ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1.3 ರಾಜ್ಯಭಾರ ಮಾಡಿ, ಅದರಿಂದ ಪ್ರಜೆಗಳು ಸಂತೋಷ ಪಟ್ಟರೆ, ಅವರ ಕಷ್ಟಕ್ಕೆ ಅದು ಪ್ರತಿಫಲವಲ್ಲವೇ ? ಈ ಪ್ರತಿಫಲವನ್ನೂ ಕೂಡ ಇವರು ತಿರಸ್ಕರಿಸಿದರು. ಈ ದ್ವೀಪನಿವಾಸಿಗಳ ಮೇಲೆ ಕೃಪೆಯನ್ನು ಇಟ್ಟು, ನೀನು ಏತಕ್ಕೆ ಈ ಪ್ರಭುತ್ವವನ್ನು ಪರಿಗ್ರಹಿಸಕೂಡದು ? ಟೆಲಿಮಾಕಸ್ ಮತ್ತು ವೆಂಟರನಂತೆ ನೀನೂ ನಮ್ಮ ಪ್ರಾರ್ಥ ನೆಗಳನ್ನು ತಿರಸ್ಕರಿಸಬೇಡ. ನಿನ್ನ ಪುಣ್ಯ ವಿಶೇಷದಿಂದ ಮೆಂಟರನು ನಿನಗೆ ಮೊದಲು ನೃತ್ಯನಾಗಿ, ಅನಂತರ ಮಿತ್ರನಾಗಿಯ, ಗುರುವಾಗಿ ಪರಿಣಮಿಸಿದನು, ಇವರಲ್ಲಿ ನೀನು ಇಟ್ಟಿರತಕ್ಕೆ ಪ್ರೀತಿಯಿಂದಲೇ ನೀನು ಮತಾನುಭಾವನಾಗಿರಬೇಕೆಂದು ತೋರುತ್ತದೆ, ನಾವು ಪ್ರಾರ್ಥಿಸತಕ್ಕ ಪದವಿಗೆ ನಿನಗಿಂತಲೂ ಅರ್ಹರು ನಮಗೆ ದೊರೆಯುವುದಿಲ್ಲ, ನಮ್ಮ ಪ್ರಾರ್ಥನೆಗಳನ್ನು ಲಾಲಿಸು. ಈ ದೇಶದ ಪ್ರಭುತ್ವ ವನ್ನು ಪರಿಗ್ರಹಿಸು " ಈ ರೀತಿಯಲ್ಲಿ ಮಹರ್ಷಿಗಳು ಹೇಳಲು, ಮಹಾಜನಗಳೆಲ್ಲರೂ ಎಲೈ ಹೇಬಲ್ ನೇ, “ ನಮ್ಮ ಮಹರ್ಷಿಗಳು ಮಾಡಿದ ಪ್ರಾರ್ಥನೆಗಳೆಂದು ತಿಳಿದುಕೊ. ಈ ಪ್ರಾರ್ಥ ನೆಗಳನ್ನು ನಿರಾಕರಿಸಬೇಡ, ನಮ್ಮಲ್ಲಿ ಕೃಪೆಯನ್ನು ಇಟ್ಟು, ಪ್ರಭುತ್ವವನ್ನು ಅಂಗೀ ಕರಿಸು ' ಎಂದು ಹೇಳಿದರು. ಅದಕ್ಕೆ ಹೇಜಲ್'ನು ಹೇಳಿದ್ದೇನಂದರೆ:- “ ಎಲೈ ಮಹರ್ಷಿಗಳೇ, ಎಲೈ ಕ್ರೀಟ್ ದ್ವೀಪದ ನಿವಾಸಿಗಳೇ, --ನಮ್ಮ ವಿಷಯದಲ್ಲಿ ಇಂಥಾ ತಪ್ಪು ಅಭಿಪ್ರಾಯಗಳನ್ನು ಇಟ್ಟು ಕೊಳ್ಳಬೇಡಿ, ಟೆಲಿಮಾಕ ಸೃನು ನಿಮ್ಮ ದ್ವೀಪದ ಪ್ರಭುತ್ವವನ್ನು ವಹಿಸುವುದಕ್ಕೆ ಇರತಕ್ಕೆ ಪ್ರತಿಬಂಧಕಗಳ «ಲ್ಲಾ ತಿಳಿಸಿರುವನು. ಅವನು ನಿಮಗೆ ವಿಜ್ಞಾಪಿಸಿದ ಕಷ್ಟಗಳು ಸನ್ನಿ ಹಿತವಾಗದೆ ಇದ್ದಿದ್ದರೆ, ನಿಮ್ಮ ಪ್ರಾರ್ಥನೆಗಳನ್ನು ಅವನು ನಿರಾಕರಿಸುತ್ತಿರಲಿಲ್ಲ. ಮೆಂಟರನು ನಿಮ್ಮ ಕ್ಷೇಮಾರ್ಥವಾಗಿ ಮಾಡಿರುವ ಹಿತೋಪದೇಶದ ಅರ್ಥವನ್ನು ನೀವು ಸರಿ ಯಾಗಿ ತಿಳಿದು ಕೊಳ್ಳಲಿಲ್ಲ. ಈ ದ್ವೀಪದ ಪ್ರಭುತ್ವವು ಬಹಳ ಜವಾಬ್ದಾರಿಯು ಇದ್ದು, ಆ ಜವಾಬ್ದಾರಿಗೆ ತಕ್ಕಂತೆ ಕಷ್ಟವೂ ಇರುವುದು, ವಿಚಾರವಿಹೀನರಿಗೆ ಪ್ರಭುತ್ವದ ಗಿಲೀಟು ವಿಸ್ಮಯವನ್ನುಂಟುಮಾಡುವುದು, ವಿಚಾರಪರರಾದವರಿಗೆ ಪ್ರಭುತ್ವದ ಜವಾಬ್ದಾರಿಯು ಭಯವನ್ನುಂಟುಮಾಡುವುದು, ಪ್ರಭುತ್ವವನ್ನು ವಹಿ ಸುವುದು ಕಷ್ಟವಲ್ಲ. ವಹಿಸಿದ ಮೇಲೆ, ಅದರ ಜವಾಬ್ದಾರಿಗೆ ನ್ಯೂನತೆಯುಂಟಾಗ ದಂತೆ ಮಾಡುವುದು ಬಹಳ ಶ್ರಮಸಾಧ್ಯವಾದದ್ದು. ಈ ಪದವಿಯು ನಮಗೆ ಬೇಡ