ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಿಸ್ಕೋಡಿಮಸ್ಸನು ಕೇವಲ ಧರ್ಮಿಸ್ಟನು. ಈ ದ್ವೀಪದ ಪ್ರಭುತ್ವವನ್ನು ಮಾಡುವ ವಿಷಯದಲ್ಲಿ ಈತನು ನನ್ನ ಸಹಾಯವನ್ನು ಅಪೇಕ್ಷಿಸುತ್ತಾನೆ, ಇವನ ಜೊತೆಯಲ್ಲಿ ನಾನು ಈ ದ್ವೀಪನಿವಾಸಿಗಳ ಸೇವೆಯನ್ನು ಮಾಡಬೇಕೆಂಬ ಆಶೆಯು ಳ್ಳವನಾಗಿದೇನೆ, ನಿನ್ನನ್ನು ಇಲ್ಲೇ ಇಟ್ಟು ಕೊಳ್ಳಬೇಕೆಂಬ ಕುತೂಹಲವು ನನಗೆ ಒಹಳವಾಗಿರುವುದು. ಆದರೆ, ಟೆಲಿಮಾಕಸ್ಸನು ಮಹಾಪ್ರಾಜ್ಞನಾದಾಗ್ಯೂ, ಬಹಳ ಕಷ್ಟದೆಸೆಯಲ್ಲಿ ಇರುತ್ತಾನೆ, ಅವನ ತಾಯಿಗೆ ಭಯಂಕರವಾದ ಕಷ್ಟವು ಸನ್ನಿ ಹಿತವಾಗಿರುವುದು, ಅದನ್ನು ತಪ್ಪಿಸುವುದಕ್ಕೆ ಟೆಲಿಮಾಕಸ್ಥನಿಗೆ ಎಷ್ಟು ಸಾಮ ರ್ಥವಿದ್ದಾಗ್ಯೂ, ನಿನ್ನ ಸಹಾಯವು ಅತ್ಯಂತ ಆವಶ್ಯಕವಾಗಿರುವುದು. ಆದುದ ರಿಂದ ಇಥಾಕಾ ದ್ವೀಪಕ್ಕೆ ಉ೦ಟಾರತಕ್ಕೆ ಕಷ್ಟಗಳನ್ನು ತಪ್ಪಿಸುವದಕ್ಕೆ ಟೆಲಿಮಾ ಕಸ್ಸನ ಜತೆಯಲ್ಲಿ ಪ್ರಯಾಣ ಮಾಡು, ನಿನಗೆ ವಂಗಳವಾಗಲಿ, ಸತ್ಪುರು ಷರಿಗೆ ದೈವಸಹಾಯ ವು ತಪ್ಪುವುದಿಲ್ಲ, ಸತ್ಯ , ಧರ್ಮಕ್ಕೂ ಲೋಪ ಬರುವು ದಿಲ್ಲ. ಯೂಲಿಸಸ್ಸನ ಲೋಕ ಯಾತ್ರೆಯನ್ನು ಪೂರೈಸಿಕೊಂಡು, ಒಥಾಕಾ ದ್ವೀಪಕ್ಕೆ ಒರುವಂತೆ ಜಗದೀಶ್ವರನು ಅನುಗ್ರಹಿಸಲಿ. ಸೆಸಿಲೋಬಳಿಗೆ ಬಂದಿರತಕ್ಕೆ ವಿಪಕ್ಷ. ರಂಪರೆ ಗಳೆಲ್ಲಾ ಪ್ರಳಯ ಕಾಲದ ಸೂರನ ಎದುರಿಗೆ ಮೇಘಗಳು ಕರಗಿಹೋಗು ವಂತೆ ಕರಗಿಹೋಗಲಿ, ಪ್ರನಃ ನಾವೆಲ್ಲರೂ ಒಟ್ಟಾಗಿ ಸೇರುವಂತೆ ಜಗದೀಶ್ವರನು ಅನುಗ್ರಹಿಸಲಿ, ನನ್ನ ಪ್ರೀತಿಯ ಹೊಗೆ ಐಕ್ಯವಾಗಿರುವದೋ, ನಾವು ದೇಹವನ್ನು ಪಟ್ಟ ನಂತರ ದಹಿಸಲ್ಪಟ್ಟ ನಮ್ಮ ಶರೀರದ ಬದಿ ವ ಕೂಡ ಒಟ್ಟಾಗಿ ಸೇರುವಂತೆ ದೇವರು ಅನುಗ್ರಹಿಸಲಿ. ನಿಮ್ಮಿಂದ ನಿಯೋಗವನ್ನು ಹೊಂದುವುದು ನನಗೆ ಬಹಳ ಕಷ್ಟ ವಾಗಿದೆ. ಆದಾಗ್ಯೂ ಕಾ ಗೌರವದಿಂದ ನೀವು ಇಥಾಕಾ ದ್ವೀಪಕ್ಕೆ ಹೋಗಬೇಕಾಗಿ ರುವುದು, ನಾನು ಇಲ್ಲಿ ಇರಬೇಕಾಗಿರುವುದು, ಅರಿಸ್ಕೊಡಿಮಸ್ಸನ ಪ್ರೀತಿಯ, . ಗಣಾತಿಶಯಗಳ ನನ್ನನ್ನು ಇಲ್ಲಿಯೇ ಇರುವಂತೆ ಎಳೆಯುತ್ತದೆ. ನಿಮ್ಮ ಪ್ರೀತಿಯ, ಗುಣಾತಿಶಯಗಳೂ ಇತಾಕಾ ದ್ವೀಪದ ಕಡೆಗೆ ನನ್ನನ್ನು ಎಳೆಯುತ್ತವೆ. ಟೆಲಿಮಾಕಸ್ಸನಿಗೆ ನೀನು ಸಹಾಯವನ್ನು ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ.' - ಈ ರೀತಿಯಲ್ಲಿ ಕೇಬಲ್ಲನು ಹೇಳುವಾಗ್ಯ, ಈ ನಾಲ್ಕು ಜನಗಳ ಕಳ್ಳಿ ನಿಂದಲೂ ನಿಯೋಗ ಶೋಕ ರಸವು ಧಾರಾಸಂಪಾತವಾಗಿ ಸುರಿಯುವುದಕ್ಕೆ ಉಪಕ್ರ