ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 ಕೆ - | ರುವುದು, ಕ್ರೀಟರಲ್ಲಿ ನನಗೆ ಎಷ್ಟು ವಿಶ್ವಾಸವಿರುವುದೆ ನಿಮ್ಮಲ್ಲಿಯ ಅಷ್ಟು ವಿಶ್ವಾಸವಿರುವುದು, ನಿಮ್ಮ ವಿಶ್ವಾಸಕ್ಕೆ ಅವರು ಪಾತ್ರರಾಗದೆ ಹೋದದ್ದ ಕೈ ಸ್ಕರ ನನಗೆ ತುಂಬಾ ವ್ಯಸನವಿರುವುದು, ಅವರ ಅವಚ್ಛತೆಯಿಂದ ನಿಮಗುಂಟಾಗಿರ ತಕ್ಕ ನಷ್ಟವು ಕೂಡ ಕಟ್ಟಿ ಕೊಡಲ್ಪಡುವುದೇ ನನ್ನ ವ ವಿಖ್ಯ ಉದ್ದೇಶ. ಈ ವಿಷ ಯದಲ್ಲಿ ನೀವು ಸಂದೇಹವನ್ನು ಹೊ೦ದಬೇಡಿ, ಈ ಯೂಲಿಸಿಸ್ಸನ ಮಗನಾದ ಟಿಲಿ ಮಾಕಸ್ಸನೂ ನಾನೂ ಇಬ್ಬರೂ 'ಇದಕ್ಕೆ ಜಾವಿಾನಾಗುತ್ತೇವೆ. ನಾವಿಬ್ಬರು ಸಾಲ ದೆಂದು ನಿಮಗೆ ತೋರಿದರೆ ಈ ಕ್ರೀಟರಲ್ಲಿ ಅತ್ಯಂತ ಘನತೆಯನ್ನು ಹೊಂದಿದ ಪರಾ ಕ್ರಮಶಾಲಿಗಳಲ್ಲಿ ಅಗ್ರಗಣ್ಯರಾದ ಹನ್ನೆರಡು ದಿನಗಳನ್ನು ಜಾಮೀನುದಾರರ ನಾಗಿ ನೀವು ಪರಿಗ್ರಹಿಸಬಹುದು, ಈ ಕೌಲು ಜಾರಿಗೆ ಬಂದಿತೆಂದು ನಿಮಗೆ ತೋರುವವರೆಗೂ ನಾವು ನಿಮ್ಮ ಅಧೀನದಲ್ಲಿರುತ್ತೇವೆ. ಈ ಕ್ರೀಟರು ಕೌಲಿನಂತೆ ನಡೆಯುವುದಿಲ್ಲವೆಂದು ನಿಮಗೆ ತೋರಿದರೆ ನಮಗೆ ಬೇಕಾದ ಶಿಕ್ಷೆಯನ್ನು ಮಾಡಬ ಹುದು. ಇಡುವಿಾನಿಯಸ್ಸನು ವಂಚಕನೆಂದು ನೀವು ತಿಳಿದುಕೊಂಡು ಇದೀರಿ. ಹಾಗೆ ತಿಳಿದು ಕೊಳ್ಳುವುದಕ್ಕೆ ಕಾರಣಗಳುಂಟು, ಕಾಲಕ್ರಮದಲ್ಲಿ ಮೈನಾಸನ ಮೊಮ್ಮಗನಾದ ಇಡುವಿಾನಿಯಸ್ಸನು ಅಧರ್ಮಿಷ್ಟನಲ್ಲವೆಂದು ನಿಮಗೆ ಗೊತ್ತಾಗು ವುದು. ಅದು ಹಾಗಿರಲಿ, ಇವನು ಯುದ್ದ ಮಾಡುವುದಕ್ಕೆ ಹಿಂತೆಗೆಯುವವನಲ್ಲ. ಅಧರ್ಮಯುದ್ಧವನ್ನು ಮಾಡಬಾರದೆಂಬುದೇ ಇವನ ಮುಖ್ಯ ಉದ್ದೇಶ, ಅದ ರಿಂದಲೇ ನಿಮ್ಮೊಡನೆ ಧರ್ಮವಾದ ಕೌಲನ್ನು ಮಾಡಿಕೊಳ್ಳುವುದಕ್ಕೆ ಅವನು ಸಿದ್ಧನಾ ಗಿರುತ್ತಾನೆ, ನಿಮ್ಮ ಸೈನ್ಯಗಳನ್ನು ನೋಡಿ ಭಯಪಟ್ಟು ಸಮಾಧಾನ ಮಾಡಿಕೊಳ್ಳು ತಾನೆಂದು ನೀವು ತಿಳಿದುಕೊಂಡರೆ ಅದು ತಪ್ಪು, ಅವನು ಮಹಾಪರಾಕ್ರಮ ಶಾಲಿ. ಅಧರ್ಮವನ್ನು ಮಾಡಕೂಡದೆಂಬ ಭಯವು ಅವನಿಗಿರುವುದೇ ಹೊರ್ತು ಧರ್ಮವಾದ ಯುದ್ದ ಮಾಡುವುದಕ್ಕೆ ಅವನಿಗೆ ಲೇಶವೂ ಭಯವಿರುವುದಿಲ್ಲ, ನಿಮಗೆ ಅನ್ಯಾಯವು ಮಾಡಲ್ಪಟ್ಟಿತೆಂದು ಅವನು ತಿಳಿದುಕೊಂಡಿರುವನು. “ನಾನು ಅನ್ಯಾ ಯಮಾಡಿರುತ್ತೇನೆ. ನ್ಯಾಯವನ್ನು ಮಾಡಿ ಕ್ಷಮಾಪಣೆಯನ್ನು ಕೇಳಿಕೊಳ್ಳುವು ದಕ್ಕೆ ಸಿದ್ಧನಾಗಿರುತ್ತೇನೆ. ಯಾವುದು ಧರ್ಮವೆಂದು ಉಭಯ ಕಕ್ಷಿಗಳಲ್ಲಿಯ ನಿಸ್ಸಹರಾದ ಹತ್ತು ಜನಗಳು ಹೇಳುವರೋ ಅದಕ್ಕೆ ನಾನು ಒಪ್ಪುತ್ತೇನೆ. ಧರ್ಮವಾದ ಕೌಲು ಮಾಡಲ್ಪಡಲಿ, ಕೋಪತಾಪಗಳು ಪರಿಹಾರವಾಗಲಿ, ಶಾಂ