ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1$1) ವಾಗುತ್ತದೆ ಆಸ್ಟಾ ರ್ಬಳು ಮೊಹರನ್ನೂ , ಕಿರೀಟವನ್ನೂ ಅವನು ಸತ್ತ ಉತ್ತರ ಕ್ಷಣದಲ್ಲಿಯೇ ಜೊಸ-ನಿಗೆ ಒಪ್ಪಿಸಿರುವಳು. ಇದರಿಂದ ಈ ಸಂದೇಹವು ಇನ್ನೂ ಬಲವಾಗಿರುವುದು, ಶವವು ಪರೀಕ್ಷಿಸಲ್ಪಡಬೇಕು, ಅವನ ಆಹಾರಕ್ಕೆ ವಿಷವೇ ನಾದರೂ ಸೇರಿರುವುದೇ ? ಅದು ಪರೀಕ್ಷಿಸಲ್ಪಡಬೇಕು” ಎಂದು ಕೆಲವರು ಹೇಳಿ ದರು. ಇದನ್ನು ಸರ್ವರೂ ಅನುಮೋದಿಸಿದರು. ಡಾಕ್ಟರುಗಳು ಕರೆಸಲ್ಪಟ್ಟರು. ಶವವು ಪರೀಕ್ಷಿಸಲ್ಪಟ್ಟಿತು, ಆಹಾರದಲ್ಲಿ ಬಲವಾದ ವಿಷವು ಇರುವುದೆಂಬದಾ ಗಿಯ, ಕತ್ತು ಮಿಸುಕಲ್ಪಟ್ಟು, ಕೊಲ್ಲಲ್ಪಟ್ಟಿರುವನೆಂಬದಾಗಿಯ ಡಾಕ್ಟರುಗಳು ಅಭಿಪ್ರಾಯವನ್ನು ಕೊಟ್ಟರು. ಸಮಸ್ತ ಜನಗಳಿಗೂ ಇದು ಆಸ್ಟಾ ರ್ಬಳ ಕೆಲಸ ವೆಂದು ಗೊತ್ತಾಯಿತು, ಆದಾಗ್ಯೂ ಪಿಗ್ಮೇಲಿಯನ್ನ ನು ಕೇವಲ ದುರಾತ್ಮನೆಂಬ ದಾಗಿಯ, ಇವನು ಸತ್ತದ್ದರಿಂದ, ದೇಶಕ್ಕೇ ಕ್ಷೇಮವಾಯಿತೆಂಬದಾಗಿಯ ಜನ ಗಳು ಅಭಿಪ್ರಾಯ ಪಟ್ಟರು, ಆದರೆ, ಪಿಗ್‌ ಮೇಲಿಯನ್ನನು ಎಷ್ಟು ದುರಾತ್ಮನಾ ದಾಗ್ಯೂ, ಅವನನ್ನು ವಂಚಿಸಿ, ಅವನಿಗೆ ವಿಷವನ್ನು ಹಾಕಿ, ಕತ್ತು ಮಿಸುಕಿ ಕೊಂದದ್ದು ದೊಡ್ಡ ಅಪರಾಧವೆಂಬದಾಗಿಯೂ, ಈ ಅಪರಾಧಕ್ಕೆ ಜೋಸರನು ಸಹಾಯ ಮಾಡಿರುವನೆಂಬದಾಗಿಯೂ ಸಂದೇಹ ಉಂಟಾಯಿತು. ಇದನ್ನು ವಿಚಾರಣೆ ಮಾಡುವುದಕ್ಕೋಸ್ಕರ ಒಂದು ಸ್ಪೆಷಲ್ ಕೋರ್ಟು ಏರ್ಪಾಡು ಮಾಡಲ್ಪಟ್ಟಿತು, ಅರಮನೆಯನೆಯಲ್ಲಿದ್ದ ನೌಕರರಲ್ಲಿ ಪಿಗ್‌ ಮೇಲಿನ ೯ ಪಕ್ಷ ವಾಗಿರತಕ್ಕ ವರೂ, ಆಸ್ಟಾರ್ಬಳ ಪಕ್ಷವಾಗಿರತಕ್ಕ ವರೂ, ಉದಾಸೀನರೂ, ಜೋಸರೂ ಇವರೇ ಮೊದಲಾದವರ ಎಲ್ಲರ ಕೈಫೀತುಗಳೂ ತೆಗೆದಕೊಳ್ಳಲ್ಪಟ್ಟವು. ಆಸ್ಸಾ ರ್ಬಳ ಸೇವಕರೂ ಕೂಡ ಇವಳ ದೌರಾತ್ಮದ ವಿಷಯದಲ್ಲಿ ಯಥಾರ್ಥವನ್ನು ಹೇಳಿದರು. ಇವಳು ಪಿಗ್ಮೇಲಿಯನ್ನನ ಒಬ್ಬ ಮಗನನ್ನು ಹೇಗೆ ಕೊಲ್ಲಿಸಿದಳೋ, ಇನ್ನೊಬ್ಬನನ್ನು ಹೇಗೆ ಸಮುದ್ರಕ್ಕೆ ನೂಕಿಸಿದಳೋ, ಪಿಗ್ಮೇಲಿಯನ್ನ ನನ್ನು ಕೊಂದು, ಪ್ರಭುತ್ವವನ್ನು ಜೋಸರನಿಗೆ ಕೊಡಿಸುವುದಕ್ಕೆ ಹೇಗೆ ಪ್ರಯತ್ನ ಮಾಡಿ ದಳೊ, ಆ ಪ್ರಯತ್ನಕ್ಕೆ ಜೋಸರನು ಹೇಗೆ ಸೇರಿದ್ದನೋ ಇವೆಲ್ಲಾ ರುಜುವಾತಾ ದವು. ಇವಳು ೩ನಿಯನ್ನು ಮಡಿದಳೆಂಬದಾಗಿಯೂ, ಇವಳಿಗೆ 'ಖನಿಮಾಡು ವುದಕ್ಕೆ ಜೋಸರನು ಸಹಾಯ ಮಾಡಿದನೆಂಬದಾಗಿಯೂ ಸ್ಪಷ್ಟವಾಗಿ ಗೊತ್ತಾ ಯಿತು, ಇವರಿಬ್ಬರಿಗೂ ಮರಣದಂಡನೆಯು ವಿಧಿಸಲ್ಪಟ್ಟಿತು, ಇವರಿಬ್ಬರೂ ಗಲ್ಲಿಗೆ ಹಾಕಲ್ಪಟ್ಟರು. ”