ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5) ತಿನ್ನು ತಿದನು. ಇವನನ್ನು ವಂಚಿಸುವುದಕ್ಕೆ ಅವಳು ಒಂದು ಉಪಾಯವನ್ನು ಮಾಡಿದಳು, ಅವನೂ, ತಾನೂ ತಿನ್ನ ತಕ್ಕ ಆಹಾರಕ್ಕೆ ವಿಷವನ್ನು ಸೇರಿಸಿದಳು. ಸದರಿ ವಿಷವನ್ನು ಪರಿಹರಿಸತಕ್ಕ ಒಂದು ಔಷಧವನ್ನು ತಾನು ಇಟ್ಟು ಕೊಂಡಿದ್ದಳು. ವಿಷ ವಿ.ಶ್ರವಾದ ಆಹಾರವನ್ನು ತಾನು ಮೊದಲು ತಿಂದಳು, ಅನಂತರ ಅವನು ಆ ಆಹಾ ರವನ್ನು ತಿನ್ನುವಂತೆ ಮಾಡಿದಳು. ಏಕಾಂತವಾಗಿ ಸದರಿ ವಿಷವನ್ನು ಪರಿಹರಿಸುವ ಔಷ ಧವನ್ನು ತಾನು ತೆಗೆದುಕೊಂಡಳು. ಸ್ವಲ್ಪ ಹೊತ್ತಿನಲ್ಲಿ ಅವನಿಗೆ ವಿಷವು ವ್ಯಾಪಿಸಿ, ಅವನು ನೆಲಕ್ಕೆ ಬದ್ದನು, ಆ ವಿಷದ ಮಸಿವೆ.ಯಿ೦ದ ಮಳೆ- ರೋಗವು ಬಂದ ವರಿಗೆ ಹೇಗೋ ಹಾಗೆ ನರಗಳೆಲ್ಲಾ ತಿ ಯುವುದಕ್ಕೆ ಉಪಕ್ರಮವಾಯಿತು. ಅದನ್ನು ನೋಡಿ, ಅಸಾಧಾರಣವಾದ ರೋದನವನ್ನು ಮಾಡುತ್ತಾ, ಬಟ್ಟೆಗಳನ್ನು ಹರಿದುಕೊಂಡು, ಒಡವೆಗಳನ್ನು ಕಳೆದು ಬಿಸಾಟು, ಕೂದಲನ್ನು ಕೆದರಿಕೊಂಡು, ಪತಿಯಲ್ಲಿ ಅತ್ಯಂತ ಅನುರಕ್ತಳಾದ ಸಾದ್ವಿ ಯು ಸಂಕಟ ಪಡುವುದಕ್ಕಿಂತಲೂ ಹೆಚ್ಚಾದ ಸಂಕಟವನ್ನು ಅಭಿನಯಿಸುತ್ತಾ, ಅವನನ್ನು ತಬ್ಬಿಕೊಂಡು, ಕಣ್ಣೀರುಗ ಇನ್ನು ಸುರಿಸುತ್ತಾ, ಸರ್ವರೂ ಇವಳಲ್ಲಿ ಅನುತಾಪವುಳ್ಳವರಾಗುವಂತೆ ಮಾಡಿ ಕೊಂಡಳು. ಅವನಿಗೆ ನಿಶ್ನ ಕಿಯಾದ ಕೂಡಲೆ, ಆಲಿಂಗಿಸುವ ನೆಪದಿಂದ ಬೇಗ ಸತ್ತು ಹೋಗಲೆಂದು ತನ್ನ ಶಕ್ತಿಯನ್ನೆಲ್ಲಾ ಬಿಟ್ಟು, ಅವನ ಕತ್ತನ್ನು ಕಿವಿಚಿಬಿಟ್ಟಳು. ಅನಂತರ ಅವನ ಬೆರಳುಗಳಿಂದ ಮೊಹರನ್ನೂ, ಅವನ ತಲೆ ಕಿರೀಟವನ್ನೂ ತೆಗೆದು ಕೊಂಡು, ಅಲ್ಲಿ ಹಾಜರಾಗಿದ್ದ ಜೋಸರನಿಗೆ ಕೊಟ್ಟಳು. ತನ್ನ ಕಡೆ ಜನಗಳೆ ೪ರೂ ಈ ದುಷ್ಯ ತ್ಯಕ್ಕೆ ಸಹಾಯ ಮಾಡುವರೆಂದು ತಿಳಿದುಕೊಂಡಿದ್ದಳು. ಜೋಸ ರನು ಪ್ರಭುವಾಗಿ, ಸರ್ವರಿಂದ ಅಂಗೀಕರಿಸಲ್ಪಡುವನೆಂದು ಭಾವಿಸಿದ್ದಳು. ಪಿಗ್ ಮೇಲಿಯನ್ನನು ಸಾಯುವಾಗ, ಇವಳು ತೋರಿಸಿದ ಶೋಕಾತಿಶಯವನ್ನೂ, ಅವನು ಸ ಕೂಡಲೇ, ಜೋಸರನಲ್ಲಿ ಇವಳು ತೋರಿಸಿದ ಅನುರಾಗವನ್ನೂ, ಅವನಿಗೆ ಕಿರೀ ಟವನ್ನೂ, ಮೊಹರನ್ನೂ ಇವಳು ಕೊಟ್ಟದ್ದನ್ನು ನೋಡಿ, ಬಹು ಜನಗಳಿಗೆ ಸಂದೇಹ ಉಂಟಾಯಿತು. ಇವಳೇ ಅವನನ್ನು ಕೊಂದಿರಬಹುದೆಂಬ ಸಂದೇಹವು ಹುಟ್ಟಿತು. ಸಿಗ್ಮೇಲಿಯನ್ನನು ಸತ್ತನೆಂಬ ವರ್ತಮಾನವು ಎಲ್ಲೆಲ್ಲಿಯ. ಹರಡಿಕೊಂಡಿತು, ಒಂದು ಗಂಟೆಗೆ ಮುಂಚೆ “ ಅವನು ಆರೋಗ್ಯವಾಗಿದ್ದನು. ಭೋಜನವಾದ ಕೂಡಲೆ ಸತ್ತಿರುವನು. ಹೀಗೆ ಹಠಾತ್ತಾಗಿ ಸತ್ತಿರುವುದನ್ನು ನೋಡಿದರೆ ಸಂದೇಹ