ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 1 - 5 ರಾಜ್ಯವಲ್ಲವೇ ? ಇವನು ಕುಟುಂಬವನ್ನು ಸರಿಯಾಗಿ ಇಟ್ಟು ಕೊಂಡಿರುವುದಿಲ್ಲವೇ ? ಅಧಿಕಾರವಿಲ್ಲದೆ ಇದ್ದಾಗ್ಯೂ, ಗ್ರಾಮಸ್ತರೆಲ್ಲಾ ಇವನೇ ಆ ಗ್ರಾಮಕ್ಕೆ ಪ್ರಭುವಾ ಗಿದ್ದರೆ ಹೇಗೆ ಹಾಗೆ ಇವನನ್ನು ಪೂಜಿಸುವುದಿಲ್ಲವೇ ? ಈ ದ್ವೀಪಕ್ಕೆ ಪ್ರಭುವಾ ಗುವುದಕ್ಕೆ ಇವನಿಗೆ ಅರ್ಹತೆಯು ಇರುವುದೋ ಇಲ್ಲವೋ ಎಂಬುವುದನ್ನು ಗೊತ್ತು ಮಾಡುವುದಕ್ಕೆ ನೀವು ಅರ್ಹರಾಗಿರುವುದಿಲ್ಲವೇ ? ಇಂಥಾ ವ ನುಷ್ಯನು ಇರ ವಾಗ್ಯ, ಅವನನ್ನು ಮರೆತು, ನೀವು ಪ್ರಭು ಪದವಿಗೆ ಪರದೇಶೀಯರಲ್ಲಿ ಯಾರು ಇರುವರೆಂದು ಹುಡುಕುತ್ತಿರುವುದನ್ನು ನೋಡಿದರೆ ನನಗೆ ಎಸ್ಮಯ ವಾಗುತ್ತದೆ. ' ಈ ರೀತಿಯಲ್ಲಿ ಮೆಂಟರನು ಹೇಳಿದ ಕೂಡಲೆ, ಅರಿಸ್ಕೊಡಿಮಸ್ಸನ ಹರಿ ತ್ರೆಯ ಸತ್ವರ ಸ್ಮತಿಸಥಕ್ಕೂ ಬಂದಿತ) ' ಮೆಂಟರನು ನಿರೂಪಿಸಿದ ಗ ಣಾತಿಶ ಯಗಳೆಲ್ಲಾ ಅರಿಸ್ಟೋಡಿವಸ್ಥನಲ್ಲಿ ವರ್ತಿ ಆಭವಿಸಿರುವುದು, ಈತನಿಗಿಂತಲೂ ನಮಗೆ ಪ್ರಭುವಾಗುವುದಕ್ಕೆ ಹೆಚ್ಚು ಅರ್ಹತೆಯುಳ್ಳವರು ಯಾರೂ ಇರುವುದಿಲ್ಲ' ಎಂಬದಾಗಿ ಅಲ್ಲಿ ಸೇರಿದ ಮುಖಂಡರಾದ ಮಹಾಜನಗಳೆಲ್ಲರೂ ವಿಜ್ಞಾಪಿಸಿದರು. ಅರಿಸ್ಕೊಡಿಮಸ್ಸನನ್ನು ಕರೆದುಕೊಂಡು ಬರಬೇಕೆಂದು ಸಭೆಯ ವೆ.೦ಬರಗಳಾದ ಮಹರ್ಷಿಗಳು ಆಜ್ಞಾಪಿಸಿದರು, ಅಲ್ಲಿ ನೆರೆದಿದ್ದ ಮಹಾ ಜನಗಳಲ್ಲಿ ಆತನು ಎಲ್ಲಿಯೋ ಒಂದು ಕಡೆ ಇದ್ದನು. ಮಹರ್ಷಿಗಳ ಅಪೇಕ್ಷೆಯು ಆತನಿಗೆ ತಿಳಿಸಲ್ಪಟ್ಟಿತು. ಅವರ ಆಜ್ಞೆಯನ್ನು ಶಿರಸಾ ವಹಿಸಿ, ಆತನು ಸಭಾನುಧ್ಯ ಕ್ಕೆ ಬಂದನು, ಶಾಂತಿಯು ಅವನ ಮುಖದಲ್ಲಿ ತಾಂಡವವಾಡುತ್ತಿತ್ತು. ಇವನ ಮುಖವನ್ನು ನೋಡಿದ ಕೂಡಲೆ, ಮಹರ್ಷಿಗಳಿಗೂ, ಅಲ್ಲಿ ಸೇರಿದ್ದ ಮಹಾಜನಗಳಿಗ ಅನಿರ್ವಚನೀಯವಾದ ಭಕ್ತಿಯು ಉಂಟಾಯಿತು. “ ಈ ಮಹರ್ತಗಳು ಅವನಿಗೆ ಸತ್ಕಾರವನ್ನು ಮಾಡಿ, ಉಚಿತವಾದ ಆಸನವನ್ನು ಕೊಟ್ಟು, ಅವನು .ಠವನ್ನು ಅಲಂಕರಿಸಿದ ಕೂಡಲೆ, “ ನಿನ್ನ ಚರಿತ್ರೆಯನ್ನು ಕೇಳಿ, ಅತ್ಯಂತ ಸಂತುಷ್ಟನಾಗಿ, ಮೆಂಟಿನು ಈ ದ್ವೀಪದ ಪ್ರಭುತ್ವಕ್ಕೆ ನಿನಗಿಂತ ಹೆಚ್ಚು ಅರ್ಹ ತೆಯುಳ್ಳವರು ಸಿಕ್ಕುವುದಿಲ್ಲ' ಎಂದು ಅಪ್ಪಣೆ ಕೊಡಿಸಿರುವನು. ಮಹಾಜನ ಗಳ ಅಭಿಪ್ರಾಯವೂ ಹಾಗೆಯೇ ಇರುವುದು, ಈ ದ್ವೀಪದ ಪ್ರಭುತ್ವವನ್ನು ನಿನಗೆ ವಹಿಸಬೇಕೆಂದು ನಾವೆಲ್ಲರೂ ನಿಷ್ಕರ್ಷೆ ಮಾಡಿ ಇದೇವೆ. ಈ ದ್ವೀಪನಿವಾಸಿಗಳಲ್ಲಿ ಕೃಪೆಯನ್ನು ಇಟ್ಟು, ಈ ದ್ವೀಪದ ಪ್ರಭುತ್ವ ವನ್ನು ವಹಿಸಿ, ಎಲ್ಲರನ್ನೂ ಪರಿಪಾಲಿಸುವುದರ ಮೂಲಕ ಸೀನೂ ಧನ್ಯತೆಯನ್ನು ಪಡೆ