ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತನಗಿಂತಲೂ ಈ ಪ್ರಭತ್ವವನ್ನು ವಹಿಸುವುದಕ್ಕೆ ನಾನು ಲಾಯಃಖಾದವನೆಂಬದಾ ಗಿಯ ನಿಮಗೆ ಶೃತಪಡಿಸಿರುವನು. ಅವನಿಗಿಂತಲೂ ಹೆಚ್ಚು ಜ್ಞಾನವು ನನಗೆ ಇರ ಬಹುದು. ಆದರೆ, ಈ ದ್ವೀಪನಿವಾಸಿಗಳ ಇಷ್ಟಾರ್ಥ ಸಿದ್ಧಿಯಾಗುವಂತೆ ಪ್ರಭುತ್ವ ಮಾಡುವುದಕ್ಕೆ ಅವನು ಎಷ್ಟು ಅಸಮರ್ಥನೋ ನಾನೂ ಅಷ್ಟು ಅಸಮರ್ಥನೆಂದು ನನಗೆ ತೋರುತ್ತದೆ. ನಿಮಗೆ ಪ್ರಭುವಾಗತಕ್ಕ ವನು ನಿಮ್ಮ ದೇಶದಲ್ಲಿ ಹುಟ್ಟಿ, ನಿಮ್ಮ ದೇಶದ ಆಡಳಿಗಳನ್ನು ತಿಳಿದು ಕೊಂಡು, ನಿಮ್ಮ ಜನಗಳ ಶೀಲಸ್ವಭಾವಗಳನ್ನು ಬಲ್ಲವನಾಗಿ ಇರಬೇಕು. ಮೇಧಾವಿಯಾಗಿಯ, ಪ್ರಾಮಾಣಿಕನಾಗಿಯ, ರಾಜ ತಂತ್ರ ವಿಶಾರದನಾಗಿಯೂ, ಪಾಪಭೀತನಾಗಿಯ, ಮನೋವಾಕ್ಕರ್ಮಗಳಲ್ಲಿ ಪರಿಶು ದೈನಾಗಿಯ, ವೈರಾಗ್ಯ ಚಕ್ರವರ್ತಿಯಾಗಿಯೂ ಇರಬೇಕು, ಪ್ರಜೆಗಳ ವಿಷಯವು ಅವನಿಗೆ ಚನ್ನಾಗಿ ತಿಳಿದಿರಬೇಕು, ಅವನ ವಿಷಯವು ಪ್ರಜೆಗಳಿಗೂ ಚನ್ನಾಗಿ ತಿಳಿದಿರ ಬೇಕು, ಕತ್ರವ್ಯ ತಾಜ್ಞಾನವೂ, ಹಕ್ಕು ಬಾಧ್ಯತೆಗಳ ಸ್ವರೂಪವೂ ಇವು ಎರಡೂ ಅವನಿಗೆ ಸ್ಪಷ್ಟವಾಗಿ ತಿಳಿದಿರಬೇಕು. ತನ್ನ ಕತ್ರವ್ಯವನ್ನು ಮಾಡುವುದರಲ್ಲಿ, ಅವನು ಬಹಳ ನಿಪು ಣನಾಗಿರಬೇಕು. ತನ್ನ ಹಕ್ಕೂ ಬಾಧ್ಯತೆಗಳಿಗೆ ವಿರೋಧವಾಗಿ ಯಾರೂ ನಡೆಯ ದಂತೆ ನೋಡಿಕೊಳ್ಳು ವುದರಲ್ಲಿ ಅವನು ಸಹಸ್ರಾಕ್ಷನಂತೆ ಇರಬೇಕು, ಹೊನ್ನು, ಹೆಣ್ಣು, ಮಣ್ಣುಗಳ ಮೇಲಿನ ಆಶೆಯು ಅವನಿಗೆ ಸುತರಾಂ ಇರಕೂಡದು, ಅಂಥಾ ಮನುಷ್ಯನನ್ನು ನೋಡಿ, ಅವನಿಗೆ ಈ ದ್ವೀಪದ ಪ್ರಭುತ್ವವನ್ನು ವಹಿಸುವುದಕ್ಕೆ ಬದ ಲಾಗಿ, ಪರದೇಶೀಯರಾಗಿಯ, ಜನ್ಮತಃ ಬರತಕ್ಕ ದೇಶಾಭಿಮಾನರಹಿತರಾಗಿಯ ಇರುವ ನಮಗೆ ಪ್ರಭುತ್ವದ ಜವಾಬ್ದಾರಿಯನ್ನು ವಹಿಸಬೇಕೆಂದು ನೀವು ಸಲಹೆ ಯನ್ನು ಕೊಡುವುದನ್ನು ನೋಡಿದರೂ, ನಿಮ್ಮ ಸಲಹೆಗನುಸಾರವಾಗಿ ಈ ಮಹಾಜನ ಗಳೆಲ್ಲರೂ ನಡೆಯುವುದನ್ನು ನೋಡಿದರೂ ನನಗೆ ಆಶ್ವರವಾಗುತ್ತದೆ. ಇಂಥಾ ತಪ್ಪನ್ನು ಮಾಡಬೇಡಿ, ನಿಮ್ಮ ದ್ವೀಪನಿವಾಸಿಗಳಲ್ಲಿ ದಕ್ಷನಾಗಿರುವನನ್ನು ಚುನಾ ಯಿಸಿಕೊಳ್ಳಿ, ಪ್ರಭುತ್ವವನ್ನು ಅಪೇಕ್ಷಿಸತಕ್ಕವರು ಅನೇಕರಿರುವರು, ಪ್ರಭುತ್ವದ ಜವಾಬ್ದಾರಿಯನ್ನು ತಿಳಿದುಕೊಂಡು, ಅದರಲ್ಲಿ ಉದಾಶೀನರಾಗಿರತಕ್ಕ ವರು ಬಹಳ ವಿರಳರಾಗಿರುವರು. ಸಂಪತ್ತಿನ ಮೇಲೂ, ಅಧಿಕಾರದ ಮೇಲ, ಗೌರವದ ಮೇಲೂ ದೃಷ್ಟಿಯುಳ್ಳವರು ಪ್ರಭುತ್ವವನ್ನು ಅಪೇಕ್ಷಿಸುವುದು ಸಹಜ, ಪ್ರಜೆಗ ಇನ್ನೆಲ್ಲಾ ಧರ್ಮದಿಂದ ರಕ್ಷಿಸುವುದು ಬಹಳ ಕಷ್ಟ, ಈ ಕಷ್ಟವನ್ನು ತಿಳಿದವರು