ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವನ್ನು ಮಾಡಿಸುತ್ತಾ, ಆ ಗ್ರಾಮದ ಪ್ರತಿ ಒಂದು ಕುಟುಂಬಕ್ಕೂ ತಂದೆ ಯಂತೆಯ, ಗ.ರುಸಿನಂತೆಯ ಇರುವನೆಂಬದಾಗಿಯೂ, ಇವನ ಎರಡನೇ ಮಗನು ಅಶಿಕ್ಷಿತನಾಗಿ ಇದ್ದದ್ದರಿಂದ, ಇವನು ಬtಳ ವ್ಯಸನಪಡುತ್ತಿರುವನೆಂಬದಾಗಿಯೂ, ಸದರಿ ಮಗನನ್ನು ಹತೋಟಿಗೆ ತರುವದು ಕಷ್ಟವಾದದ್ದರಿಂದ, ಅವನನ್ನು ಮನೆ ಬಿಟ್ಟು ಓಡಿಸಿರುವನೆಂಪಿದಾಯ, ಈ ತುಂಟ ಹುಡುಗನು ತುಂಟರಲ್ಲಿ ಅಗ್ರಗಣ್ಯ ನಾಗಿ, ಪ್ರಭುತ್ವಕ್ಕೆ ಉಮೇದುವಾರನಾಗಿ, ಪೋಟಾವೋಟಿಗೆ ಬಂದಿರುವುದರಿಂದ, ಇವನು ಪ್ರಭುವಾದರೆ, ಈ ದ್ವೀಪಕ್ಕೆ ಗತಿಯೇನು ಎಂದು ಚಿಂತಾಕ್ರಾಂತನಾಗಿರು ವನು ಎಂಬದಾಗಿಯೂ ತಿಳಿಯಬಂದಿತು. ಎಲೈ ಮಹನೀಯರೇ-ಇವನ ಪೂರ್ವೋತ್ತರಗಳು ನನಗೆ ಸಾಕ್ಷಾತ್ತಾಗಿ ತಿಳಿಯದು. ಪ್ರೇಕ್ಷಕರಲ್ಲಿ ಕೆಲವರನ್ನು ಕೇಳಿ, ಇಷ್ಟು ವಿಷಯಗಳನ್ನು ತಿಳಿದುಕೊಂಡೆನು. ಇದೆಲ್ಲಾ ನಿಜವಾದ ಪಕ್ಷದಲ್ಲಿ, ಈ ಪೋಟಾವೋಟಿಯ ಪರೀಕ್ಷೆಗಳನ್ನು ನೀವು ಏತಕ್ಕೆ ಮಾಡಬೇಕಾಗಿತ್ತು ? ಈ ಪರೀಕ್ಷೆಗಳಿಗೆ ಪರದೇಶೀಯರನ್ನ ಕೂಡ ಸಿತಕ್ಕೆ ಸೇರಿಸಬೇಕಾಗಿತ್ತು ? ನಿಮ್ಮ ಲ್ಲಿಯೇ ನಿಮ್ಮ ಪೂರ್ವಾಪರಗಳನ್ನು ತಿಳಿದ ಮನುಷ್ಯ ವಿರುವುದಿಲ್ಲವೇ ? ಅವನ ಪೂರಾ ಪರಗಳು ನಿನಗೆ ತಿಳಿಯದೇ ? ಈತನು ಮಿಲಿಟಿ ಶಾಸ್ತ್ರ ವಿಶಾರದನಲ್ಲವೇ ? ಇವನ ಧೈರಸ್ಸೆಲ್ಯಗಳನ್ನು ಇವನ ದೇಹದ ಮೇಲಿರತಕ್ಕ ಕತ್ತಿ ಏಟಿನ ಗುರ್ತುಗಳು ತೋರಿಸುತ್ತಲಲ್ಲವೇ ? ದಾರಿದ್ರದ ಮತಿಮೆಯಿಂದ ಇವನು ತಗ್ಗಿರುವನೇ ? ಸಂಪ ತಿನಿಂದ ಇವನು ಹಿಗ್ಗು ವನೇ ? ಹೊನ್ನು, ಹೆಣ್ಣು, ಮಣ್ಣುಗಳ ಮೇಲಿನ ಆಶೆಯು ಇವರಿಗೆ ಇರುವುದೇ ? ಮೃವಾಸ್ತುತಿಗಳಿಗೆ ಇವನು ಅಧೀನನಾಗುವನೇ ? ಅಧಿಕಾರ ದಿಂದ ತೆಗೆಯಲ್ಪಟ್ಟಾಗ್ಯೂ, ಕೂಲಿ ಮಾಡಿ ಕೊಂಡು ಇವ: ಜೀವಿಸುತ್ತಲಿರುವುದಿ ಲ್ಲವೇ ? ಕಷಕರಲ್ಲಿ ಅಗ್ರಗಣ್ಯನಾಗಿರುವುದಿಲ್ಲವೇ ? ಇವು ನಿಗರ್ವಶಿರೋಮಣಿ ಯಾಗಿರವುದಿಲ್ಲವೇ ? ಇ೦ದ್ರಿಯಗಾಮಗಳಿಗೆ ಇವನ ಅಧೀನನಾಗಿರುವನೇ ? ದುರ್ಮಾರ್ಗಪ್ರವರ್ತಕನಾದ ಮಗನನ್ನೂ ಕೂಡ ಇವನು ನಿರ್ದಾಕ್ಷಿಣ್ಯದಿಂದ ದಂಡಿ ಸಿರುವುದಿಲ್ಲವೇ ? ಗ್ರಾಮಸ್ತರೆಲ್ಲರೂ ಇವನಲ್ಲಿ ಪಿತೃಸಿರ್ಪಿಶೇಷವಾದ ಭಕ್ತಿಯನ್ನು ಇಟ್ಟಿರುವುದಿಲ್ಲವೇ ? ಇವನು ಗ್ರಾಮದವರನ್ನೆಲ್ಲಾ ಪುತ್ರನಿರ್ವಿಶೇಷವಾಗಿ ಕಾಣುತ್ತಿ ರುವುದಿಲ್ಲವೇ ? ಗೃಹವು ಚಿಕ್ಕ ರಾಜ್ಯ ವಲ್ಲವೇ ? ಗ್ರಾಮವು ಅದಕ್ಕಿಂತ ದೊಡ್ಡ