ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - * \ ಪರೀಕ್ಷಿಸಿ, ಅವರನ್ನು ಆ ಕೆಲಸಗಳಿಗೆ ನಿಯಮಿಸಿ, ಅವರಿಂದ ಸದರಿ ಕೆಲಸಗಳನ್ನು ಪರಿಪೂರ್ಣವಾಗಿ ಮಾಡಿಸಬೇಕಾಗುತ್ತದೆ ಜನಗಳ ಯೋಗ್ಯತೆಯನ್ನು ತಿಳಿಯದೆ, ಇತರರ ಮಾತುಗಳನ್ನು ಕೇಳಿ, ಯಾವ ಕೆಲಸಗಳಿಗೆ ಯಾರು ಅನರ್ಹರೋ ಅವರನ್ನು ನಿಯಮಿಸಿಕೊಂಡರೆ, ಕೆಲಸಗಳು ಕೆಡುವುವು. ಪ್ರಜಾರಂಜನೆಯು ಸಮರ್ಪಕವಾಗಿ ಆಗುವುದಿಲ್ಲ. ನ್ಯೂನಾತಿರಿಕ್ತಗಳು ಉಂಟಾಗುವುವು, ದುಷ್ಟರು ಪ್ರಬಲರಾಗು ವರು, ಶಿಷ್ಯರು ಹೀನಸ್ಥಿತಿಗೆ ಬರುವರು. ಪ್ರಭುವು ಎಷ್ಟು ಸತ್ಯವಂತನಾಗಿದ್ದಾಗ್ಯೂ, ಎಷ್ಟು ಧರ್ಮಿಷ್ಟನಾಗಿದ್ದಾಗ್ಯೂ ಅವನ ಇಷ್ಟಾರ್ಥ ಸಿದ್ಧಿಯು ಆಗುವುದಿಲ್ಲ. ಸ್ವಾರ್ಥ ಪರತೆ ಯು ಸನ್ಯಾಸಿಗಳನ್ನೂ ಕೂಡ ಬಿಟ್ಟಿರುವುದಿಲ್ಲ, ಹೀಗಿರಲಾಗಿ, ಸಂಸಾರಿಗಳ ಪಾಡೇನು ? ಇಪ್ಯಾರ್ಧ ಪ್ರಾಪ್ತಿಗೋಸ್ಕರ ಪ್ರಭುಗಳನ್ನು ಸೇವಿಸತಕ್ಕ ವರಲ್ಲಿ ಅನೇಕರು ಅವನ ಮುಖೋಲ್ಲಾಸವಾಗುವಂತೆ ಮಾತನಾಡುವರು, ಅನೇಕ ಸಂದರ್ಭಗಳಲ್ಲಿ ವಾಸ್ತವಾಂಶವು ಅವನಿಗೆ ಗೊತ್ತಾಗದಂತೆ ಮಾಡುವರು. ಹಾಗೆ ಮಾಡುವುದರಲ್ಲಿ ಅಸಾಧಾರಣವಾದ ನೈಪುಣ್ಯವನ್ನು ತೋರಿಸುವರು, ಅಧರ್ಮವು ಧರ್ಮವೆಂದು ನಿರೂಪಿಸುವರು, ಧರ್ಮವು ಅಧರ್ಮವಾಗುವಂತೆ ಮಾಡುವರು. ಸತ್ಯವು ಅಸತ್ಯ ವಾಗಿರುವಂತೆಯ, ಅಸತ್ಯವು ಸತ್ಯವಾಗಿರುವಂತೆಯ ರೆಕಾರ್ಡುಗಳೂ ಕೂಡ ಕಲ್ಪಿಸಲ್ಪಡುವುವು. ಇಂಥಾ ಸಂದರ್ಭಗಳಲ್ಲಿ ವಾಸ್ತವಾಂಶವನ್ನು ಗೊತ್ತು ಮಾಡಿ ಕೊಳ್ಳುವುದು ಬಹಳ ಕಷ್ಟವಾಗುವುದು, ಪರಿವಾರ ದೇವತೆಗಳಲ್ಲಿ ನಂಬಿಕೆಯನ್ನು ಇಡಬೇಕು. ಹಾಗೆ ಇಡದಿದ್ದರೆ, ಜೀವನವೂ ಕೂಡ ಕಷ್ಟವಾಗುತ್ತದೆ. ಅವ ರನ್ನು ಒಪ್ಪಿಸಿ, ಧರ್ಮವನ್ನು ಉದ್ಧರಿಸಬೇಕು, ಅವರು ಪ್ರತಿಭಟಿಸಿದರೆ, ಸೀಜರ್‌ನ ಗತಿಯು ಬರುವುದು, ಇದನ್ನೆಲ್ಲಾ ಪರಿಶೀಲಿಸಿ ನೋಡಿದರೆ, ಧರ್ಮಮಾರ್ಗಕ ಪರಾಯಣರಾದ ಪ್ರಭುಗಳ ಜೀವನಕ್ಕಿಂತಲೂ ಝಾಡಮಾಲಿಗಳ ಜೀವನವೂ ಕೂಡ ಉತ್ತಮ, ಝಾಡಮಾಲಿಯು ತನ್ನ ಕೆಲಸವನ್ನು ಪೂರೈಸಿದ ಮೇಲೆ ನಿಶ್ಚಿಂತೆ ಯಿಂದ ಇರುವನು, ಅವನಿಗೆ ತಿಂದದ್ದು ಜೀರ್ಣಕ್ಕೆ ಬರುವುದು, ಅವನಿಗೆ ಚನ್ನಾಗಿ ನಿದ್ರೆಯು ಬರುವುದು, ಅವನಿಗೆ ಯಾವ ಕ್ಷೇಶವೂ ಇರುವುದಿಲ್ಲ. ಹೆಂಡತಿ, ಮಕ್ಕಳು, ಸ್ನೇಹಿತರು ಮೊದಲಾದವರೊಡನೆ ಅವನು ವಿನೋದವಾಗಿ ಕಾಲ ಕ್ಷೇಪ ಮಾಡುವನು. ಅವನಿಗೆ ಇರುವ ಶಾಂತಿಯು ದುಷ್ಟನಿಗ್ರಹ, ಶಿಷ್ಟ ಪರಿಪಾ