ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 |

  • * * * * * * *
  • * * v/ು.

ಯಬೇಕು' ಎಂದು ನಾವು ಪ್ರಾರ್ಥಿಸುತ್ತೇವೆ ಎಂಬದಾಗಿ ಹೇಳಿದರು, ಅದಕ್ಕೆ ಅb ಸ್ಕೋಡಿಮಸ್ಸನು ಹೇಳಿದ್ದೇನಂದರೆ:-

  • ಟೆಲಿಮಾಕಸ್ಸನು, ಮೆಂಟರು, ಹೇಜಲ್ ನು ಈ ಮೂರು ಜನಗಳೂ ಈ ದ್ವೀಪದ ಪ್ರಭುತ್ವದ ಭಾರವನ್ನು ವಹಿಸುವುದಕ್ಕೆ ಹಿಂತೆಗೆದಿರುವರು. ಹಾಗೆ ಹಿಂತೆ ಗೆಯುವುದಕ್ಕೆ ಇವರು ಕೊಟ್ಟಿರತಕ್ಕೆ ಕಾರಣಗಳನ್ನು ನೀವು ಕೇಳಿ ಇರುವಿರಿ ಟೆಲಿಮಾಕಸ್ಸನು ಹೇಳಿರುವ ಕಾರಣಗಳು ಸಾಧುವಾಗಿ ಇವೆ. ಈ ತನ ದೇಶಕ್ಕೂ, ಈತನ .ವಾತೃಶ್ರೀಯವರಿಗೆ ಉಂಟಾಗಿರತಕ್ಕೆ ಕಷ್ಟವನ್ನು ತಪ್ಪಿಸು ವುದು ಇವನಿಗೆ ಪ್ರಥಮ ಕರ್ತವ್ಯ. ಆ ಕರ್ತವ್ಯವನ್ನು ಮಾಡುವುದಕ್ಕೆ ಅವನು ಹೋಗಬಹುದು, ಮೆಟರನ ಸಹಾಯವಿಲ್ಲದೆ, ಟೆಲಿಮಾಕಸ್ಸನು ಅವನ ಕೆಲಸಗ

ಇನ್ನು ನಿರ್ವಹಿಸುವುದು ಅಸಾಧ್ಯವಾದರೆ, ಮೆಂಟರನೂ ಅವನ ಸಹಾಯಕ್ಕೆ ಹೋಗ ಬಹುದು, ಹೇಜಲ್‌ನು ಪ್ರಭುತ್ವವನ್ನು ತಿರಸ್ಕರಿಸಿದ್ದು ಯುಕ್ತವಾಗಿ ತೋರುವು ದಿಲ್ಲ. ವಯಸ್ಟಾದಾಗ , ವಾನಪ್ರಸ್ಪದೆಸೆಯಲ್ಲಿದ್ದಾಗ್ಯೂ, ಸನ್ಯಾಸಿಯಾದಾಗ, ಲೋಕದ ಕ್ಷೇಮರ್ಥವಾಗಿ ಮಾಡತಕ್ಕ ಕೆಲಸಗಳನ್ನು ಮಾಡಿಯೇ ಮಾಡಬೇಕು. ಸನ್ಯಾಸವೆಂದರೆ, ಆತ್ಯಾರ್ಧವಾದ ಕರ್ಮಗಳನ್ನು ಪರಿತ್ಯಾಗ ಮಾಡುವುದೆಂದು ಅರ್ಥವೇ ಹೊರತು, ಲೋಕಹಿತಾರ್ಥವಾದ ಕರ್ಮಗಳನ್ನು ಬಿಡುವುದೆಂದು ಅರ್ಥ ವಲ್ಲ, ದೇಶದ ಚರಿತ್ರೆಯನ್ನೂ , ಮಹಾಜನಗಳ ಶೀಲಸ್ವಭಾವಗಳನ್ನೂ ತಿಳಿದಿರತಕ್ಕ ವರೇ ಪ್ರಭುತ್ವವನ್ನು ವಹಿಸಬೇಕೆಂದು ಇವರೆಲ್ಲರೂ ಹೇಳಿರುವರು, ಜಿತೇಂದ್ರಿಯ ರಾಗಿಯ, ಅರಿಷಡ್ವರ್ಗಗಳಿಗೆ ಅಧೀನರಾಗದೆಯ, ಮನೋವಾಕ್ಕರ್ಮಗಳಲ್ಲಿ ಪರಿಶುದ್ಧರಾಗಿಯ ಇರತಕ್ಕ ವರಿಗೆ ಈ ಯೋಗ್ಯತೆಯು ಇಲ್ಲದೆ ಹೋಗುವುದ ರಿಂದ, ಯಾವ ಬಾಧಕವೂ ಇರುವುದಿಲ್ಲ. ಹೇಜಲ್‌ನು ಈ ವಿಷಯವನ್ನು ಪುನಃ ಪರಾಲೋಚಿಸಿ, ಪ್ರಭುತ್ವವನ್ನು ವಹಿಸುವುದು ಉತ್ತಮ. ಈತನಿಗೆ ಈ ದ್ವೀಪ ನಿವಾಸಿಗಳಲ್ಲಿ ಬಂಧುಗಳೂ, ಮಿತ್ರರೂ, ದಾಕ್ಷಿಣ್ಯಕ್ಕೆ ವಿಷಯರಾದವರೂ ಯಾರೂ ಇರುವುದಿಲ್ಲ. ನಿಸ್ಪೃಹತೆಯಿಂದ ಪ್ರಭುತ್ವ ಮಾಡುವುದಕ್ಕೆ ಇವನಿಗೆ ಹೆಚ್ಚು ಸೌಲ ಬ್ಲ್ಯಗಳುಂಟು. ನಾನು ಈ ದ್ವೀಪನಿವಾಸಿಯು, ನನಗೆ ಇಲ್ಲಿ ಬಂಧು, ಪುತ್ರ, ಮಿತ್ರ, ಕಳತ್ರಾದಿಗಳು ಇರುತ್ತಾರೆ. ದಾಕ್ಷಿಣ್ಯದಿಂದ ಧರ್ಮಕ್ಕೆ ಏನು ಲೋಪ ಬರುವುದೋ ಎಂಬ ಭಯವು ನನಗೆ ಇರುತ್ತದೆ. ಈ ದ್ವೀಪಕ್ಕೆ ಪ್ರಭುವಾಗುವು