ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ಏರ್ಪಾಡು ಮಾಡಿದಳು, ಈ ಏರ್ಪಾಟನಂತೆ ಬಾಲಿಜಾರನ ಹಡಗು ಮುಳುಗುವಂತೆ ಮಾಡಲ್ಪಟ್ಟಿತ , ಪಿಗ್‌ ವೇಲಿಯನ್ನನ ಇಬ್ಬರ ಮಕ್ಕಳಿಗೂ ಈ ಅವಸ್ಥೆಯು ಬಂದಿತು' ತನ್ನ ಮಕ್ಕಳಿಗೆ ಈ ಅವಸ್ಥೆಯು ಬರುವುದಕ್ಕೆ ಇವಳು ಕಾರಣಭೂತಳಾಗಿ ದ್ದಾಗ್ಯೂ, ಸಿಗ' ಮೇಲಿಯನ್ನ ನನ್ನೂ ಕೂಡ ಕೊಲ್ಲಬೇಕೆಂಬ ಉದ್ದೇಶವು ಅವ ಳಿಗೆ ಇದ್ದಾಗ್ಯೂ, ಅವಳಲ್ಲಿ ಇವನಿಗೆ ನಂಬಿಕೆಯು ಇತ್ತು, ಜೋಸರ್‌ನಲ್ಲಿ ಅವಳಿಗೆ ಪ್ರೀತಿಯು ಇರುವುದೆಂದು ಪಿಗ್‌ ಮೇಲಿಯನ್ನ ನಿಗೆ ತಿಳಿಯಬಂತು. ಆವನನ್ನು ಕೊಲ್ಲಿಸಿ, ಅವನ ಆಸ್ತಿಯನ್ನು ಅಪಹರಿಸಬೇಕೆಂದು ಇವನು ಉದ್ದೇಶ ಮಾಡಿಕೊಂಡನು. ಜೋಸರ್‌ನನ್ನು ಅವನು ಕೊಲ್ಲುವುದಕ್ಕೆ ಮುಂಚೆ, ಅವನನ್ನೇ ಕೊಲ್ಲಬೇಕೆಂದು ಇವಳು ಸಂಕಲ್ಪ ಮಾಡಿದಳು. ಸಿಗ್ಮೇಲಿಯನ್ನನಿಗೆ ದ್ವೇಷಿಗ ೪ಾದವರು ಅನೇಕರು ಇದ್ದರು. ಅವರ ಮೂಲಕ ಅವನನ್ನು ಕೊಲ್ಲಿಸುವುದು ಸಾಧ್ಯವೆಂದು ತೋರಿದಾಗ್ಯೂ, ಈ ಪ್ರಯತ್ನವನ್ನು ಮಾಡಿದರೆ, ಅವರೆಲ್ಲಿ ತನಗೆ ಶತ್ರುಗಳಾಗುವರೋ ಎಂಬ ಭಯದಿಂದ ತಾನೇ ಅವನನ್ನು ಖುದ್ದಾಗಿ ಕೊಲ್ಲಬೇ ಕೆಂದು ನಿಷ್ಕರ್ಷೆ ಮಾಡಿದಳು. ಪಿಗ್‌ ಮೇಲಿಯನ್ನನು ಯಾರನ್ನೂ ನಂಬುತ್ತಿರಲಿಲ್ಲ. ಸ್ವಯ೦ ಪಾಕವನ್ನು ಮಾಡಿಕೊಂಡು, ಭೋಜನ ಮಾಡುತ್ತಿದ್ದನು. ಬಾಗಿಲುಗ ಇನ್ನು ಹಾಕಿಕೊಂಡು, ಅಡಿಗೆ ಮಾಡಿ ಕೊಳ್ಳುತ್ತಿದ್ದನು, ಪ್ರಾಣಭಯವಿದೆಯೆಂದು ಯಾರಿಗೂ ತಿಳಿಯದೆ, ಏರ್ಪಾಡು ಮಾಡಿ ಕೊಂಡಿದ್ದನು. ಇತರರು ಪಾಕಮಾಡಿ ದ್ದನ್ನು ಅವನು ತಿನ್ನುತ್ತಿರಲಿಲ್ಲ, ಹಾಗೆ ತಿಂದರೆ, ಯಾರಾದರೂ ವಿಷ ಹಾಕಿಬಿಡು ವರೆಂದು ಇವನಿಗೆ ಭಯ ಉಂಟಾಗಿತ್ತು, ದ್ರಾಕ್ಷಿರಸ, ರೊಟ್ಟಿ, ಉಪ್ಪು, ಎಣ್ಣೆ, ಹಾಲು, ಮೊದಲಾದ ಪದಾರ್ಥಗಳನ್ನು ತೆಗೆದುಕೊಂಡರೆ, ಅವುಗಳು ವಿಷ ಮಿಶ್ರವಾಗಿ ಎಲ್ಲಿ ಬರುವವೋ ಎಂದು ಇವನು ಭಯ ಪಡುತ್ತಿದ್ದನು, ಭಕ್ಷ್ಯಗಳು ಇವನಿಗೆ ಸ್ವಪ್ನ ದಲ್ಲಿಯ ದೊರೆಯುತ್ತಿರಲಿಲ್ಲ, ತಾನೇ ಖುದ್ದಾಗಿ ತೋಟಕ್ಕೆ ಹೋಗಿ, ಕೊಯಿದುಕೊಂಡ ಬಂದ ಹಣ್ಣುಗಳನ್ನು ತಿನ್ನುತ್ತಿದ್ದನು. ತಾನೇ ತಂದ ಗೆಡ್ಡೆ ಗೆಣಸುಗಳನ್ನು ತಾನು ಉಪಯೋಗಿಸಿಕೊಳ್ಳುತ್ತಿದ್ದನು. ತಾನು ಉಪಯೋಗಿಸುವ ನೀರಿಗೆ ವಿಷವಿಶ್ರವಾದೀತೆಂಬ ಭಯದಿಂದ ನೀರಿನ ನಲ್ಲಿಯ ಕೊಠಡಿಗೆ ಬೀಗ ಹಾಕಿ ಇಟ್ಟು ಕೊಳ್ಳುತ್ತಿದ್ದನು, ಆಸ್ಟಾರ್ಬಳಲ್ಲಿಯೂ ಇವನಿಗೆ ನಂಬಿಕೆಯು ಇರಲಿಲ್ಲ. ತಾನು ತಿನ್ನ ತಕ್ಕ ಪದಾಥ' ವನ್ನು ಮೊದಲು ಅವಳ ಕೈಲಿ ತಿನ್ನಿಸಿ, ಅನಂತರ ತಾನು