ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

61 ನಾ ಒಲ್ ನಿಗೆ ಪಿಗ್‌ ಮೇಲಿ ಯನ್ನ ನಿಗೆ ಸಂಭವಿಸಿದ ಅಕಾಲ ಮರಣಕ್ಕೆ ಅವನ ದೌರಾತ್ಮನೇ ಮುಖ್ಯ ಕಾರಣವೆಂದು ಗೊತ್ತಾಯಿತು. ಸೈರಿಣಿಯರಲ್ಲಿ ಅತ್ಯಂತ ಜಘನ್ಯಳಾದ ಆಸ್ಟಾ ರ್ಬಳಲ್ಲಿ ಸಿಗ್ಮೇಲಿಯನ್ನನು ೨ ಕೃತ್ರಿಮವಾದ ಪ್ರೀತಿ ಯನ್ನೂ , ನಂಬಿಕೆಯನ್ನೂ ಇಟ್ಟನು. ಅವಳೇ ಇವನಿಗೆ ಮೃತ್ಯುವಾದಳು, ಈ ವಿಷಯವು ಗೊತ್ತಾದ ಕೂಡಲೆ, ಮಹಾ ಜನಗಳಿಗೆ ಸಿಗ' ಮೇಲೆ ಯನ್ನ ನಲ್ಲಿ ಎಷ್ಟು ತಿರ ಸ್ಮಾರವು ಇತ್ತೋ ಅದಕ್ಕಿಂತಲೂ ಹೆಚ್ಚಾದ ತಿರಸ್ಕಾರವು ಉojಾಯಿತು. ಅವ ಇನ್ನೂ, ಜೋಸರನನ್ನೂ ಗಲ್ಲಿಗೆ ಹಾಕುವಂತೆ ಸ್ಪೆಷಲ್ ಕೋರ್ಟಿನವರು ಮಾಡಿದ ಏರ್ಪಾಡು ಸದ್ಯ ಸಮರ್ಪಕವಾಯಿತು, ಈ ವಿಷಯವು ನಾರ್ಬಲ್ ನಿಗೆ ಗೊತ್ತಾದ ಕೂಡಲೆ, ಆತನು ಮಹಾಜನಗಳನ್ನೆಲ್ಲಾ ಸೇರಿಸಿ, ಮುಂದಿನ ಏರ್ಪಾಡು ಗಳು ಹೇಗೆ ಆಗಬೇಕೋ ಅದನ್ನು ಪರಾಲೋಚಿಸಿದನು, ಪಿಗ್‌ ಮೇಲಿಯನ್ನನ ಎರಡನೇ ಮಗನಾದ ಬೇಲಿಯಾಜರನನ್ನು ಈ ದುರಾತ್ಮಳಾದ ಆಸ್ಟಾರ್ಬಳು ಸಮು ದ್ರಕ್ಕೆ ನೂಕಿಸಿದ್ದಳಷ್ಟೆ, ಅವನು ಸತ್ತನೆಂದು ಇವಳು ತಿಳಿದುಕೊಂಡಿದ್ದಳು. ದೈವ ಯೋಗದಿಂದ ಬೇಲಿಯಾಜರನು ಆ ಕತ್ತಲೆಯಲ್ಲಿ ಈಜಿಕೊಂಡು, ಸೀರಿಯಾದ ಕೋಸ್ಟಿಗೆ ತಲಪಿದನು, ಅಲ್ಲಿ ಒಬ್ಬ ಪರದೇಶಿಯವನ ವೇಷವನ್ನು ಹಾಕಿಕೊಂಡು, ಒಬ್ಬ ಕುರುಬನ ಆಶ್ರಯವನ್ನು ಹೊಂದಿ, ಕುರಿಗಳನ್ನು ಕಾಯುವ ಕೆಲಸಕ್ಕೆ ನಿಯ ಮಿಸಲ್ಪಟ್ಟಿದ್ದನು. ಪಿಗ್‌ ಮೇಲಿಯನ್ನನು ಸತ್ತನೆಂಬ ವರ್ತಮಾನವೂ, ಆಸ್ಟಾ ರ್ಬಳೂ ಮತ್ತು ಜೋಸರನೂ ಗಲ್ಲಿಗೆ ಹಾಕಲ್ಪಟ್ಟರೆಂಬ ವರ್ತಮಾನವೂ ಬೇಲಿಯಾಜರನಿಗೆ ತಿಳಿಯಿತು, ಕೂಡಲೆ ಆತನು ತನ್ನ ಪೂರ್ವೋತ್ತರಗಳನ್ನು ನಾರ್ಬಲ್‌ನಿಗೆ ಏಕಾಂತ ವಾಗಿ ಬರೆದು ಕಳುಹಿಸಿದನು. ಗಾಢಾಂಧಕಾರದಲ್ಲಿ ಸಮುದ್ರಕ್ಕೆ ತಳ್ಳಲ್ಪಟ್ಟಾಗ್ಯೂ, ಅವನು ಈಜಿಕೊಂಡು ಹೋಗಿ, ಸೀರಿಯಾ ದೇಶಕ್ಕೆ ತಲಪುವಂತೆ ಆದದ್ದೇ ಅವನಲ್ಲಿ ಜಗದೀಶ್ವರನ ಪ್ರಸನ್ನ ತೆಯು ಇರುವುದೆಂಬದಾಗಿಯೂ, ಅ ವನ ತಂದೆಯಂತೆ ದುಷ್ಟ ನಾಗಿದ್ದರೆ, ಈ ವಿಪತ್ತಿನಲ್ಲಿ ಬದುಕುತ್ತಿರಲಿಲ್ಲವೆಂಬದಾಗಿಯೂ ನಾರ್ಬಲ್‌ನಿಗೆ ತೋರಿತು, ಮಹಾಜನಗಳಿಗೆ ಪಿಗ್ಮೇಲಿಯನ್ನನಿಗೆ ಮಾತ್ರವೇ ಅಲ್ಲದೆ, ಅವನ ಕುಟುಂಬಕ್ಕೆ ಸೇರಿದ ಸರ್ವರಲ್ಲಿಯ ಅಸಮಾಧಾನ ಉಂಟಾಗಿತ್ತು. ಬೇಲಿಯಾಚ ರನನ್ನು ಪ್ರಭುತ್ವಕ್ಕೆ ತರುವುದಕ್ಕೆ ಯಾರೂ ಒಪ್ಪುವುದಿಲ್ಲವೆಂದು ಇವನಿಗೆ ಗೊತ್ತಾ ಯಿತು. ಆಸ್ಸಾ ರ್ಬಳು ಮಾಡಿದ ದೌರಾತ್ಮವನ್ನೂ, ದೈವಬಲದಿಂದ ಅವನು