ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1:3 ಗತಕ್ಕ ಅನರ್ಧಗಳನ್ನು ತಪ್ಪಿಸಿಕೊಂಡು, ಶಾಂತಿಯಿಂದ ಬದುಕುವುದಕ್ಕೆ ಅವಕಾಶವು ಮಾಡಲ್ಪಡಲಿ.” ಈ ರೀತಿ ಯಲ್ಲಿ ಮೆಂಟರನು ಹೇಳಿದನು. ಇವನು ಯಾರಾಗಿರಬಹುದೆಂದು ಸೇನಾನಾಯಕರೆಲ್ಲರೂ ಇವನನ್ನು ದುರುಗುಟ್ಟಿಕೊಂಡು ನೋಡಿದರು. ಸ್ವಲ್ಪ ಹೊತ್ತಿನಲ್ಲಿ ನೆಸ್ಟರಿಗೆ ಇವನೇ ಮೆಂಟರೆಂದು ಗೊತ್ತಾಯಿತು, ಅವನ ಬಳಿಗೆ ಬಂದು, ಅತ್ಯಂತ ಸಂತೋಷದಿಂದ ಅವರಿಗೆ ನಮಸ್ಕಾರವನ್ನು ಮಾಡಿದನು. ಅನಂತರ ಅವನಿಗೆ ಹೇಳಿದ್ದೇನಂದರೆ-'ಎಲೈ ಮೆಂಟರನೇ, ಇಲ್ಲಿ ನಿನ್ನನ್ನು ನೋಡುವ ಭಾಗ್ಯವು ನನಗೆ ಲಭ್ಯವಾಗುವುದೆಂದು ನಾನು ಭಾವಿಸಿರಲಿಲ್ಲ. ನಿನ್ನನ್ನು ನೋಡಿ ಅನೇಕ ವರ್ಷಗಳಾದವು. ನೀನು ಆಗ ಹುಡುಗನಾಗಿದ್ದೆ, ಈಚೆಗೆ ದಿಗಂತವಿಶ್ರಾಂತ ವಾದ ನಿನ್ನ ಮಹಿಮೆಯನ್ನು ಕೇಳಿರುವೆನು, ನೀನಿಲ್ಲಿಗೆ ಬರುವುದಕ್ಕೆ ಕಾರಣವೇನು? ಈ ಯುದ್ಧವನ್ನು ನಿಲ್ಲಿಸುವ ಸಂಭವವು ನಿನಗೆ ಹೇಗೆ ಉಂಟಾಯಿತು? ಇಡುಮಿನಿ ಯಸ್ಥನ ಮೇಲೆ ನಮಗೆ ದ್ವೇಷವಿಲ್ಲ. ನಾವು ದಂಡೆತ್ತಿ ಬರುವುದಕ್ಕೆ ಅವನ ದೌರಾ ತ್ಮವೇ ಮುಖ್ಯ ಕಾರಣ, ನಾವು ಸಮಾ ಧಾನವನ್ನು ಕೇಳಿದೆವು, ಅದಕ್ಕಿಂತಲೂ ಹೆಚ್ಚಾಗಿ ನಮಗೆ ಬೇಕಾದದ್ದೇನೂ ಇಲ್ಲ. ಇವನು ಸಮಾಧಾನಕ್ಕೆ ಒಪ್ಪಲಿಲ್ಲ. ಇವನನ್ನು ನಾಶಮಾಡಿದ ಹೊರತು ಸಮಾಧಾನವಾಗುವುದಿಲ್ಲ. ಇವನು ಕೌಲುಗಳ ನ್ನೆಲ್ಲಾ ಉಲ್ಲ೦ತಿಸಿರುವನು, ಇವನಿಗೆ ಶಿಕ್ಷೆ ಮಾಡುವುದಕ್ಕೋಸ್ಕರ ನಾವೆಲ್ಲರೂ ಒಗ್ಗಟ್ಟಾಗಬೇಕಾಯಿತು. ಇವನು ದುರಾಶೆ ಎಂಬ ವಿಶಾಚದಿಂದ ಹಿಡಿಯಲ್ಪಟ್ಟಿರು ವನು, ಇವನಿಗೆ ಬೇಕಾದಹಾಗೆ ಸಂಸತ್ತಿರುವುದು, ವಿಶಾಲವಾದ ರಾಜ್ಯ ವಿರು ವುದು, ಇದನ್ನೆಲ್ಲಾ ಅನುಭವಿಸಿಕೊಂಡು ಸುಖವಾಗಿರಬಹುದು, ಅಂಥಾ ಸುಖವು ಇವನಿಗಿರುವುದಿಲ್ಲ. ನೆರೆಹೊರೆಯವರೆಲ್ಲರೂ ದಾಸರಾಗಿರಬೇಕೆಂಬ ಅಭಿನಿವೇಶವು ಇವನಿಗಿರುವುದು, ಅವರು ದಾಸರಾದ ಹೆರತು ತನಗೆ ಸುಖವಿಲ್ಲವೆಂದು ಇವನು ತಿಳಿದುಕೊಂಡಿರುವನು. ಇವನನ್ನು ನಂಬುವುದು ಕಷ್ಟ, ನಂಬಿಸಿ ವಂಚಿಸುತ್ತಾನೆ. ಹೀಗೆ ನಾವು ತಿಳಿದುಕೊಂಡು ಇಧೇವೆ. ಇದು ನಮ್ಮ ಅಭಿಪ್ರಾಯ. ಇದಕ್ಕೆ ಭಿನ್ನ ವಾದ ಅಭಿಪ್ರಾಯವು ನಿನಗಿರುವ ಪಕ್ಷದಲ್ಲಿ, ನಿನ್ನಾಜ್ಞೆಯಂತೆ ನಡೆಯುವುದಕ್ಕೆ ನಾವು ಸಿದ್ದರಾಗಿದ್ದೇವೆ. ಧರ್ಮಿಷ್ಟರಲ್ಲಿ ನೀನು ಅಗ್ರಗಣ್ಯನು, ನಿನ್ನ ಸತ್ಯಸಂಧತೆ ಯನ್ನು ನೋಡಿ ದೇವತೆಗಳೂ ಕೂಡ ಮೆಚ್ಚುತ್ತಾರೆ, ನಿನ್ನ ಶಾಂತಿ, ದಾಂತಿ ಲೋಕ