ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಪ್ರಭುತ್ವ ಮಾಡುತ್ತಲಧಾರೆ, ಅವರಲ್ಲಿ ಸಂದೇಹಪಡುವುದು ತಪ್ಪು, ಇದುಮಾನಿ ಯಸ್ಸನು ಅಪರಾಧವನ್ನು ಮಾಡಿರುವನು, ನಿಮ್ಮ ಸಂದೇಹಕ್ಕೆ ಗುರಿಯಾಗಿರುವನು. ಆದರೆ ಇವನು ವಂಚಕನಲ್ಲ. ನಾವು ಮಾಡತಕ್ಕ ಕೆಲಿನಂತೆ ಅವನು ನಡೆಯು ವನು. ಅದಕ್ಕೆ ನಾನೂ ಟೆಲಿಮಾಕಸೂ ಇಬ್ಬರೂ ಚಾಮಾನ್ದಾರರಾಗುತ್ತೇವೆ. ನಿಮ್ಮ ಕರಾರಿನಂತೆ ನಡೆಯುವವರೆಗೂ ನಾವೂ ನಿಮ್ಮ ಅಧೀನದಲ್ಲಿರುತ್ತೇವೆ. ಈ ಕ್ರೀಟಿನ ಜನಗಳು ನಿಮಗೆ ವಂಚನೆಯನ್ನು ಮಾಡಿ ಈ ಪರ್ವತದ ಘಾಟಿಗಳನ್ನು ಅಪಹರಿಸಿರುವರು. ನಿಮ್ಮ ದೇಶದ ದಾರಿಗಳನ್ನೆಲ್ಲಾ ತಮ್ಮ ಸ್ವಾಧೀನಪಡಿಸಿಕೊಂಡಿ ರುವರು. ಅಲ್ಲೆಲ್ಲಾ ದುರ್ಗಗಳನ್ನು ಕಟ್ಟಿ ಕೊಂಡಿರುವರು. ಈ ಯುದ್ಧಕ್ಕೆ ಇದು ಒಂದು ಕಾರಣವೆಂದು ಗೊತ್ತಾಗುತ್ತದೆ. ಈ ಕಾರಣವು ನಿವಾರಣೀಯವಾದದ್ದು. ಇನ್ನೇನಾದರೂ ಕಾರಣವಿದ್ದರೆ ಹೇಳಿ, ಅವುಗಳೆಲ್ಲಾ ನಿವಾರಣೆ ಮಾಡಲ್ಪಡುವುವು. ಯುದ್ಧದಿಂದ ಲಾಭವೆಂದು ತಿಳಿದುಕೊಳ್ಳಬೇಡಿ, ಯುದ್ಧದಲ್ಲಿ ಜಯಪರ ಯು ಗಳು ಧರ್ಮವನ್ನನುಸರಿಸುವುವು. ಇದುವರೆಗೂ ಇದು ಮಾನಿಯಸ್ಸನ ನೃತ್ಯ ಅಧರ್ಮವನ್ನು ಮಾಡಿದರು. ಹಾಗೆಯೇ ಯುದ್ದವು ಉಪಕ್ರಮವಾಗಿದ್ದರೆ ಅವ ರಿಗೆ ಅಪಜಯವಾಗುತ್ತಿತ್ತು, ಈಗ ಧರ್ಮವಾಗಿ ನಡೆಯುವುದಕ್ಕೆ ಇದು ವಿಾನಿ ಯಸ್ಸನು ಸಿದ್ಧನಾಗಿರುತ್ತಾನೆ. ಅದಕ್ಕೆ ನಾನೂ ಟೆಲಿಮಾಕಸ್ಸನೂ ಜಾನಿತನಾಗಿ ರುತ್ತೇವೆ. ನೆಸ್ಟರು ಮೊದಲಾದ ಗ್ರೀಕ್‌ ಮಹನೀಯರು ಇದಕ್ಕೆ ಒಪ್ಪುತ್ತಾರೆ. ನಿಮ್ಮ ನಿ.ತ್ರರನ್ನು ಶತ್ರುಗಳೆಂದು ತಿಳಿದುಕೊಂಡು ಯುದ್ಧಕ್ಕೆ ಉಪಕ್ರಮಿಸಿದರೆ ನಿಮ್ಮ ನಡತೆಯನ್ನು ದೇವರು ಮೆಚ್ಚುವುದಿಲ್ಲ, ಗ್ರೀಸ್ ದೇತೀಯರು ಇಡುವಾನಿ ಯಸ್ಸಿನ ಜೊತೆ ಯಲ್ಲಿ ಸೇರುವ ಸಂಭವವು ಬರುವುದು. ನಿಮಗೆ ಪರಾಜಯವಾಗುವ ಸಂಭವವು ಬರುವುದು, ಸಾವಧಾನವಾಗಿ ಪರ್ಯಾಲೋಚಿಸಿ ನಡೆಯುವುದು ನಿಮಗೆ ಕರ್ತವ್ಯ. ಈ ರೀತಿಯಲ್ಲಿ ಮೆಂಟರನು ಹೇಳಲು ಮಂತೂರಿರ್ಯ” ಮುಖಂಡರಲ್ಲಿ ಒಬ್ಬನು ಮೆಂಟರನ ಬಳಿಗೆ ಬಂದು ಹೇಳಿದ್ದೇನೆಂದರೆ:- ಈ ಯುದ್ಧಕ್ಕೆ ಅವಕಾಶವಿ ಇದ೦ತೆ ಮಾಡುವುದಕ್ಕೆ ಮಾಡಬೇಕಾದ ಕೆಲಸಗಳನ್ನೆಲ್ಲಾ ನಾವು ಮಾಡಿದೆವು. ಅವುಗಳು ಫಲಕಾರಿಗಳಾಗಲಿಲ್ಲ, ಈ ಕ್ರೀಟನರು ದುರಾಶೆಯುಳ್ಳವರು. ಅವ ರನ್ನು ನಂಬುವುದಕ್ಕೆ ಆಗುವುದಿಲ್ಲ ಅವರು ಪ್ರಮಾಣ ಮಾಡಿ ಹೇಳುವ ಮಾತುಗ 18