ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

141 ರುವನೆಂದು ನೀವು ತಿಳಿದುಕೊಂಡು ಇರತಕ್ಕೆ ಪಕ್ಷದಲ್ಲಿ ಈ ಕೌ' ಗೆ ಅವನು ಒಪ್ಪುವುದಿಲ್ಲ, ಅವನ ಕಡೆಯವರೂ ಒಪ್ಪುವುದಿಲ್ಲ. ನಾನೂ ಒಪ್ಪವದಿಲ್ಲ. ಟೆಲಿಮಾಕಸ್ಸನೂ ಒಪ್ಪುವದಿಲ್ಲ, ನಮ್ಮ ಕೋಪ ತಾಪಗ?೦ದ ಅರ್ಧರಾನಿ, ಮಾನಹಾನಿ, ವಾಣರಾನಿಗಳು ಆಗಲಾರದೆಂಬಗಾಗಿಯೂ, ಊರೆತು ಕಯ ವರೂ ಸುಖವಾಗಿರಬೇಕೆಂಬುದಾಗಿಯೂ ಈ ಸಲಹೆಯ ಮಟ್ಟಿರುವುದು. ಇಡುಮಿನಿಯಸ್ಥನು ಆದಿಭಾಗದಲ್ಲಿ ಪ್ರಮಾದವಶದಿಂದ ಕೆಲವು ತಪ್ಪುಗಳನ್ನು ಮಾಡಿದನು, ಅದನ್ನು ಒಪ್ಪಿಕೊಂಡು ನಿಮ್ಮ ನಷ್ಟವನ್ನು ಕಟ್ಟಿ ಕೊಟ್ಟ ಧರ್ಮ ವಾದ ಕಲನ್ನು ಮಾಡಿ ಕೊಳ್ಳಬೇಕೆಂದು ಅವನು ಸಂಕಲ್ಪ ಮಾಡಿ ಇರಾನೆ. ತಾನು ಮಾಡಿದ ತಪ್ಪನ್ನು ಅವನು ಆಚ್ಛಾದಿಸಿಕೊಂಡಿಲ್ಲ, ದುರಹಂಕಾರದಿಂದ ತಾನು ಮಾಡಿದ ತಪ್ಪನ್ನು ನೆಪ್ಪೆಂದು ಅವನು ಸಾಧಿಸುತ್ತಲಿಲ್ಲ. ತನ್ನ ಲಾಭವೇ ದೊಡ್ಡ ದೆಂದು ಅವನು ಹಟವನ್ನು ಹಿಡಿದು ಇಲ್ಲ, ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಅದಕ್ಕೆ ಪ್ರತಿಫಲವನ್ನು ಕೊಡುವುದಕ್ಕೆ ಸಿದ್ಧನಾಗಿರುತ್ಯಾನೆ. ಇದಕ್ಕೆ ಪ್ರಾಮಾಣಿ ಕತೆಯು ಕಾರಣವೇ ಹೊರತು ಭಯವು ಕಾರಣವಲ್ಲ. ಭಯವೇ ಕಾರಣವೆಂದು ನೀವು ತಿಳಿದುಕೊಳ್ಳತಕ್ಕ ಪಕ್ಷದಲ್ಲಿ ಯುದ್ಧವು ಮಾಡಲ್ಪಡಲಿ ಅವನ ಅಪರಾಧ ದಿಂದ ಅವನು ವಿಮುಕ್ತನಾಗಿರುವನು. ಧರ್ಮವಾದ ಸಮಾಧಾನವನ್ನು ನೀವು ತಿರ ಸ್ಕರಿಸಿದರೆ ಈ ಯುದ್ಧದಿಂದ ಆಗತಕ್ಕ ಅನರ್ಧಿಗಳಿಗೆ ನೀವೇ ಜವಾಬ್ಬಾರರಾಗಬೇಕು. ಧಮ೯ವಾದ ಕೌಲಿಗೆ ಇಡುವಿಾಸಿಯಸ್ಥನು ಸಿದ್ಧನಾಗಿರುವನು. ಹೀಗೆ ಸಿದ್ಧನಾ ಗಿರುವನೆಂದು ಅವನ ಪಕ್ಷವಾಗಿ ನಿಮಗೆ ನಾನು ವಿಜ್ಞಾಪಿಸಿರುವೆನು. ಈ ವಿಜ್ಞಾ ಸನೆಯಿಂದ ಅವನ ಅಪರಾಧಗಳಿಗೆ ಪ್ರಾಯಶ್ಚಿತ್ತವು ಮಾಡಲ್ಪಟ್ಟಂತಾ ಯಿತು. ಅದಕ್ಕೆ ನೀವು ಒಪ್ಪದಿದ್ದರೆ ಮುಂದಾಗತಕ್ಕ ಪಾಪಕೃತ್ಯಗಳಿಗೆ ಜವಾಬ್ದಾರಿಯನ್ನು ನೀವು ವಹಿಸಿದಂತಾಯಿತು. ಯುದ್ಧವನ್ನು ಮಾಡುವುದೇ ಸರಿ ಎಂದು ನೀವು ನಿಷ್ಕರ್ಷಿಸಿ ದರೆ ಯುದ್ಧವು ಆಗಲಿ. ನಾನೂ, ಟೆಲಿಮಾಕಸ್ಸನೂ ಇಡುಾನಿಯಸ್ಸನ ಪಕ್ಷ ವನ್ನು ಈ ಯುದ್ಧದಲ್ಲಿ ವಹಿಸುವೆವು, ನ್ಯಾಯವಾದ ಕೌಲಗೆ ನಾವು ಒಪ್ಪುವೆವು. ಅದಕ್ಕೆ ನೀವು ಮಾತ್ರವೇ ಸಾಕ್ಷಿಯಲ್ಲಿ, ಸರ್ವಾಂತರ್ಯಾಮಿಯಾದ ಜಗದೀಶ್ವರನು ಸಾಕ್ಷಿಯಾಗಿರುವನು. ಈ ರೀತಿಯಲ್ಲಿ ಹೇಳಿ ಮೆಂಟರನು ಸಮಾಧಾನದ ಬಾವುಟವನ್ನು ಎತ್ತಿ ಭ