ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21) ದಕ್ಕೆ ನನಗಿಂತಲೂ ಹೇಜಲ್‌ಗೆ ಹೆಚ್ಚು ಯೋಗ್ಯತೆಯು ಇರುವುದು, ಈ ವಿಷಯವನ್ನು ನೀವು ಪರ್ಯಾಲೋಚಿಸಬೇಕು. ಇವನಿಗೆ ಪ್ರಭುತ್ವವನ್ನು ವಹಿಸು ವದು ಉತ್ತಮ. ಇಂಥಾ ದೊಡ್ಡ ವಿಷಯಗಳಲ್ಲಿ ದುಡುಕಿ ಕೆಲಸ ಮಾಡುವುದು ಯೋಗ್ಯವಲ್ಲ. " ಈ ರೀತಿಯಲ್ಲಿ ಆರಿಸ್ಕೋಡಿಮಸ್ಸನು ಹೇಳಲು, ಸಭೆಯಲ್ಲಿ ಗೊಣಗುಟ್ಟುವಿ ಕೆಯು ಬಹಳವಾಯಿತು, ಹೇಜಲ್, ಮೆಂಟರೂ, ಟೆಲಿಮಾಕಸ್ಸನೂ, ಮಹರ್ಷಿ ಗಳೂ, ಮಹಾ ಜನಗಳೂ ಎಲ್ಲರೂ ಏಕವಾಕ್ಯತೆಯಿಂದ ಈ ದ್ವೀಪದ ಪ್ರಭುತ್ವವನ್ನು ವಹಿಸಬೇಕೆಂದು ಅರಿಸ್ಕೊಡಿಮಸ್ಸನನ್ನು ಪುನಃ ಪ್ರಾರ್ಥಿಸಿದರು. ಆಗ ಅರಿಸ್ಟೋಡಿ ಮಸ್ಸನು ಹೇಳಿದ್ದೇನಂದರೆ:-

  • ಪ್ರಭುತ್ವದ ಕಷ್ಟವನ್ನು ಹೇಒಲ್ ನೂ, ಮೆಂಟರನೂ, ಟೆಲಿಮಾಕಸ್ಸನ ಮೂರು ಜನಗಳೂ ಸಮಗ್ರವಾಗಿ ತಿಳಿದುಕೊಂಡಿದ್ದಾರೆ. ಈ ಭಾರವನ್ನು ತಪ್ಪಿಸಿ ಕೊಳ್ಳುವುದಕ್ಕೆ ಅವರಿಗೆ ನೀವು ಅವಕಾಶ ಕೊಟ್ಟಿತ. ಎಲ್ಲರೂ ಒಗ್ಗಟ್ಟಾಗಿ ಈ ಭಾರವನ್ನು ವಹಿಸಬೇಕೆಂದು ನನಗೆ ನಿರ್ಬಂಧವನ್ನು ಮಾಡುತ್ತೀರಿ. ಏಕವಾಕ್ಯತೆ ಯಿಂದ ಈ ದ್ವೀಪವಾಸಿಗಳೆಲ್ಲರೂ ಒಪ್ಪುವ ಪಕ್ಷದಲ್ಲಿ, ನಾನು ಈ ಪ್ರಭುತ್ವವನ್ನು ಪರಿಗ್ರಹಿಸುತ್ತೇನೆ, ಆದರೆ, ಮೂರು ಷರತ್ತುಗಳಿಗೆ ನೀವು ಎಲ್ಲರೂ ಒಪ್ಪುವುದಾದರೆ, ನಾನು ಈ ಜವಾಬ್ದಾರಿಯನ್ನು ವಹಿಸುವೆನು. ಹಾಗೆ ನೀವು ಒಪ್ಪದಿದ್ದರೆ, ನನಗೆ ಈ ಜವಾಬ್ದಾರಿಯು ಆವಶ್ಯಕವಿಲ್ಲ, ಎರಡು ವರ್ಷಗಳ ವರೆಗೂ ನಾನು ಪ್ರಭು ವಾಗಿರುವಂತೆ ಏರ್ಪಾಡು ಮಾಡಬಹುದು. ಅಷ್ಟರೊಳಗೆ ಈ ದ್ವೀಪನಿವಾಸಿಗಳಲ್ಲಿ ಎಲ್ಲರ ಯೋಗಕ್ಷೇಮವೂ ಈಗ ಇರುವುದಕ್ಕಿಂತಲೂ ಉತ್ತಮವಾಗಿರುವಂತೆಯ, ಮೈನಾಸನ ಧರ್ಮಶಾಸ್ತ್ರಗಳಿಗೆ ವಿರೋಧವಾಗಿ ಲೇಶವೂ ನಡೆಯದಂತೆಯ ನಾನು ಮಾಡದಿದ್ದರೆ, ನನ್ನನ್ನು ಪ್ರಭುತ್ವದಿಂದ ತೆಗೆದು ಹಾಕಿ, ನನಗಿಂತಲೂ ಉತ್ತಮನಾದ ಪ್ರಭುವನ್ನು ನಿಯಮಿಸಬೇಕು, ನಾನು ಪ್ರಭುಪದವಿಯನ್ನು ವಹಿಸಿದಾಗ, ನಾನು ಈಗ ಹೇಗಿರುತ್ತೇನೋ ಅದೇ ರೀತಿಯಲ್ಲಿ ನನ್ನ ಜೀವನಕ್ಕೆ ಬೇಕಾದದ್ದನ್ನು ನನ್ನ ಭುಜಬಲದಿಂದಲೂ, ಬುದ್ಧಿ ಬಲದಿಂದಲೂ ಸಂಪಾದಿಸಿಕೊಳ್ಳುವುದಕ್ಕೆ ನನಗೆ ಯಾವ ನಿರ್ಬಂಧವನ್ನೂ ಮಾಡ ಕೂಡದು. ಪ್ರಭುತ್ವದ ಜವಾಬ್ದಾರಿಯನ್ನು ವಹಿ ಸುವುದಕ್ಕೆ ನನಗೆ ಸಂಬಳವನ್ನೂ, ಅಲೋರ್ಯಸನ್ನೂ ಕೊಡಕೂಡದು, ಇದ