ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1.) ಈ ರೀತಿಯಲ್ಲಿ ಮಹರ್ಷಿಗಳೇ ಮೊದಲಾದ ಮಾಜನಗರೆಲ್ಲರೂ ಹೇಳಲು, ಮೆಂಟರನ ಇವರಿಗೆ ಉತ್ತರವನ್ನು ಕೊಟ್ಟನು, ಅವನು ಹೇಳಿದ್ದೇನಂದರೆ:- “ ಅ೦ಗಸಾಧನೆಯ ಪೋಚಾಪೇಟಿಯಾಗುತ್ತಿರುವಾಗ, ನಾನು ಪ್ರೇಕ್ಷಕರ ಮಧ್ಯದಲ್ಲಿ ಇದ್ದೆನು. ಎಲ್ಲೆಲ್ಲಿಯ ಬಹಳ ಗಲಾಟೆಯಾಗುತ್ತಿತ್ತು, ಪ್ರೇಕ್ಷಕ ರೆಲ್ಲರೂ ಉತ್ಸಾಹಪರವಶರಾಗಿದ್ದರು. ಅವರಲ್ಲಿ ಶಾಂತಚಿತ್ತನಾದ ಒಬ್ಬ ಮನು ಫ್ಯನು ಇದ್ದನು. ಅವನು ಅರೋಗದೃಢಕಾಯನಾಗಿದ್ದನು. ಆದಾಗ್ಯೂ ವೃದ್ದ ನಾಗಿರುವಂತೆ ಕಾಣಬಂತು, ' ಇವನು ಯಾರು ? ಇವನ ಹೆಸರೇನು ? " ಎಂದು ವಿಚಾರಿಸಿದೆನು. " ಇವನು ಹೆಸರು ಅರಿಸ್ಕೋಡಿಮಸ್ ' ಎಂಬದಾಗಿ ಹೇಳಿದರು. ಈ ಅಂಗಸಾಧನೆಯ ಪೊಟಾವೋ:ಟಿಗೆ ನಿನ್ನ ಇಬ್ಬರು ಮಕ್ಕಳೂ ಉಮೇದುವಾರರಾಗಿ ರುವರೆಂದು ಈತನಿಗೆ ಒಬ್ಬ ಮನುಷ್ಯನು ಹೇಳಿದನು. ಅದನ್ನು ಕೇಳಿ, ಈತನು ತುಂಬಾ ಅಸಮಾಧಾನ ಪಟ್ಟನು. “ ಏತಕ್ಕೆ ಅಸಮಾಧಾನ ಪಡುತ್ತೀಯೆ ? ಈ ಪೋಟಾಫೋಟಿಯಲ್ಲಿ ನಿನ್ನ ಮಕ್ಕಳಲ್ಲಿ ಯಾರಾದರೂ ಒಬ್ಬರು ಉತ್ತೀರ್ಣರಾಗಬ ಹ.ದು, ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಪ್ರಭುತ್ವವಾಗಬಹುದು. ಇದು ನಿನಗೆ ಸಂತೋಷ ಒನಕವಾದದ್ದಲ್ಲವೇ ? ' ಎಂದು ಆತನು ಕೇಳಿದನು. “ ಇವರಲ್ಲಿ ಉತ್ತೀರ್ಣರಾದರೆ ಏನು ಗತಿ ಎಂಬ ಭಯವು ನನಗೆ ಉಂಟಾಗಿರುವುದು, ಇವರಲ್ಲಿ ಒಬ್ಬನು ಬಹಳ ಗಣತ್ಥನು. ಇವನು ಉತ್ತೀರ್ಣನಾದರೆ, ಪ್ರಭುತ್ವದ ಭಾರವು ಇವನಿಗೆ ಬಹಳ ಕ್ಷೇಶವನ್ನುಂಟುಮಾಡುವುದು. ಇಂಥಾ ಕ್ಷೇಶವು ಬಂದಾಗ್ಯೂ ಚಿಂತೆಯಿಲ್ಲ, ಸಹಸ್ರಾಕ್ಷನಿಗೂ ಕೂಡ ಧರ್ಮದಿಂದ ರಾಜ್ಯಭಾರ ಮಾಡುವುದು ಕಷ್ಟವಾಗುತ್ತದೆ. ಇವನು ಇನ್ನೂ ಚಿಕ್ಕವನು, ಇವನಿಗೆ ಇಂಥಾ ಭಾರವು ಸಂಭವಿಸಿದರೆ ಏನು ಗತಿಯೆಂದು ವ್ಯಸನವಾಗುತ್ತದೆ ಎರಡನೇ ಹುಡಗನು ದುರ್ಮಾರ್ಗಪ್ರವರ್ತಕನು ಇವನು ಈ ಪೊ ಟಾವೊಟಿ ಯಲ್ಲಿ ಬಿದ್ದು, ಪ್ರಭುವಾದರೆ ಈ ದ್ವೀಪವನ್ನೇ ನಾಶಮಾಡಿ, ಹುಚ್ಚರ ಆಸ್ಪತ್ರೆಯಲ್ಲಿ ಸಾಯುವ ಗತಿಯು ಇವನಿಗೆ ಬರುವುದು, ಇದೂ ನನಗೆ ವ್ಯಸನವನ್ನುಂಟುಮಾಡಿರುವುದು ' ಎಂದು ಆರಿಕ್ಕೋಡಿ ಮಸ್‌ನು ಹೇಳಿದನು. ಈ ಮಾತು ನನ್ನ ಕಿವಿಗೆ ಬಿದ್ದಿತು. ಇವನ ವೃತ್ತಾಂತ ವನ್ನು ತಿಳಿದುಕೊಳ್ಳಬೇಕೆಂದು ನನಗೆ ಆಶೆ ಯು ಹುಟ್ಟಿತು, ಇವನ ಪೂರ್ವೋತ್ತರ ಗಳನ್ನು ವಿಚಾರಿಸಿದೆನು. ಇವನು ಈ ದೇಶದ ಮಿಲಿಟೆರಿ ಸರ್ವಿಸ್ಸಿನಲ್ಲಿ ಬಹಳ ಜವಾ