ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1:34 ಡರೂ, ಕಾಡುಜನಗಳ ಮುಂಡರೂ ಈ ಉಭಯ ಕಕ್ಷಿಯವರೂ ಕೂಡ ಮೆಂಟರನ ಮಾತುಗಳನ್ನು ಕೇಳಿ ನಿಸ್ಮಿತರಾದರು, ಸಕಲ ಧರ್ಮಗಳಿಗೂ ನಿಧಿಯಾದ ನೆಸ್ಟರನೂ ಕೂಡ ಸಿಕ್ಕಿತನಾದನು, ಉಭಯ ಪಕ್ಷದವರಿಗ ಕ್ಷೇಮಕರಾದ ಹೀಗಳು ನಯಾಗದ ಪ್ರವಾಹದಂತೆ ಮೆಂಟರನಿಂದ ಹೊರಡಲು ಎಲ್ಲರೂ ತಲೆದೂಗಿದರು. ಗ್ರೀಸ್ ಜನಗಳು ಹೇಗೋ ಹಾಗೆ ಕಾಡುಜನಗಳೂ ಕೂಡ ಇಡುವಿರಾಸಿಯಸ್ಸನು ನಂಬಿಕೆಗೆ ಅನ ರ್ಹನೆಂಬದಾಗಿಯ, ಅವನನ್ನು ಮಲೋತ್ಪಾಟನ ಮಾಡಬೇಕು ಅಥವಾ ಆ ಪ್ರಯ ತ್ಯದಲ್ಲಿ ಹವನ್ನಾದರೂ ಬಿಡಬೇಕು ಎಂದು ನಿಷ್ಕ ರ್ಸೆ ಮಾಡಿಕೊಂಡಿದ್ದರು. ಮೈ ನಾಸನ ಗುಣಗಳು ಇಡುಮೀನಿಯಸ್ಸಿನಲ್ಲಿ ಇರುವುವೆಂಬದಾಗಿಯ, ಪರಿವಾರದೇವ ತೆಗಳ ವಂಚಕ ಬುದ್ಧಿಯಿಂದ ಅವನಿಗೆ ಆಪಕಿ (ರ್ತಿಯು ಒ೦ರ್ದಿುವದೆಂಬದಾಗಿಯೂ, ಅವನು ಧರ್ಮದಿಂದ ನಡೆದುಕೊಳ್ಳುವುದಕ್ಕೆ ತಾನ, ಟೆಲಿಮಾಕಸ್ಸನೂ ಜಾವಿಾನು ದಾರರಾಗಿ ಆಗುವುದಾಗಿಯ ಮೆಂಟರು ಹೇಳಿದ ಕೂಡಲೇ, ನೆಸ್ಟರು ಮೊದಲಾದ ಪ್ರತಿಕಕ್ಷ್ಮಿ ಪಂಗಡದವರೆಲ್ಲರೂ ಇಡು - ತಾನಿಯಸ್ಥನಿಗೆ ಮಂಗಳವಾಗಲಿ, ಅವನಲ್ಲಿ ಅಪನಂಬಿಕೆಯನ್ನು ನಾವು ಬಿಟ್ಟೆವು. ನಿಮ್ಮ ಆಜ್ಞಾನುಸಾರವಾಗಿ ನಡೆಯುವುದಕ್ಕೆ ನಾವು ಸಿದ್ದವಾಗಿರುತ್ತೇವೆ' ಎಂದು ಹೇಳಿದರು. ಹನ್ನೊಂದನೆಯ ಅಧ್ಯಾಯ ಟೆಲಿಮಾಕಸ್ಸನು ಮೆಂಟರು ಮತ್ತು ನೆಸ್ಟರನನ್ನು ನೋಡುತ್ತಾ ಸ್ವಲ್ಪ ಹೊತ್ತು ಕಳೆದನು, ಅವರ ಸಂಭಾಷಣದ ಫಲಿತಾಂಶವು ಗೊತ್ತಾಗಲಿಲ್ಲ. ಅವರ ಬಳಿಗೆ ಹೋಗಬೇಕೆಂದು ಸಂಕಲ್ಪ ಮಾಡಿದನು, ಕೋಟೆಯ ಬಾಗಿಲನ್ನು ತೆಗೆಸಿದನು. ಸಮಾಧಾನದ ಬಾವುಟವನ್ನು ಪರಿಗ್ರಹಿಸಿ, ನೆಸ್ಟರನ ಬಳಿಗೆ ಹೋಗಿ, ಅವನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿದನು, ಇವನನ್ನು ನೋಡಿದ ಕೂಡಲೆ ನೆಸ್ಟರು ಪರಮಾನಂದ ಭರಿತನಾಗಿ, ಅವನ ಬಳಿಗೆ ಹೋಗಿ, ಅವನನ್ನು ಆಲಿಂಗನ ಮಾಡಿಕೊಂಡನು, ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಅಸಮರ್ಥರಾಗಿ ಇಬ್ಬರೂ ಇದ್ದರು. ಅನಂತರ ಟೆಲಿ ಮಾಕಸ್ಸ ನು ನೆಸ್ಟರನನ್ನು ಕುರಿತು ಹೇಳಿದ್ದೇನಂದರೆ :-