿಯಸ್ಸನು ವ್ಯಸನ ವುಳ್ಳವನಾಗಿರುತ್ತಾನೆ. ಈ ಕಾಡುಜನಗಳು ಕೇವಲ ಪ್ರಾಮಾಣಿಕರೆಂಬದಾಗಿಯೂ, ತನ್ನ ಹಡಗು ಇಲ್ಲಿಗೆ ಬಂದ ಕೂಡಲೇ, ಫಲವತ್ತಾದ ದೇಶಗಳನ್ನೆಲ್ಲಾ ತನಗೆ ಬಿಟ್ಟು, ಕಾಡುಗಳಲ್ಲಿಯೂ, ಮೇಡುಗಳಲ್ಲಿಯ ವಾಸಮಾಡುವುದಕ್ಕೆ ಹೋಗುವುದಕ್ಕೂ ಅವರು ಸಿದ್ದರಾದರೆಂಬವಾಗಿಯ, ತಾನು, ತನ್ನ ವರೂ ಈ ದೇಶದಲ್ಲಿರುವುದಕ್ಕೆ ಅವ ಕಾಶ ಕೊಟ್ಟರೆಂಬದಾಗಿಯ, ಇವನು ತಿಳಿದುಕೊಂಡಿರುವನು. ಉಪಕಾರಕ್ಕೆ ಅಪಕಾರ ಮಾಡಿದರೆಂಬ ಅಪಯಶಸ್ಸಿಗೆ ಭಯಪಡುವನೇ ಹೊರತು, ಯುದ್ದ ಮಾಡು ವುದಕ್ಕೆ ಭಯಪಡುವುದಿಲ್ಲವೆಂಬದಾಗಿಯ ಇಡುವಿ ತಾನಿಯಸ್ಸನು ಹೇಳುತ್ತಾನೆ. ಇದು ನಿಜವಾದ ಮಾತು. ಅವನ ಮಾತನ್ನು ನಾನು ನಂಬುತ್ತೇನೆ. ಪ್ರಮಾದದಿಂದ ಸನ್ನಿಹಿತವಾಗಿರುವ ಈ ಯುದ್ಧದಿಂದ ಪರಾ೦ಗು ಖರಾಗಿ ಉಭಯ ಕಕ್ಷಿಯವರಿಗೂ ಧರ್ಮವಾಗಿ ತೋರುವ ಕಿಲು ಮಾಡಲ್ಪಡು, ಈ ಯುದ್ಧವೆಂಬ ಮಯಾಜಾಡ್ಯದ ಹಾವಳಿಯು ನಿಲ್ಲಿಸಡಲಿ. ಉ ಭಯ ಕಕ್ಷ್ಮಿಯವರೂ ಈ ಯುದ್ಧದಿಂದ ಉಂಟಾ