ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋಡಿ, ನನಗೂ ಸ್ವಲ್ಪ ಧೈರವಾಯಿತು, ಜಗದೀಶ್ಚರನ: ದುರ್ಮಾರ್ಗೆ ಪ್ರವರ್ತಕ ರನ್ನು ಶಿಕ್ಷಿಸುವುದಕ್ಕೋಸ್ಕರ ಭಯವನ್ನು ಉಂಟುಮಾಡುವನು. ಸದರಿ ಭಯ ವನ್ನು ಸತ್ಪುರುಷರನ್ನು ರಕ್ಷಿಸುವುದಕ್ಕೋಸ್ಕರ ಹೋಗಲಾಡಿಸುವನು ಅದರಿಂದಲೆ * ಭಯಕೃತ್, ಭಯನಾಶನ ' ಎಂಬದಾಗಿ ಅವಸಿಗೆ ಬಂದು ಒಂದಿರುವುದು, ಈ ವಿಷಯಗಳನ್ನು ಕುರಿತು ಅನೇಕ ಸಂದರ್ಭಗಳಲ್ಲಿ ಮೆಂಟರನು ನನಗೆ ಮಾಡಿದ ಹಿತೋ ಪದೇಶಗಳೆಲ್ಲಾ ನನ್ನ ಮನಸ್ಸಿಗೆ ಬಂದೆವು. ಮೆ೦ಟರು ಧೈರವಾಗಿಯ, ಶಾಂತಿ ಯುಳ್ಳವನಾಗಿಯೇ ಇದ್ದಾಗ, ನನಗೆ ಸಂಪೂರ್ಣವಾದ ಧೈರವು ಹುಟ್ಟಲಿಲ್ಲ. ಪರ್ವತಾಕಾರವಾಗಿ ಅಲೆಗಳು ಉರ.ಳುವುದಕ್ಕೆ ಉಪಕ್ರಮವಾದ ವ, ನೀರಿನಿಂದ ಮುಚ್ಚಲ್ಪಟ್ಟಿದ್ದ ಭಂಡೆಗಳು ಕಾಣುವುದಕ್ಕೆ ಉಪಕ್ರಮವಾದವು. ಸದರಿ ಭಂಡೆಗ ಳಿಗೆ ನಮ್ಮ ಹಡಗು ತಗುಲುವ ಸಂಭವವೂ ಬಂದಿತು. ನಮ್ಮ ಧ್ವಜಸ್ತಂಭವು ಮುರಿ ದುಹೋಯಿತು, ನಮ್ಮ ಹಡಗಿನ ಕೆಳ ಭಾಗಕ್ಕೆ ಒಂದು ಭಂಡೆಯು ತಗುಲಿತು. ಹಡಗಿಗೆ ನೀರು ನುಗ್ಗಿ ತು. ಹಡಗು ಮುಳಗುವುದಕ್ಕೆ ಉಪಕ್ರಮವಾಯಿತು. ಹಡ ಗಿನಲ್ಲಿ ಇದ್ದವರು ಘಟ್ಟಿಯಾಗಿ ಕೂಗಿಕೊಂಡು ಅಳುವುದಕ್ಕೆ ಉ ಸಕ್ರಮ ಮಾಡಿದರು. ನನ್ನ ಧೈರವು ಹೋಯಿತು. ನಿರಾಶೆಯು ಉಂಟಾಯಿತು. ಧ್ವರದಿಂದ ದೇವರ ಸ್ಮರಣೆ ಯನ್ನು ಮಾಡುತ್ತಾ ದೇಹವನ್ನು ಬಿಡುವುದಕ್ಕೆ ನಾನು ಸಿದ್ದನಾದೆನು, ಎಷ್ಟೋ ವಿಪತ್ತು ಗಳನ್ನು ತಪ್ಪಿಸಿಕೊಂಡಿದ್ದೆವು. ಈಗ ಆಖೈರು ವಿಪತ್ತು ಬಂದಿತು. ಆಗ ವೆಂಟರನನ್ನು ಕುರಿತು ನಾನು ಹೇಳಿದ್ದೇನಂದರೆ:- ಎಲೈ ಮೆಂಟರನೇ,.-ನನ್ನ ಜೊತೆ ಯಲ್ಲಿ ಬಂದವರೆಲ್ಲರೂ ಸಾಯುತ್ತಲಿ ದಾರೆ, ನಮಗೂ ಸಾಯುವ ಅವಸ್ಸಯು ಬಂದಿರುವುದು, ಈಗಲೂ ನೀನು ಶಾಂತಚಿತ್ತನಾಗಿದ್ದೀಯೆ. ಇದು ನನಗೆ ತುಂಬಾ ಆಶ್ವರವನ್ನು ಂಟುಮಾಡುತ್ತಲಿದೆ. ನಿನ್ನ ಸೈನ್ಯವು ನನಗೆ ಇಲ್ಲ, ಆದರೆ, ನನಗೆ ಒಂದು ಸಂತೋಷ ಮಾತ್ರ ಇರು ವುದು, ಸಾಯುವಾಗಲೂ ನಿನ್ನ ಜೊತೆಯಲ್ಲಿ ಸಾಯುತ್ತೇನಲ್ಲಾ ಎಂಬ ಸಂತೋಷವು ನನಗೆ ಪರಿಪೂರ್ಣವಾಗಿರುವುದು, ಸಾಯುವುದಕ್ಕೆ ನಾನು ಹೆದರುವುದಿಲ್ಲ, ಸಂತೋ ಷದಿಂದ ದೇಹವನ್ನು ಬಿಡುತ್ತೇನೆ. ಜನ್ಮವನ್ನು ಎತ್ತಿದವರಿಗೆ ಮರಣವು ಸಿದ್ದವಾಗಿ ರುವುದು, ಹೀಗೆ ಸಾಯುವುದರಿಂದ ಇನ್ನೊಂದಾವರ್ತಿ ಸಾಯುವುದೇ ತಪ್ಪಿತು. ದೈವಾಜ್ಞೆಯನ್ನು ಮಾರುವುದಕ್ಕೆ ಯಾರಿಗೆ ತಾನೇ ಸಾಧ್ಯ ? ಜಗದೀಶ್ವರನ ಇಷ್ಟವಿ