ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

149 ತಿಯು ಉಂಟಾಗಲಿ, ಪರಸ್ಪರ ಪ್ರೀತಿಯ, ಸೌಹಾರ್ದವೂ ಉಂಟಾಗಲಿ. ಉಭಯ ಕಕ್ಷಿ ಯವರೂ ನಿರ್ಭಯವಾಗಿ ಪರಸ್ಪರ ಪ್ರೀತಿಯಿಂದ ಬದುಕಲಿ ಎಂದು ಮನೋವಾಕ್ಕರ್ಮಗಳಲ್ಲಿಯ. ಒಂದೇ ವಿಧವಾಗಿ ಲೇಶವೂ ಕೃತ್ರಿಮವಿಲ್ಲದೆ ಹೇಳು ತಾನೆ, ಆತನ ಪಕ್ಷವಾಗಿ ಸಮಾಧಾನದ ಒಡಂಬಡಿಕೆಗಳನ್ನು ಅವನ ಸಮ್ಮತಿ ಯಿಂದ ನಾನು ನಿಮಗೆ ತಿಳಿಸುತ್ತೇನೆ. ನಿಮ್ಮ ದೇಶಕ್ಕೆ ಕ್ರೀ೬ಟರು ನುಗ್ಗಿ ರುವುದು ಹೇಗೆ ಅನ್ಯಾಯವೋ ಅವರ ದೇಶಕ್ಕೆ ಮಾಂಡೂರಿಯನ್ನರು ನುಗ್ಗುವುದು ಅನ್ಯಾಯ. ಸರಹದ್ದುಗಳಲ್ಲಿರತಕ್ಕ ದುರ್ಗಗಳಲ್ಲಿ ತಾಟಸ್ಥ್ಯವನ್ನು ವಹಿಸತಕ್ಕ ವರ ಸೈನ್ಯಗಳಿರಲಿ. ನೆಸ್ಟರು, ಫೈಲೋಕ್ಷೀಟಸ್ ಮೊದಲಾದ ಗ್ರೀಸ್ ದೇಶೀಯರು ಮಾಂಡೂರಿಯನ್ನ ರಲ್ಲ, ಇವರು ಕ್ರೀವರೂ ಅಲ್ಲ.. ಇವರು ತಟಸ್ಥರು. ಆದರೂ ಇವರು ನಿಮ್ಮ ಕಡೆಯವರು, ಇಡುಮಿನಿಯಸ್ಸನ ಮೇಲೆ ಯುದ್ಧ ಮಾಡುವುದಕ್ಕೆ ನಿಮ್ಮ ಜೊತೆ ಯಲ್ಲಿ ಸೇರಿರುವರು. ಈ ಘಾಟಿಗಳ ದ್ವಾರದಲ್ಲಿರತಕ್ಕ ದುರ್ಗಗಳೆಲ್ಲಾ ಇವರ ವಶಕ್ಕೆ ಬಿಡಲ್ಪಡುವುವು, ಅವರು ಈ ದುರ್ಗಗಳಲ್ಲಿ ತಮ್ಮ ಸೈನ್ಯಗಳನ್ನಿಟ್ಟು ಕೊಂಡು ಇರಲಿ, ಇದರಿಂದ ಕ್ರೀಟರು ನಿಮ್ಮ ದೇಶಕ್ಕೆ ಬರುವುದು ಹೇಗೆ ಅಸಾಧ್ಯವಾಗು ವುದೋ ಅವರ ದೇಶದ ಮೇಲೆ ಬೀಳುವುದು ನಿಮಗೂ ಅಸಾಧ್ಯವಾಗುವುದು, ನ್ಯಾ ಯದ ತಕ್ಕಡಿಯು ತಟಸ್ಥರಾದ ಈ ಗ್ರೀಸ್ ದೇಶೀಯರಿಂದ ಹಿಡಿದುಕೊಳ್ಳಲ್ಪಡಲಿ. ಈ ಒಡಂಬಡಿಕೆಗಳು ಜಾರಿಗೆ ಬರುವುದಿಲ್ಲವೆಂದು ನೀವು ತಿಳಿದು ಕೊಂಡಿರಬಹುದು. ಇದು ಶುದ್ಧ ತಪ್ಪು, ಇಡುವಿಾನಿಯಸ್ಸನು ಇದಕ್ಕೆ ಪುನಃಪೂರ್ತಿಯಾಗಿ ಒಪ್ಪಿರು ವನು, ಈ ಕೌಲಿನಂತೆ ನಡೆಯುವುದಕ್ಕೆ ಇಡು ವಿತಾನಿಯಸ್ಸನು ಒಪ್ಪಿ ಹೇಗೆ 12 ಜನ ಕ್ರೀಟರನ್ನೂ ನಮ್ಮನ್ನೂ ಜಾಮೀಾನಾಗಿ ಕೊಡುವನೋ ಹಾಗೆ ಮಾಂಡ್ರಿಯ ನ್ಯರೂ ಕೂಡ ಈ ಕೌಲಿಗೆ ಒಪ್ಪುವುದಾದರೆ ಅದೇ ರೀತಿಯಲ್ಲಿ ಜಾಮಾನನ್ನು ಕೊಡ ಬೇಕು, ಈ ರೀತಿಯಲ್ಲಿ ನ್ಯಾಯವಾದ ಕೌಲು ಮಾಡಲ್ಪಟ್ಟು ಜಾವಿಾನುಗಳು ಕೊಡಲ್ಪಟ್ಟರೆ ಅನಂತರ ಭಯಪಡತಕ್ಕದ್ದೇನಿರುತ್ತದೆ ? ನಿಮಗೆ ಇಡು ಊಾನಿಯ ನಲ್ಲಿ ನಂಬಿಕೆ ಇರುವುದಿಲ್ಲ, ಅವನು ಪ್ರಾಮಾಣಿಕನು, ಅ ವನಿಗೆ ನಿಮ್ಮಲ್ಲಿ ನಂಬಿಕೆ ಇರುವುದು ಧರ್ಮವಾದ ಒಡಂಬಡಿಕೆಗಳಲ್ಲಿ ನೀವ್ಯಾವುದನ್ನು ಹೇಳಿದಾಗ್ಯೂ ಅದಕ್ಕೆ ಒಪ್ಪುವುದಕ್ಕೆ ಅವನು ಸಿದ್ಧನಾಗಿರುತ್ತಾನೆ, ಆದರೆ ಒಂದು ವಿಷಯ ವನ್ನು ನೀವು ಮನಸ್ಸಿನಲ್ಲಿಟ್ಟು ಕೊಳ್ಳಬೇಕು, ಅವನು ಭಯದಿಂದ ರಾಜಿಗೆ ಬಂದಿ