ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

143 - - → ನರೂ ಕೂಡ ಅಸಾಧಾರಣವಾದ ಪ್ರಸನ್ನ ತೆಯಿಂದ ಮೆಂಟಿನಲ್ಲಿ ಅದ್ಭುತವಾದ ಪ್ರೀತಿ ಯನ್ನು ತೋರಿಸಿದರು. ಅಲ್ಲಿ ಸೇರಿದ್ದ ಸೈನಿಕರೆಲ್ಲರೂ ಕಣ್ಣೀರುಗಳನ್ನು ಸುರಿಸುತ್ತಾ ವೆ.೦ಟರು ಹೇಳಿದ್ದು ಸಾಧುವಾದದ್ದು ಎಂದು ಹೇಳಿದರು. ನೆಸ್ಟರು ಮೆ೦ಟರನ ಸಂಭಾ ಷಣೆಯನ್ನು ಕೇಳಿ ಸಂತೋಷ ಪರವಶನಾದನು, ಪ್ರತ್ಯುತ್ತರವನ್ನು ಕೊಡುವುದಕ್ಕೆ ಅವನಿಗೆ ಶಕ್ತಿಯು ಉಂಟಾಗಲಿಲ್ಲ ಅವನನ್ನು ಆಲಂಗಿಸಿಕೊಂಡು ತನ್ಮೂಲಕ ತನ್ನ ಸಂತೋಷಾತಿಶಯವನ್ನು ತೋರಿಸಿದನು. * ಎಳ್ಳೆ ಪರದೇಶಿಯೇ, ನಿನ್ನ ವಿವೇಕ ದಿಂದ ನೀನು ನಮ್ಮನ್ನು ಜಯಿಸಿರುವೆ ನಮ್ಮಲ್ಲಿ ಪಪೂರ್ಣವಾದ ಶಾಂತಿಯನ್ನುಂ ಟುಮಾಡಿರುವೆ. ನಮ್ಮ ಭಾಗ್ಯವೇ ನಿನ್ನ ರೂಪದಲ್ಲಿ ನಮ್ಮ ಕ್ಷೇಮಾರ್ಥವಾಗಿ ಬಂದಿರಬೇಕು, ನಮ್ಮ ಕ್ಷೇಮಚಿ೦ತೆಯು ನಮಗಿರುವುದಕ್ಕಿ೦ತಲೂ ನಿನಗೆ ಹೆಚ್ಚಾಗಿ ರುವುದು, ನಿನ್ನ ವಾಕ್ಕೆ ವೇದವಾ ಕು, ನಾವ್ಯಾರೂ ನಿನ್ನ ಹಿತೋಪದೇಶದ ಮೇರೆಗಳನ್ನು ಮಾರಿ ನಡೆ ಯುವುದಿಲ್ಲ, ನೀನು ನಿಸ್ಸಹಶಿಖಾಮಣಿ, ಸರ್ವಸಮ ದೃಷ್ಟಿಯುಳ್ಳವರಲ್ಲಿ ನೀನು ಅಗ್ರಗಣ್ಯನು. ನೀನು ದೇವಗೆ ಸಮಾನನಾದವನು. ನಿನ್ನ ವಿಧಿಗೆ ಅನುಸಾರವಾಗಿ ನಡೆಯುವುದಕ್ಕೆ ನಾವು ಸಿದ್ಧರಾಗಿರುತ್ತೇವೆ. ಈ ಕೌಲಿನ ಒಡಂಬಡಿಕೆಗಳು ನಡೆಯುವುದಕ್ಕೆ ಜಾಮೀನುದಾರನಾಗಿ ನೀನು ಒಪ್ಪಿದ್ದಾಗ್ಯೂ. ನಿನ್ನನ್ನು ನಮ್ಮ ಮನೆದೇವರಂತೆ ಪೂಜಿಸಿ ಕೃತಾರ್ಥರಾಗುವುದಕ್ಕೆ ನಾವು ಪ್ರಯತ್ನ ಮಾಡುತ್ತೇವೆ' ಎಂದು ಸೈನ್ಯಗಳ ಮುಖಂಡರೇ ಮೊದಲಾದವರು ಹೇಳಿದರು. ಅನಂತರ ನೆಸ್ಟರು ಮಾತನಾಡುವುದಕ್ಕೆ ಪ್ರಯತ್ನ ಮಾಡಿದನು. ಮೆಂಟರ: ಅಪ್ಪಣೆ ಕೊಡಿಸಿದ್ದಕ್ಕೆ ಪ್ರತಿಯಾಗಿ ಇವನೇನಾದರೂ ಹೇಳುವನೆಂಬ ಭಯದಿಂದ ಸೈನ್ಯದ ಮುಖಂಡರು ಹೇಳಿದ್ದೇನಂದರೆ- ಮೆಂಟರು ಹೇಳಿದ್ದನ್ನು ಅನುಮೋದಿಸುವುದಾ ದರೆ ನೀನು ಮಾತನಾಡಬಹುದು, ಹಾಗಿಲ್ಲದಿದ್ದರೆ ಮಾತನಾಡಕೂಡದು, ಮೆಂಟರನ ಉಪದೇಶವೇ ಆಖೈರು ಸಂಭಾಷಣೆಯಾಗಿ ಇರಬೇಕು, ಅದನ್ನು ಅನುಮೋದಿಸುವು ದಾದರೆ ಮಾತನಾಡಬಹುದು ?” ಎಂದು ಹೇಳಿದರು, ಇವರ ಮನೋಭಾವವನ್ನು ನೋಡಿ ಆಶ್ಚರ್ಯಪಟ್ಟು ನೆಸ್ಟರನು ಮೆಂಟರನ್ನು ಕುರಿತು ಹೇಳಿದ್ದೇನಂದರೆ:- ಎಲೈ ಮೆಂಟರೆ, ನಿನ್ನ ಮಹಿಮೆಯು ನನಗೆ ಪರಮಾಶ್ಚರ್ಯವನ್ನುಂಟುಮಾಡಿರುವುದು. ಈ ಜನಗಳೆಲ್ಲರೂ ಇಡ ವಿನಿಯಸ್ಸಿನಲ್ಲಿ ಬಹಳ ಕೋಪವುಳ್ಳವರಾಗಿದ್ದರು. ನಿನ್ನ ಆಯ ಅನುರಕ್ತರಾಗಿರಲಿಲ್ಲ, ನೀನು ಮಾತನಾಡುವುದಕ್ಕೆ ಉಪಕ್ರಮ ಮಾಡಿ