ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಎ ., , - \ A / ಬ್ಯಾರಿ ಕೆಲಸವನ್ನು ವಹಿಸಿದ್ದನೆಂದು ಗೊತ್ತಾಯಿತು. ಅನೇಕ ಯುದ್ಧಗಳಲ್ಲಿ ಈತನು ಈ ದ್ವೀಪರಕ್ಷಣೆಗೋಸ್ಕರ ಯುದ್ಧ ಮಾಡಿರುವನೆಂದು ತಿಳಿಯಬಂದಿತು. ಕತ್ತಿಯ ಘಾಯಗಳಿಂದ ಆಗಿರತಕ್ಕ ಗುರ್ತು ಈ ತನ ದೇಹದ ಎಲ್ಲಾ ಭಾಗಗಳ ಲ್ಲಿಯೂ ಕಾಣಬಂದಿತು. ಇವನು ಕೇವಲ ಪ್ರಾಮಾಣಿಕನಾದುದರಿಂದಲೂ, ನೀನೇ ಇ೦ದ್ರ, ಚಂದ್ರ, ಮಹೇಂದ್ರರೆಂದು ಸ್ತುತಿಸುವುದು ಇವನಿಗೆ ಅನಿಷ್ಠವಾಗಿದ್ದದ್ದ ರಿಂದಲೂ, ಇಡುಮಿನಿಯಸ್ಸನ ನ್ಯೂನಾತಿರಿಕ್ತಗಳನ್ನು ಅವನಿಗೆ ನಿರ್ಭಯವಾಗಿ ನಿರ್ದಾ ಕ್ಷಿಣ್ಯದಿಂದ ಇವನು ಹೇಳುತ್ತಿದ್ದದ್ದರಿಂದಲೂ ಇವನಲ್ಲಿ ಆ ಪ್ರಭುವಿಗೆ ಅಸಮಾಧಾನವು ಉಂಟಾಯಿತು. ಟ್ರಾಯ್‌ ದೇಶದ ಯುದ್ಧವು ಸನ್ನಿ ಹಿತವಾದದ್ದರಿಂದ, ಇವನನ್ನು ಕರೆದುಕೊಂಡು ಹೋದರೆ, ಅವನಿಗೆ ಕೀರ್ತಿಯು ಒರುವುದೆಂಬ ಹೊಟ್ಟೆಕಿಚ್ಚಿನಿಂದ ಇಡು ಮೀನಿಯಸ್ಸನು ಅವನನ್ನು ಕ್ರೀಟ್ ದ್ವೀಪದಲ್ಲಿಯೇ ಬಿಟ್ಟು, ತಾನು ಪ್ರಾಮ್ ದೇಶಕ್ಕೆ ಪ್ರಯಾಣ ಮಾಡಿದನೆಂದು ಗೊತ್ತಾಯಿತು. ಈ ಅರಿಸ್ಟೋಡಿಮಸ್ಸನು ಮನೋವಾಕ್ಕರ್ಮಗಳಲ್ಲಿಯೂ ರುಜುಮಾರ್ಗವನ್ನು ಅವಲಂಬಿಸಿ, ಪ್ರಭವೂ, ಅವನ ಪರಿವಾರ ದೇವತೆಗಳೂ ಮಾರ್ಗ ತಪ್ಪಿ ನಡೆದರೆ, ಅವರನ್ನು ನಿರ್ದಾಕ್ಷಿಣ್ಯವಾಗಿ ತಿದ್ದುತ್ತಾ ಇದ್ದನೆಂಬದಾಗಿ ತಿಳಿಯಬಂತು, ಅದಕ್ಕಾಗಿ ಇಡುಮಿನಿಯಸ್ಸನೂ, ಅವನ ಪರಿವಾರದೇ: ತೆಗಳೂ ಅವನ ಮೇಲೆ ದುರಾಗ್ರಹವನ್ನು ಮಾಡಿ, ಅಧಿಕಾರದಿಂದ ತೆಗೆದುಹಾಕಿ, ರ್ಸೆ ರ್ಷ ವಗೈರೆಗಳನ್ನೂ ಕೂಡ ಕೊಡದೆ, ಅತ್ಯಂತ ದರಿದ್ರಾವಸ್ಥೆಗೆ ತಂದರೆಂದು ಗೊತ್ತಾಯಿತು. ಅದರಿಂದಲೂ ತಗ್ಗದೆ, ಅರಿಸ್ಕೋ ಡಿಮಸ್ಸನು ಈ ದ್ವೀಪಕ್ಕೆ ಸೇರಿದ ಒಂದು ಗ್ರಾಮದಲ್ಲಿ ಕೃಷಿಯನ್ನೂ , ಕೂಲಿಯನ್ನೂ ಮಾಡಿ ಕೊಂಡು ಜೀವನಮಾಡುತ್ತಲದಾನೆಂಬದಾಗಿಯ, ಇವನ ಮಕ್ಕಳಲ್ಲಿ ಗುಣ ಘ್ನನಾದ ಮಗನು ಇವನ ಜೊತೆಯಲ್ಲಿ ಕೂಲಿಯನ್ನು ಮಾಡ ತಲಿರುವನೆಂಬದಾಗಿಯ, ಹಗಲೂ ರಾತ್ರಿ ಕೆಲಸಮಾಡಿ, ಇಬ್ಬರೂ ಕುಟುಂಬ ರಕ್ಷಣೆಯನ್ನು ಮಾಡಿಕೊಂಡು, ಆ ಗ್ರಾಮ ನಿವಾಸಿಗಳ ಪ್ರೀತಿಗೆ ಪಾತ್ರರಾಗಿ ಇರುವರೆಂಬದಾಗಿ ಯ, ಈ ಕೂಲಿಯಿಂದ ಸಂಪಾ ಸಿದ ದ್ರವ್ಯದಲ್ಲಿಯೂ ಕೂಡ ಈ ತಂದೆ-ಮಕ್ಕಳು ಅನ್ನ ವಸ್ತ್ರಗಳಿಗೆ ಮಾರ್ಗವನ್ನು ಮಾಡಿಕೊಂಡು, ಗ್ರಾಮನಿವಾಸಿಗಳಲ್ಲಿ ಕೇವಲ ಬಡವರಾದವರಿಗೆ ಸಹಾಯ ಮಾಡು ತಲಿರುವರೆಂಬದಾಗಿಯ, ಗ್ರಾಮಸ್ತರಲ್ಲಿ ಪರಸ್ಪರ ದ್ವೇಷ ಉಂಟಾಗುವ ಸಂಭವವು ಬಂದ ಕೂಡಲೆ, ಈತನು ಪಂಚಾಯಿತನಾಗಿ, ವ್ಯಾಜವನ್ನು ತೀರಿಸುತ್ತಾ, ಸ್ನೇಹ