ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

133 ಇಡುವಿಾನಿಯಸ್ಸನ್, ಟೆಲಿಮಾಕಸ್ಸ ನ ಕೋಟೆಯ ಮೇಲಿನಿಂದ ನೋಡುತ್ತಿದ್ದರು. ಮೆಂಟರನ ಸಂದೇಶವು ಹೇಗೆ ಕಾಣಲ್ಪಡುವುದೋ ಎಂದು ವಿಚಾರವರರಾಗಿದ್ದರು. ಅವನ ಜೊತೆಯಲ್ಲಿ ತಾವೂ ಇದ್ದಿದ್ದರೆ ಚನ್ನಾಗಿತ್ತೆಂದು ಅವರು ಎಸಿ ದರು. ಮೆಂಟರು ಹೇಳಿದ ಮಾತುಗಳು ನೆಸ್ಟರನ ಬ'ಯಲ್ಲಿದ್ದವರಿಗೆ ಸ್ಪಷ್ಟವಾಗಿ ಗೊತ್ತಾ? ದಾಗ್ಯೂ, ದೂರದಲ್ಲಿದ್ದ ಯೋಧರಿಗೆ ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಈ ವಿದ್ಯಮಾನ ಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವು ಅವರಿಗೂ ಉ೦ಟಾಯಿತು. ಉಭಯ ಸೈನ್ಯದವರೂ ಯುದ್ಧಕ್ಕೆ ಸಿದ್ಧರಾಗಿದ್ದರು, ಎಲ್ಲರ ದೃಷ್ಟಿ ಗಳೂ ನೆಸ್ಟರು ಮತ್ತು ಮೆಂಟರುಗಳ ಮೇಲೆ ಬಿದ್ದಿದ್ದವು. ಮೆಂಟಿನಲ್ಲಿ ನೆಸ್ಟರು ವಿಶೇಷ ಗೌರವವನ್ನು ತೋರಿಸಿದನು. ಅವನನ್ನು ನೋಡಿ ಸಮಾಧಾನವಾಗಬಹುದೆಂಬ ಕೋರಿಕೆ ಉಭಯ ಕಕ್ಷಿ ಯವರಿಗೂ ಉಂಟಾಯಿತು. ನೆಸ್ಟರು ವಯೋವೃದ್ಧನಾಗಿಯೂ, ಜ್ಞಾನವೃ ದ್ವ ನಾಗಿಯ ಇದ್ದನು. ಗ್ರೀಸ್ ದೇಶದ ಪ್ರಭುಗಳೆಲ್ಲರೂ ಅವನಲ್ಲಿ ಅಸಾಧಾರಣ ವಾದ ಭಕ್ತಿಯುಳ್ಳವರಾಗಿದ್ದರು, ಅವನು ಸರ್ವತೋಮುಖವಾದ ಪ್ರಜ್ಞೆಯುಳ್ಳವ ನಾಗಿಯ, ವಾಗ್ನಿಗಳಲ್ಲಿ ಅಗ್ರಗಣ್ಯನಾಗಿಯೂ ಇದ್ದು, ಟ್ರಾಯ್ ಯುಗ್ನ ದಲ್ಲಿ ಎಕಿಲೀಸನ ಕೋಪಾಟೋಪವನ್ನು ನಿಲ್ಲಿಸಿದವನೇ ಇವನು, ಅಗಮೆಮ್ಮ ನ ಅಖರ್ವವಾದ ಗರ್ವವನ್ನು ನಿಲ್ಲಿಸಿದವನಿವನು, ಏಜಾಕ್ಸಿನ ರೌದ್ರವನ್ನು ಅಡಗಿಸಿದವ ನಿವನು, ಡಯೋಮಿಡೀಸಿನ ದುಡುಕನ್ನು ಅಡಗಿಸಿದವನಿವನು, ಮನೋಹರವಾಗಿ ಮಾತನಾಡತಕ್ಕ ವರಲ್ಲಿ ಇವನು ಅಗ್ರಗಣ್ಯನಾಗಿದ್ದನು, ಇವನ ಮುಖದಿಂದ ಮಾತು ಗಳು ಜೇನುತುಪ್ಪದಂತೆ ಸುರಿಯುತ್ತಿದ್ದವು. ಪ್ರತಿಕಕ್ಷಿಗಳೂ ಕೂಡ ಇವನು ಹೇಳಿ ದ್ದಕ್ಕೆ ವಿರೋಧವಾಗಿ ನಡೆಯುತ್ತಿರಲಿಲ್ಲ, ಇವನು ಮಾತನಾಡುವುದಕ್ಕೆ ಉಪಕ್ರಮಿ ಸಿದರೆ ಎಲ್ಲರೂ ಮೌನವನ್ನವಲಂಬಿಸುತ್ತಿದ್ದರು. ಇವನು ಅಭಿಪ್ರಾಯವನ್ನು ಕೊಟ್ಟ ಕೂಡಲೇ ವಾಗ್ವಾದಗಳು ನಿಂತುಹೋಗುತ್ತಿದ್ದವು. ತಪ್ಪು ಅಭಿಪ್ರಾಯಗಳ ದೋ ಷವನ್ನು ಯಾರಿಗೂ ಅಸಮಾಧಾನವಾಗದಂತೆ ತೋರಿಸುವುದರಲ್ಲಿ ಇವನು ನಿಸ್ಸಿಮ ನಾಗಿದ್ದನು. ಗುಣೈಕಪಕ್ಷಪಾತಿಯಾದದ್ದರಿಂದ ಎಲ್ಲಾ ಕಕ್ಷಿಯವರೂ ಇವನಲ್ಲಿ ಅನುರಕ್ತರಾಗಿರುತ್ತಿದ್ದರು. ಸೂರ್ಯನಿಗೆ ಅಭಿಮುಖವಾದ ಚಂದ್ರಬಿಂಬವು ಹೇಗೆ ಸ್ವಕೀಯವಾದ ತೇಜಸ್ಸನ್ನು ಕಳೆದು ಕೊಳ್ಳುವುದೋ ಹಾಗೆ ನೆಂಟರನ ಅಭಿಮುಖ ನಾದ ನೆಸ್ಟರನ ತೇಜಸ್ಸು ಈ ರೀತಿಯಲ್ಲಿ ಪರಿಣಮಿಸಿತು. ಗ್ರೀಸ್ ದೇಶದ ಮುಖಂ