ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ವ್ಯಸನ ಪಟ್ಟರು. ಅಷ್ಟೊಡಿಮಸ್ಸನು ಈ ದ್ವೀಪಕ್ಕೆ ಪ್ರಭುವಾಗಲೆಂದು ಸತ್ವ ಏಕವಾ ಕ್ಯತೆಯಿಂದ ಘಟ್ಟಿಯಾಗಿ ಹೇಳಿದರು. ಈ ಕೋಲಾಹಲ ಧ್ವನಿಯು ಕ್ರಮ ಕ್ರಮವಾಗಿ ಸದರಿ ದ್ವೀಪದ ತೀರ ದೇಶಗಳವರೆಗೂ ವ್ಯಾಪಿಸಿತು, ಆಬಾಲವೃದ್ಧರ ಗುಣಕಧನಕ ಅ೬ಕ್ಕೊಡಿಮಸ್ಸನು ವಿಷಯನಾದನು, ಕೀರೀಟವು ತರಲ್ಪಟ್ಟಿತು. ಪಟ್ಟಾಭಿಷೇಕ ಮಹೋತ್ಸವವು ಬೆಳೆಯಿತು, ದೇವತಾಪ್ರಾರ್ಥನೆಗಳು ಮಾಡಲ್ಪ ಟ್ಯವು, ಮಹರ್ಷಿಗಳು ಆಶೀರ್ವಾದ ಪೂರ್ವಕವಾಗಿ ಸದರಿ ಕಿರೀಟವನ್ನು ಈತನ ತಲೆಯ ಮೇಲೆ ಇಟ್ಟರು, ಅಲಸ್ಕೋಡಿಮಸ್ಸನು ಮಹಷಿ೯ಗಳೇ ಮೊದಲಾದ ಸಮ ಸ್ಯರಿಗೂ ಪ್ರಣಾಮವನ್ನು ಮಾಡಿ, ಎಟ್ಟಾವಿಸಿದ್ದೇನಂದರೆ: -- “ ಈಗ ನೀವು ನನಗೆ ಮಾಡಿರುವ ಸತ್ಕಾರಕ್ಕೆ ಬೆಲೆಯಿಲ್ಲ, ಇದಕ್ಕೆ ಧನ ಕನಕಾದಿಗಳ ಪಲ್ಲತ್ತುಗಳ ಮಲಕವಾಗಿ ಬಹುಮಾನವನ್ನು ಮಾಡುವುದಕ್ಕೆ ನನಗೆ ಯೋಗೃತೆಯೂ ಇಲ್ಲ, ಉಪಪತ್ತಿಯೂ ಇಲ್ಲ. ಈ ದ್ವೀಪದ ಸಂಪತ್ತಲ್ಲಾ ಪ್ರಭಎಗೆ ಸೇರಿದ್ದೆಂಬದಾಗಿಯ, ನಾನು ಪ್ರಭುವೆಂಬದಾಗಿಯೂ, ಬೇಕಾದ ಬಿಲ್ಲ ತ್ತುಗಳನ್ನು ನಾನು ಕೊಡಬಹುದೆಂಬದಾಗಿ ಯ ಯಾರಾದಭಾವಿಸಿದ್ದರೆ, ಅವ ರಿಗೆ ನನ್ನ ವಿಜ್ಞಾಪನೆಯೊಂದಿರುವುದು, ಪ್ರಭುವಿಗೆ ಸಂಬಂಧಪಟ್ಟ ಕೋಶಗಳಲ್ಲಿರ ತಕ್ಕೆ ಸಕಲ ದ್ರವ್ಯವೂ ಪ್ರಜೆಗಳಿಂದ ಬಂದದ್ದು, ಅವರ ಪ್ರಾಣರಕ್ಷಣೆಗೂ, ಮಾನ ರಕ್ಷಣೆ ಬೇಕಾದ ಏರ್ಪಾಡುಗಳಿಗೆ ಅವುಗಳು ವಿತರಣೆಯಿಂದ ಉಪಯೋಗಿಸಲ್ಪಡ ಬೇಕು, ಪ್ರಭುತ್ವವು ದೇವತಾರಾಧನೆಗೆ ಸಮಾನವಾದದ್ದು, ಪ್ರಜೆಗಳ ಸೇವೆ ಯನ್ನು ಶಾಂತಿಯಿಂದಲೂ, ಪ್ರತಿಫಲದಲ್ಲಿ ಆಶೆ ಇಲ್ಲದೆಯ, ಅದಕ್ಕೆ ಕೈಯೊಡ್ಡ ದೆಯ ಮಾಡತಕ್ಕ ಪೂಜೆಯೇ ನಿಜವಾದ ಪೂಜೆ, ಸತ್ಪುರುಷರೆಲ್ಲರೂ ದೇವತೆ ಗಳು, ರಾಜಷಿ೯ಗಳಾದ ಪ್ರಭುಗಳು ನಿಜವಾದ ಸನ್ಯಾಸಿಗಳಂತೆ ಯಾವ ಫಲಾಪೇ ಕೈಯ ಇಲ್ಲದೆ, ಅವರ ಸೇವೆಯನ್ನು ಮಾಡಬೇಕು, ದುಷ್ಟರನ್ನೂ ಕೂಡ ಶಿಷ್ಟ ರನ್ನಾಗಿ ಮಾಡಬೇಕು. ಈ ಸೇವೆಯನ್ನು ಸಮರ್ಪಕವಾಗಿ ಮಾಡಿ, ನೀವು ಎಲ್ಲರೂ ನನ್ನ ಪ್ರಭುತ್ವವನ್ನು ಮೆಚ್ಚಿದರೆ, ಆಗ ನಾನು ಧನ್ಯನಾಗುತ್ತೇನೆ. ಇಂಥಾ ಧನ್ಯತೆ ಯನ್ನು ಸಂಪಾದಿಸುವುದಕ್ಕೋಸ್ಕರ ನಾನು ಮಾಡುವ ಮೆಹನತ್ತನ್ನು ನೀವು ಬಿಲ್ಲ ತುಗಳೆಂದು ಭಾವಿಸಬೇಕು ಪರದ್ರವ್ಯವನ್ನು ಮಣ್ಣಿನ ಹೆಂಟೆ ಯಂತೆ ಕಾಣಬೇ ಕೆಂಬದಾಗಿ ಧರ್ಮಿಷ್ಟರು ಹೇಳಿರುತ್ತಾರೆ. ಆದುದರಿಂದ ನೀವು ನನಗೆ ವಹಿಸಿರುವ