ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1) ಪ್ರಭುತ್ವವನ್ನು ವಹಿಸುವುದಕ್ಕೆ ಒಪ್ಪುವುದಿಲ್ಲ. ಟೆಲಿಮಾಕಸ್ಸನೂ, ನಾನೂ ಇಬ್ಬರೂ ಈ ಪದವಿಗೆ ಅರ್ಹರಲ್ಲ. ನಮ್ಮ ವಿಷಯದಲ್ಲಿ ಆಶೆಯನ್ನು ಬಿಡಿ, ನಿಮ್ಮ ದ್ವೀಪ ನಿವಾಸಿಗಳಲ್ಲಿ ಪ್ರಭುಪದವಿಗೆ ಬೇಕಾದ ಗುಣಾತಿಶಯಗಳುಳ್ಳವರನ್ನು ಚುನಾಯಿಸಿ ಕೊಳ್ಳಿ, ಈ ರೀತಿಯಲ್ಲಿ ಮೆಂಟರನು ಹೇಳಿದ್ದನ್ನು ಕೇಳಿ, ಈ ಮಹರ್ಷಿಗಳು ಭ್ರಾಂತ ರಾದರು. ಮಹಾಜನಗಳು ಆಶ್ವರ ಪಟ್ಟರು. ' ಲೋಕವೆಲ್ಲಾ ಪ್ರಭುಗಳಾಗಬೇ ಕೆಂದು ಅಪೇಕ್ಷಿಸುವರು, ಪ್ರಭು ಪದವಿಯು ತಮಗೆ ಆವಶ್ಯಕವಿಲ್ಲವೆಂದು ಇವರು ಹೇಳುವರು. ಇವರು ಯಾರು ? ಇವರು ಯಾರ ಜೊತೆಯಲ್ಲಿ ಬಂದವರು ?” ಎಂದು ಕೆಲವರು ವಿಚಾರಣೆಯನ್ನು ಮಾಡಿದರು. ನಾಸಿಕ್ರಿಟೀಸ್ ಎಂಬಾತನು ಹೇಜಲ್ ನನ್ನು ತೋರಿಸಿ, ಇವರಿಬ್ಬರೂ ಈತನ ಜೊತೆಯಲ್ಲಿ ಬಂದವರೆಂದು ಹೇಳಿದನು. ಅದರ ಮೇಲೆ ಹೇಜಲ್ ಗೂ, ಮೆಂಟರನು ಮತ್ತು ಟೆಲಿಮಾಕಸ್ಸಿಗೂ ಏನು ಸಂಬಂಧ ಎಂದು ಕೇಳಿದರು ? ' ಅವರಿಗೆ ಯಾವ ಸಂಬಂಧವೂ ಇರುವುದಿಲ್ಲ, ಮೆಂಟರನು ಹೇಜಲ್‌ನ ನೃತ್ಯನು. ಇವನನ್ನು ಹರಾಜಿನಲ್ಲಿ ಆತನು ಕೊಂಡು ಕೊಂಡನು. ಮೆಂಟರನ ಅದ್ಭುತವಾದ ವಿದ್ವತ್ತನ್ನೂ, ಜ್ಞಾನವನ್ನೂ ನೋಡಿ, ಪೇಜಲ್‌ನು ಅವನಿಗೆ ದಾಸತ್ವವನ್ನು ತಪ್ಪಿಸಿ, ತನಗೆ ಗುರುವನ್ನಾಗಿಯೂ, ಮಿತ್ರನನ್ನಾಗಿ ಮಾಡಿ ಕೊಂಡಿರುವನು, ಮೈನಾಸನ ಧರ್ಮಶಾಸ್ತ್ರಗಳನ್ನು ತಿಳಿದುಕೊಳ್ಳುವುದಕ್ಕೋಸ್ಕರ ಆತನು ಈ ಇಬ್ಬರನ್ನೂ ಕರೆದುಕೊಂಡು, ಈ ದ್ವೀಪಕ್ಕೆ ಬಂದಿರುವನು ' ಎಂದು ನಾಸಿ ಕ್ರಿಟೀಸನು ಹೇಳಿದನು. ಇದನ್ನು ಕೇಳಿ, ಆ ಮಹರ್ಷಿಗಳ ಮತ್ತು ಆ ಮಹಾ ಜನಗಳೂ ತುಂಬಾ ವಿಸ್ಮಿತರಾದರು. ಹೇಜಲ್‌ನನ್ನು ಕುರಿತು, ಆ ಮಹರ್ಷಿಗಳು. ಹೇಳಿದ್ದೇನಂದರೆ:- “ ಎಲೈ ಹೇಜಲ್‌ನೇ-ಈ ದ್ವೀಪದ ಪ್ರಭುತ್ವವನ್ನು ಟೆಲಿಮಾಕಸ್ಸನು ಹೇಗೋ ಹಾಗೆ ಮೆಂಟರನೂ ತಿರಸ್ಕಾರ ಮಾಡಿದನು. ಈ ಪ್ರಭುತ್ವವನ್ನು ವಹಿಸ ಬೇಕೆಂದು ನಿನ್ನನ್ನು ಕೇಳುವುದಕ್ಕೆ ನಮಗೆ ಭಯವಾಗುತ್ತದೆ. ಪ್ರಭುತ್ವವನ್ನು ತಿರ ಸ್ಕರಿಸುವುದಕ್ಕೆ ಅವರು ಉದಹರಿಸಿದ ಕಾರಣಗಳನ್ನೇ ನೀನೂ ಉದಹರಿಸಬಹುದು. ಇವರಿಬ್ಬರಿಗೂ ಪ್ರಭುತ್ವದ ಕಷ್ಟವು ಭಯವನ್ನು ಉಂಟುಮಾಡಿರುವುದು, ಇವರಿಗೆ ಸಂಪತ್ತಿನಲ್ಲಿಯೂ, ಅಧಿಕಾರದಲ್ಲಿಯ ಲೇಶವೂ ಆಶ ಇರುವುದಿಲ್ಲ, ಧರ್ಮದಿಂದ