ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಗಿ ಯಾವ ರಿಯಾಯತಿಯ ಓ ನನಗೆ ತೋರಿಸಕೂಡದು, ಮಹಾಜನಗಳ ಸೇವಕನಂತೆ ನನ್ನನ್ನು ಪರಿಗಣಿಸಬೇ ಕೇ ಹೊರತು, ಪ್ರಭ, ವೆಂದು ಪರಿಗಣಿಸಕೂಡದು. ನನ್ನಿಂದ ಆಗಲಿ, ಸರ್ಕಾರದ ಅಧಿಕಾರಿಗಳಿಂದ ಆಗಲಿ, ನನ್ನ ಪತ್ರ, .ತ್ರ, ಕಳತಾದಿಗಳಿಂದ ಆಗಲಿ ಮೈನಾಸನ ಧರ್ಮಗಳಿಗೆ ವಿರೋಧವಾಗಿ ನ್ಯೂ ವಾತಿರಿ ಕ್ಯಗಳೇನಾದರೂ ಆದರೆ, ಒಂದು ನಿಮಿಷವೂ ಆಲಸ್ಯ ಮಾಡದೆ, ಸದರಿ ನ್ಯೂ ತಿರಿ ಕ್ಯಗಳ ವಿಚಾರಣೆಯು ಮಾಡಲ್ಪಡಬೇಕು, ಅಪರಾಧಿಗಳೆಂದು ಗೊತ್ತಾದ ಕೂಡಲೆ ಅವರಿಗೆ ಶಿಕ್ಷೆಯು ಮಾಡಲ್ಪಡಬೇಕು, ಸಾಮಾನ್ಯ ಜನಗಳು ತಪ್ಪು ಮಾಡಿದರೆ, ಸಾಮಾನ್ಯ ಶಿಕ್ಷೆಯಾಗಬೇಕು, ಅಧಿಕಾರವನ್ನು ಮಾಡತಕ್ಕವರು ಅಪರಾಧವನ್ನು ಮಾಡಿದರೆ, ಅವರಿಗೆ ಬಲವಾದ ಶಿಕ್ಷೆಯು ಆಗಬೇಕು, ನನ್ನ ಪತ್ರಮಿತ್ರ 6ಗೆ ಸರ್ಕಾರದ ಅಧಿಕಾರಗಳ್ಯಾ ವವೂ ಕೆತ್ತಲ್ಪಡಕರದು, ಈ ದ್ವೀಪನಿವಾಸಿಗ ಇಲ್ಲಿ ಈಗ ಅವರು ಯಾವ ಅ೦ತಸ್ತಿನಲ್ಲಿರುವರೋ ಅದಕ್ಕಿಂತ ಹೆಚ್ಚಾದ ಅ೦ತಸ್ತು ನಾನು ಈ ಪದವಿಯಲ್ಲಿ ಇರುವವರೆಗೂ ಅವರಿಗೆ ಲಭ್ಯವಾಗುವಂತೆ ಮಾಡಲ್ಪಡಕೂ ಡದು, ಸತ್ಯದಿಂದಲೂ, ಧರ್ಮದಿಂದಲೂ ಅವರು ನಡೆದುಕೊಂಡರೆ, ಈ ದ್ವೀಪಸಿವಾಸಿ ಗಳೆಲ್ಲರೂ ಏಕವಾಕ್ಷತೆಯಿಂದ ಅವರು ಪೂಜ ರೆಂದು ಭಾವಿಸಿದರೆ, ನಾನು ಅಧಿಕಾರ ದಿಂದ ನಿವೃತ್ತನಾದ ಮೇಲೆ, ಅಧವಾ ದೇಹವನ್ನು ಬಿಟ್ಟ ಮೇಲೆ, ಅವರ ಯೋಗ್ಯತೆಗೆ ತಕ್ಕಂತೆ ಅವರಿಗೆ ಬಹುಮಾನಗಳನ್ನು ಮಾಡ ಹುದು. ಈ ಒಡಂಬಡಿಕೆಗಳಿಗೆ ನೀವು ಒಪ್ಪುವುದಾದರೆ, ಈ ಪ್ರಭುತ್ವದ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ. ಹಾಗೆ ಇಲ್ಲದಿದ್ದರೆ, ನನಗೆ ಆವಶ್ಯಕವಿಲ್ಲ.' ಈ ರೀತಿಯಲ್ಲಿ ಅರಿಸ್ಟೋಡಿಮಸ್ಸನು ಹೇದ ಕೂಡಲೆ, ಇವನ ಮುಹಾನುಭಾ ವತೆಯನ್ನೂ, ನಿಸ್ಪೃಹತೆಯನ್ನೂ, ಲೋಕಬಂಧವತಿಯನ್ನೂ ನೋಡಿ, ಸರ್ವರೂ ಆಶ್ಚರ ಪಟ್ಟರು, “ ನೀನು ಹೇಳುವ ಷರತ್ತುಗಳಿಗೆ ನಾವು ಒಪ್ಪಿರುತ್ತೇವೆ' ಎಂಬ ದಾಗಿ ಮಹಷಿ೯ಗಳು ಹೇಳಿದರು, ಅದನ್ನು ಮಹಾಜನಗಳpರ ಅನುಮೋದಿ ಸಿದ್ದರು. ಈ ಷರತ್ತುಗಳನ್ನು ನೋಡಿದರೆ, ಇವನೇ ಮೈನಾಸನ ಅವತಾರ ವಾಗಿರಬೇಕೆಂದು ತೋರುತ್ತದೆಂದು ಹೇಒಲ್, ಮೆಂಟರನೂ ಮತ್ತು ಟೆಲಿಮಾಕ ಸ್ಪನೂ ಹೇಳಿದರು. ' ಇಂಥಾ ಮಹಾನುಭಾವನ ನಮ್ಮ ದ್ವೀಪದಲ್ಲೇ ಇರು ವುದು ನಮಗೆ ತಿಳಿಯದೇ ಹೋಯಿತಲ್ಲಾ' ಎಂದು ಮಹಾಜನಗಳೆಲ್ಲರೂ ಬ