ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-) ಟೆಲಿಮಾಕಸ್ಸನು ಹೋಗಬೆ ಕು, ಅವನ ಸಹಾಯಕ್ಕೆ ನೀನು ಹೋಗಬೇಕು, ನಾವಿ. ಬೃರೂ ನಿಮ್ಮ ಸಹಾಯಾರ್ಥವಾಗಿ ಹೋಗುವುದು ಕರ್ತವ್ಯ. ಆದರೆ, ಒಹು ಕಾಲ ದಿಂದ ಈ ದ್ವೀಪವ ಅನಾಯಕ ವಾಗಿ ಇದೆ ಇದನ್ನು ತಹಬಂದಿಗೆ ತರುವುದಕ್ಕೆ ಸ್ವಲ್ಪ ಕಾಲವು ಬೇಕು. ಈ ಕೆಲಸವನ್ನು ಮಾಡಿ, ನಿಮ್ಮ ಸಹಾಯಕ್ಕೆ ಬರುವು ದಕ್ಕೆ ನಾವು ಸಿದ್ಧರಾಗಿದ್ದೇವೆ. ನಮ್ಮ ಸಹಾಯವಿಲ್ಲದೇಲೇ ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗುವಂತೆ ದೇವರು ಅನುಗ್ರಹಿಲೆಂದು ನಾವು ಕೋರುತ್ತೇವೆ” ಎಂದು ಹೇಳಿ, ಎಲ್ಲರೂ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡು, ಒಬ್ಬರ ಅಪ್ಪಣೆಯನ್ನು ಒಬ್ಬರು ತಿ ದುಕೊಂಡರು. ನಾವೆಲ್ಲರೂ ಹೊರಡುವುದಕ್ಕೆ ಸಿದ್ಧರಾದೆವು ಅನುಕೂಲವಾದ ವಾ ಯುವು ಬೀಸುವುದಕ್ಕೆ ಉಪಕ್ರಮವಾಯಿತು, ನಾವು ಹೊರಟೆವು, ಅರಿಸ್ಟೋಡಿಮಸ್ಸನೂ, ಹೇಒ೮ನೂ, ಆ ದ್ವೀಪನಿವಾಸಿಗಳು ಎಲ್ಲರೂ ನಮಗೆ ಸತ್ಕಾರಗಳನ್ನು ಮಾಡಿ, ಕಳುಹಿಸಿ ಕೊಟ್ಟರು. ರೇವು ಪಟ್ಟಣದಲ್ಲಿ ನಿಂತು, ನಮ್ಮ ಹಡಗು ದೃಷ್ಟಿ ಪಥಕ್ಕೆ ಬಿಳುತ್ತಲಿರುವವರೆಗೆ ನಮ್ಮನ್ನು ನೋಡುತ್ತಿದ್ದರು. ಐಡ: ಪವ ತವು ೬ ದೃಶ್ಯ ವಾಗುವವರೆಗೂ ನಾವೂ ಈ ದ್ವೀಪವನ್ನು ನೋಡುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿ ಕ್ರೀಟ್' ದ್ವೀಪವ ಹ್ರಸ್ವವಾಗುವುದಕ್ಕೆ ಉಪಕ್ರಮವಾಯಿತು. ಕ್ರಮೇಣ ಅದೃ ಶೃವಾಯಿತು, ಸೆಲೊಪಾನಿಸಸ್' ತೀರವು ನಮ್ಮನ್ನು ಎದುರುಗೊಳ್ಳುವಂತೆ ಕಾಣ ಬಂತು. ಅಷ್ಟರಲ್ಲಿಯೇ ಹಠಾತ್ತಾಗಿ ಆಕಾಶವು ಕಪ್ಪಾ ತು, ಮೇಘವು ಮುಚ್ಚಿ ಕೊಂಡಿತು, ಬಲವಾದ ಗಾಳಿಯು ಬೀಸುವುದಕ್ಕೆ ಉಪಕ್ರಮವಾಯಿತು, ಮಿಂಚು, ಸಿಡಿಲು, ಮಳೆ ಮೊದಲಾದವುಗಳ ರಭಸವು ಜೋರಾಯಿತು. ಅಲೆಗಳು ಪರ್ವತಾಕಾ ರವಾಗಿ ಏಳುವುದಕ್ಕೆ ಉಪಕ್ರಮವಾದವು, ಕತ್ತಲೆಯು ಕವಿದುಕೊಂಡಿತು. ನೃತ್ಯುವು ಸನ್ನಿ ಹಿತವಾದಂತೆ ತೋರಿತು, ನಾವೆಲ್ಲರೂ ಭಯಭ್ರಾಂತರಾದೆವು. ಕಾಲವು ಬಹಳ ವಿಷಮವಾಯಿತು. ವೆ೦ಟರು ಮಾತ್ರ ಶಾಂತಚಿತ್ತನಾಗಿದ್ದನು, ಮನೋವಾಕ್ಕರ್ಮಗಳಲ್ಲಿಯೂ ಪರಿಶುದ್ಧರಾದವರು ಆ ಹಡಗಿನಲ್ಲಿ ಒಬ್ಬರಿದ್ದಾಗ, ಅವರನ್ನು ರಕ್ಷಿಸುವುದು ತನ್ನ ಮುಖ್ಯ ಕರ್ತವ್ಯವೆಂದು ಜಗದೀಶ್ವರನು ಭಾವಿಸುವ ನೆಂಬದಾಗಿಯ, ಪಾಪಿಷ್ಠರ ಪಾಪಗಳೂ ಕೂಡ ಸತ್ಪುರುಷ ರಕ್ಷಣೆಗೋಸ್ಕರ ಮನ್ನಿ ಸಲ್ಪಡುವವೆಂಬದಾಗಿಯ ವೆ: ೦ಟರನಿಗೆ ನಂಬಿಕೆ ಇತ್ತು. ಈ ನಂಬಿಕೆಯನ್ನು