ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

131) •° ವ್ಯವಹಾರಜ್ಞಾನ ಮೊದಲಾದವುಗಳನ್ನು ತಿಳಿದುಕೊಂಡು, ಲೋಕವೆಲ್ಲಾ ಕೊಂಡಾಡು ತಲಿದೆ. ಇಂಥಾ ಮಹಾನುಭಾವನಾದ ನೀನು ಇಡುವಿಾನಿಯಸ್ಥನ ಪುಣ್ಯ ಪರಿಪಾಕ ದಿಂದ ಬಂದಿರುವ ಎಂದು ತೋರುತ್ತದೆ. ನಿನ್ನ ಇಷ್ಟದಂತೆ ನಡೆಯುವುದಕ್ಕೆ ನಾವು ಸಿದ್ದರಾಗಿರುತ್ತೇವೆ. ನಿನ್ನ ವೃತ್ತಾಂತವನ್ನು ತಿಳಿದುಕೊಳ್ಳಬೇಕೆಂದು ನಾನು ಅತ್ಯಂತ ಕುತೂಹಲವುಳ್ಳವನಾಗಿರುತ್ತೇನೆ, ನಮ್ಮ ಸೇನಾನಾಯಕರೂ ಮತ್ತು ಸೈನಿಕರೂ ಕೂಡ ಈ ವೃತ್ತಾಂತವನ್ನು ತಿಳಿದುಕೊಳ್ಳ ಬೇಕೆಂಬ ಅಭಿಲಾಷೆಯುಳ್ಳವರಾಗಿರುವರು. ದಯವಿಟ್ಟು ನೀವು ಇಲ್ಲಿಗೆ ಬರುವುದಕ್ಕೆ ಕಾರಣವೇನೋ ಅದನ್ನು ತಿಳಿಸು.” ಈ ರೀತಿಯಲ್ಲಿ ನೆಸ್ಟರನು ಕೇಳಲು, ಮೆಂಟರು ಪ್ರತ್ಯುತ್ತರವನ್ನು ಕೊಟ್ಟಿದ್ದೇನಂದರೆ:- “ ಎಲೈ ನೆಸ್ಟರನೇ, ಯಲಿಸಸ್ಸನು ಅವನ ಮಗನ ಯೋಗಕ್ಷೇಮವನ್ನು ನನಗೆ ಒಪ್ಪಿಸಿದನು, ಈತನು ತಾನು ತಂದೆಯನ್ನು ಹುಡುಕಿಕೊಂಡು, ಪೈಲಾಸ ಪಟ್ಟಿ ಣಕ್ಕೆ ಬಂದಾಗ, ಅವನಿಗೆ ನಿನ್ನ ಸಂದರ್ಶನವು ಆಯಿತು, ಅವನನ್ನು ನೀನು ವಿಶೇಷ ವಾಗಿ ಆದರಿಸಿದೆ. ಅವನ ಜೊತೆಯಲ್ಲಿ ಮಾರ್ಗದರ್ಶನವನ್ನು ಮಾಡುವುದಕ್ಕೋಸ್ಕರ ನಿನ್ನ ಮಗನನ್ನು ಕಳುಹಿಸಿಕೊಟ್ಟೆ, ಅಲ್ಲಿಂದ ಈ ಟೆಲಿಮಾಕಸ್ಸನು ಅವನ ತಂದೆಯನ್ನ ಹುಡುಕಿಕೊಂಡು, ಸಿಸಿಲಿ, ಈಜಿಪ್ಟ್, ಸೈಪ್ರಸ್, ಕ್ರೀಟ್' ಮೊದಲಾದ ದೇಶಗಳಿಗೆ ಪ್ರಯಾಣ ಮಾಡಿದನು. ಇಥಾಕಾ ಪಟ್ಟಣಕ್ಕೆ ವಾಪಸು ಹೋಗಬೇಕೆಂದು ನಾವು ಉದ್ದೇಶ ಮಾಡಿದ್ದೆವು. ದೈವಯೋಗದಿಂದ ಇಥಾಕಾ' ಪಟ್ಟಣಕ್ಕೆ ಹೋಗುವುದಕ್ಕೆ ಬದಲಾಗಿ, ನಾವು ಇಲ್ಲಿಗೆ ಬರಬೇಕಾಯಿತು. ಈಗ ಸನ್ನಿಹಿತವಾಗಿರತಕ್ಕ ಯುದ್ಧದ ಅನರ್ಥವನ್ನು ತಪ್ಪಿಸುವುದಕ್ಕೋಸ್ಕರ ನಾವಿಲ್ಲಿಗೆ ಬಂದಂತಾಯಿತೆಂದು ತೋರುತ್ತದೆ. ಇಡುವಿಾನಿಯಸ್ ನಲ್ಲಿ ನಿಮಗೆ ನಂಬಿಕೆಯು ಹೋಗಿರುವುದು. ಆದರೆ, ಯುಲಿಸಸ್ಸನ ಮಗನಲ್ಲಿಯೂ, ನನ್ನಲ್ಲಿ ನಿಮಗೆ ನಂಬಿಕೆಯು ಇರಬಹುದು, ನಾವು ಜಾಮಿ ನುದಾರರಾದರೆ, ಅದರ ಮೇಲೆ ಮಾಡಲ್ಪಟ್ಟ ಕೌಲು ನಡೆಯಬಹುದೆಂದು ನಿಮಗೆ ನಂಬಿ ಕೆಯು ಇರಬಹುದು, ಹಾಗಿದ್ದ ಪಕ್ಷದಲ್ಲಿ, ಇಡುವಿಾನಿಯಸ್ಸನು ಈ ಕೌಲಿನ ಒಡ ಬಡಿಕೆಗೆ ಅನುಸಾರವಾಗಿ ನಡೆಯುವಂತೆ ಮೂಡುವುದಕ್ಕೆ ನಾವು ಸಿದ್ಧರಾಗಿರುತ್ತೇವೆ. ಇದಕ್ಕೆ ನಾವು ಜಾಮೀನುದಾರರಾಗುತ್ತೇವೆ. ಈ ವಿಷಯವು ಸಾವಧಾನವಾಗಿ ಪರ್ಯಾಲೋಚಿಸಲ್ಪಡಲಿ.” ಈ ರೀತಿಯಲ್ಲಿ ಮೆಂಟರನು ಹೇಳಿದನು. ಇವರು ಮಾತನಾಡುತ್ತಿರುವಾಗ,