ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ) ಲನೆಯಲ್ಲಿ ಆಸಕ್ತನಾದ ಪ್ರಭುವಿಗೆ ಎಂದಿಗೂ ಇರುವುದಿಲ್ಲ. ' ಕೊಟ್ಟರೆ, ಹೊಗಳು ವುದು, ಕೊಡದಿದ್ದರೆ ಬೊಗಳುವುದು ' ಸಾಮಾನ್ಯ ಜನಗಳ ಸ್ವಭಾವ, ನೃತ್ಯರಾಗಿ ರುವುದಕ್ಕೆ ರುಜುಮಾರ್ಗಾವಲಂಬಿ ಗಳಾದ ಹರಿಶ್ಚಂದ್ರಾದಿಗಳು ಸಿಕ್ಕುವುದಿಲ್ಲ, ಸಿಕ್ಕ ತಕ್ಕ ನೃತ್ಯರನ್ನು ಚತುರೋಪಾಯಗಳಿಂದಲೂ ಹರಿಶ್ಚಂದ್ರಾದಿಗಳಾಗುವಂತೆ ಮಾಡಿ ಕೊಳ್ಳಬೇಕು, ಅತಿಶಯೋಕ್ತಿಗಳಿಂದ ಯಾರಾದರೂ ಸ್ತುತಿಸಿದರೆ, ಈ ಸ್ತೋತ್ರಕ್ಕೆ ಕಾರಣವೇನಿರಬಹ ದೆಂದು ಪರಾಲೋಚಿಸಿ, ದಾಕ್ಷಿಣ್ಯ ಪರವಶರಾಗದೆ, ಧರ್ಮಕ್ಕೆ ಹಾನಿ ಬರದಂತೆ ಮಾಡಿಕೊಳ್ಳಬೇಕು. ಯಾರಾದರೂ ನಮ್ಮನ್ನು ನಿರ್ಭಯವಾಗಿ ನಿಂದಿಸಿದರೆ, ಯಾವ ಅನ್ಯಾಯವು ನಮ್ಮಿಂದ ಮಾಡಲ್ಪಟ್ಟಿರುವುದೆಂದು ಪರಿಶೀಲಿಸು ಡಬೇಕು, ಪ್ರಮಾದದಿಂದ ನಾವೇನಾದರೂ ತಪ್ಪು ಮಾಡಿದ್ದರೆ, ಅದನ್ನು ತಕ್ಷಣದ ಆಯೇ ತಿದ್ದಿಕೊಳ್ಳಬೇಕು, ಎಂಟು-ಹತ ಜನಗಳುಳ್ಳ ಸಂಸಾರಗಳಲ್ಲಿ ನಿರ್ದಾಕ್ಷಿ ಣ್ಯವಾಗಿ ನಡೆಯುವುದು ಮನೆಯ ಎಜವಾನನಿಗೆ ಎಷ್ಟೇ ಕಷ್ಟವಾಗುವುದು. ಪ್ರಭುಗಳ ಸಂಸಾರವು ಬಹಳ ದೊಡ್ಡದು, ಕೋಟ್ಯಂತರ ಪ್ರಜೆಗಳು ಇವರಿಗೆ ಬಂಧುವಿ ಟ್ರಸ್ಥಾನದಲ್ಲಿರುವರು. ಅವರಲ್ಲಿ ಪರಸ್ಪರ ಪ್ರೀತಿಯನ್ನೂ, ಸೌಹಾರ್ದ ವನ್ನೂ ಹುಟ್ಟಿಸಿ, ಎಲ್ಲರೂ ಎಲ್ಲರ ಕ್ಷೇಮ ಕ್ಕೋಸ್ಕರವೂ ಮೆಹನತ್ತು ಮಾಡುವಂತೆ ಮಾಡಬೇಕು, ಬೃಹಸ್ಪತಿಗೂ ಕೂಡ ಇದು ಬಹಳ ಕ್ಷೇಶವನ್ನುಂಟುಮಾಡುವುದು. ಮನೋವಾಕ್ಕರ್ಮಗಳ ಪರಿಣಾಮ ಫಲವನ್ನು ಪರಾಲೋಚಿಸದೆ, ಕೆಲಸ ಮಾಡತ ಕವರ ಪಾಡೇನು ? ಮಹರ್ಷಿಗಳ ಕಡೆಗೆ ತಿರುಗಿ, ವೆಂಟರನು ಹೇಳಿದ್ದೇ ನಂದರೆ:- “ ಮೈನಾಸನ ಧರ್ಮಶಾಸ್ತ್ರಗಳನ್ನು ಪರಿಶೀಲಿಸಿರುವ ನಿಮಗೆ ವಿಶೇಷವಾಗಿ ಹೇಳುವುದೇನೂ ಇರುವುದಿಲ್ಲ. ನಾನು ಪರದೇಶಿ, ನಿಮ್ಮ ದೇಶದ ಪೂರ್ವಾಪರಗ ೪ಾವವೂ ನನಗೆ ತಿಳಿಯದು. ನಿಮ್ಮ ಜನಗಳ ಸ್ವಭಾವವೂ ನನಗೆ ತಿಳಿಯ:ದು. ನಿಮ್ಮ ಜನಗಳ ಚರಿತ್ರೆಯ ನನಗೆ ತಿಳಿಯದು, ನಿಮ್ಮ ನೌಕರರ ಚರಿತ್ರೆಯ ನನಗೆ ತಿಳಿಯದು. ಬರಿ ಲೋಕವ್ಯವಹಾರಜ್ಞಾನವನ್ನೂ, ಸಾರಾ ಸಾರ ವಿಚಾರಗ ಇನ್ನೂ ತಿಳಿದುಕೊಂಡ ಮಾತ್ರದಿಂದಲೇ ಈ ದ್ವೀಸನಿವಾಸಿಗಳ ಸದಿಸ್ವಾರ್ಥಸಿದ್ದಿಯಾ ಗುವಂತೆ ದುಷ್ಟನಿಗ್ರಹ, ಶಿಷ್ಟ ಪರಿಸಾನೆ ಯನ್ನು ಮಾಡುವುದು ನನಗೆ ಅಸಾಧ್ಯ, ಟೆಲಿ ಮಾಕಸ್ಸನು ತಾನು ಹುಡುಗನೆಂಬದಾಗಿಯ, ನಾನು ತನ್ನ ಗುರುವೆಂಬದಾಗಿಯೂ,