ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 { ವೆಂದು ಹೇಳಿದ್ದಕ್ಕೆ, ನಿಮ್ಮಲ್ಲಿ ತಿರಸ್ಕಾರವು ಕಾರಣವಲ್ಲ, ನಿಮ್ಮ ಕ್ಷೇಮದಲ್ಲಿ ಆಸ ಕ್ರಿಯೇ ವ ುಖ್ಯ ಕಾರಣ, ನಿಮ್ಮ ಪೂರ್ವಾ ಪರಗಳನ್ನು ತಿಳಿದುಕೊಂಡವನಾಗಿಯೂ, ದಕ್ಷನಾಗಿಯ, ಪಾಪಭೀತನಾಗಿಯ, ಧರ್ಮಿಷ್ಟನಾಗಿಯ ಇರತಕ್ಕೆ ಪ್ರಭುವು ನಿಮಗೆ ದೊರೆಯಲೆಂದು ಮೆಂಟರನು ಪ್ರಭುತ್ವ ವನ್ನು ಪರಿಗ್ರಹಿಸಲಿಲ್ಲವೇ ಹೊರತು, ಬೇರೆ ಯಾವ ಕಾರಣಗಳಿಂದ ಆತನು ಪ್ರಭುತ್ವವನ್ನು ತಿರಸ್ಕರಿಸಲಿಲ್ಲ, ನಿಮಗೆ ಮಂಗಳವಾಗಲಿ. ನನಗೆ ಪೂರ್ವ ವಯಸ್ಸು ಕಳೆದಿರುವುದು, ವಾನಪ್ರಸ್ಥಾಶ್ರಮ ದಲ್ಲಿ ಇರುವೆನು, ಸನ್ಯಾಸವನ್ನು ಸಂಗ್ರಹಿಸುವುದರಲ್ಲಿ ಇರುವೆನು, ದೈವಯೋಗ ದಿಂದ ಮೆಂಟರನ ಸಹವಾಸವೂ, ಸಾನ್ನಿಧ್ಯ ವೂ ನನಗೆ ದೊರೆಯಿತು. ಈ ಪ್ರಪಂಚದ ಸೃಷ್ಟಿಸ್ಟಿತಿಪ್ರಳಯಗಳ ವಿಚಾರವನ್ನೂ , ಇವುಗಳಿಗೆಲ್ಲಾ ಕಾರಣಭೂತನಾದ ಜಗದೀ ಶ್ವರನ ಮಹಿಮೆಯನ್ನೂ ಈತನಿಂದ ತಿಳಿದುಕೊಳ್ಳುವುದು ಒಂದು ವಿನಾ ನನಗೆ ಇನ್ಯಾವುದರಲ್ಲಿಯ ಆಶೆ ಇರುವುದಿಲ್ಲ, ಪ್ರಭುತ್ವದಲ್ಲಿ ನನಗೆ ಆಶೆಯು ಇಲ್ಲ. ಪ್ರಭುತ್ವದ ಭಾರವನ್ನು ವಹಿಸಲು ನನಗೆ ಶಕ್ತಿಯೂ ಇಲ್ಲ. ನಮ್ಮಲ್ಲಿ ಕೃಪೆಯನ್ನು ಇಟ್ಟು ಮನ್ನಿಸಬೇಕು, ಈ ರೀತಿಯಲ್ಲಿ ಹೇಒಳ್ನು ಹೇಳಿದ್ದನ್ನು ಕೇಳಿ, ಎಲ್ಲರೂ ಆಶ್ವರದಿಂದಲೂ, ವಿಷಾದದಿಂದಲೂ ಪರವಶರಾಗಿ, ದಿಕ್ಕು ತೋರದೆ ಇದ್ದರು, ಆಗ ಸದರಿ ಮಹರ್ಷಿ ಗಳು ಮೆಂಟರನನ್ನು ನೋಡಿ, ಹೇಳಿದ್ದೇನಂದರೆ: -

  • ಎಲೈ ಮೆಂಟರನೇ,-ಟೆಲಿಮಾಕಸ್ಸನೂ, ಹೇಜಲ್ನೂ ಹೇಳಿದ ಮಾತುಗ ಳನ್ನೂ ಕೇಳಿದೆವು ನಿನ್ನ ಒತೋಪದೇಶವನ್ನೂ ಕೇಳಿದೆವು, ಮನುಷ್ಯ ಜನ್ಮ ವನ್ನು ಎತ್ತಿದವರಲ್ಲಿ ನಿನಗಿಂತಲೂ ವಿವೇಕ ಶಾಲಿಗಳೂ, ಮಹಾತ್ಮರೂ ಇರುವಂತೆ ತೋರುವುದಿಲ್ಲ, ನೀನು ಅವತಾರ ಪುರುಷನೆಂದು ತೋರುತ್ತದೆ. ಭೂತಭವಿಷ್ಯ

ದ್ವರ್ತಮಾನಗಳೆಲ್ಲಾ ನಿನಗೆ ಕರತಲಾಮಲಕವಾಗಿರುವುವು, ನಮ್ಮ ದೇಶವು ಅನಾ ಯಕವಾಗಿರುವುದು, ನಮಗೆ ಯೋಗ್ಯನಾದ ಪ್ರಭುವು ಬೇಕು, ನೀವು ಮೂರು ಜನಗಳೂ ಈ ಪ್ರಭುತ್ವವನ್ನು ತಿರಸ್ಕರಿಸಿದಿರಿ, ಯೋಗ್ಯನಾದ ಪ್ರಭುವನ್ನು ಚುನಾ ಯಿಸಿಕೊಳ್ಳುವುದಕ್ಕೆ ನಾವು ಏನು ಮಾಡಬೇಕು ? ಈ ವಿಷಯದಲ್ಲಾದರೂ ನಮಗೆ ಹಿತೋಪದೇಶವನ್ನು ಮಾಡು, ಸರಿ Kಾದ ಪ್ರಭುವನ್ನು ಚುನಾಯಿಸುವುದಕ್ಕೆ ನಮಗೆ ಮಾರ್ಗದರ್ಶನವನ್ನಾದರೂ ಮಾಡು, ಹಾಗೆ ಮಾಡಿದ ಹೊರತು, ನಾವು ನಿಮ್ಮನ್ನು ಬಿಡತಕ್ಕವರಲ್ಲ. ??