ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1;) - - ೪ ಬದುಕಿರುವುದನ್ನೂ , ಸೀರಿಯಾ ದೇಶದಲ್ಲಿ ಅವನು ಕುರಿಗಳನ್ನು ಕಾಯುತ್ತಾ ಇರುವು ದನ್ನೂ ತಿಳಿಸಿದ ಕೂಡಲೆ, ಸರ್ವರ 23 ವವನ್ನು ಕರೆಸಬೇಕೆ೦ದಾಗಿ ಅಭಿಪ್ರಾಯ ಪಟ್ಟರ , ಈ ಅಭಿಪ್ರಾಯ ವ ಬೆ: ಲಿಯಾ ಒರಸಿಗೆ ತಿಳಿಸಿ, ಅವನನ್ನು ಕರೆದುಕೊಂಡು ಬರುವದಕ್ಕೋಸ್ಕರ ಮುಖ್ಯ ಮಂತ್ರಿಗಳು ಕವರೂ, ವಹಾಜನಗಳ ಪ್ರತಿನಿಧಿಗ ಇಲ್ಲಿ ಕೆಲವರೂ ಸೀಲ ಮಾ ದೇಶಕ್ಕೆ ಕಳುಹಿಸಲ್ಪಟ್ಟರು. ಅವರು ಸದರಿ ದೇಶಕ್ಕೆ ಹೋಗಿ, ಇಲ್ಲಿನ ವಿದ್ಯಮಾನಗಳನ್ನೆಲ್ಲಾ ತಿಳಿಸಿದರು. ಆತನು ಪ್ರಭುತ್ವವನ್ನು ವಹಿ ಸುವುದಕ್ಕೆ ತನಗೆ ಇಷ್ಟವಿಲ್ಲವೆಂಬದಾಗಿಯೂ, ತಾನು ಸೀರಿಯಾ ದೇಶದಲ್ಲಿ ಕುರುಬ ನಾಗಿದ್ದುಕೊಂಡು ಬರುವುದೇ ಉತ್ತಮವೆಂಬದಾಗಿಯ ಅಪ್ಪಣೆ ಕೊಡಿಸಿದನು. ಆದರೆ, ಈ ಮಹಾ ಜನಗಳು ಅನೇಕ ವಿಧವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಟೈರ್‌ ದೇಶಕ್ಕೆ ಅವನು ಒರುವಂತೆ ಮಾಡಿ, ಅಲ್ಲಿಗೆ ಕರೆದುಕೊಂಡು ಬಂದರು. ಅವನು ಬರುತ್ತಾನೆಂಬ ವರ್ತಮಾನವು ತಿಳಿದ ಕೂಡಲೆ, ಮಹಾ ಜನಗಳೆಲ್ಲರೂ ಅವ ನನ್ನು ಎದುರ್ಗೊ೦ಡು, ಪ್ರಭುವಿಗೆ ಮಾಡತಕ್ಕ ಸ್ವಾಗತವೂರ್ವಕವಾದ ಮರಾದೆಗೆ ಳನ್ನೆಲ್ಲಾ ನಡಿಗರು, ಆ ದಿನವೇ ಒಂದು ದೊಡ್ಡ ಮಹಾಸಭೆಯು ಸೇರಿತು. ಟೈರ್ ಪಟ್ಟಣದ ಅಧಿ ಕಾರಿಗಳ, ಖಾಸಗಿ ಜನಗಳಲ್ಲಿ ಮುಖಂಡರಾದವರೂ, ವೈದಿಕ ಮಹಾಒನಗಳೂ, ಎಲ್ಲರೂ ಸೇರಿದ್ದರು. ಸಿಗ್ಮೇಲಿಯನ್ನನು ಹೇಗೆ ಆಸ್ಟಾ ರ್ಬಳಲ್ಲಿ ಅನುರಕ್ತನಾಗಿದ್ದನೋ, ಅವಳು ಬೋಸರನಿಗೆ ಪ್ರಭುತ್ವವನ್ನು ಕೊಡಿ ಸುವುದಕ್ಕೋಸ್ಕರ ಹೇಗೆ ಸಿಗ್ ಮೇಲಿಯನ್ನನ್ನು ಕೊಲ್ಲಿಸಿದಳೋ, ಎರಡನೇ ಮಗ ನಾದ ಬೇಲಿಯಾಜರನನ್ನು ಹೇಗೆ ಸಮುದ್ರಕ್ಕೆ ನೂಕಿಸಿ, ಅವನು ಸತ್ತನೆಂಬ ಭಾವ ನೆಯುಳ್ಳವಳಾಗಿದ್ದಳೋ, ಅವನು ದೈವಸಾಯದಿಂದ ಹೇಗೆ ಈಜಿಕೊಂಡು ಹೋಗಿ ಸೀರಿಯಾ ದೇಶವನ್ನು ತಲಪಿದನೋ, ಪಿಗ್‌ ಮೇಲಿಯನ್ನನು ಹೇಗೆ ವಿಷ ಹಾಕ ಲ್ಪಟ್ಟು, ಕತ್ತು ಮಿಸುಕಲ್ಪಟ್ಟು ಕೊಲ್ಲಲ್ಪಟ್ಟನೋ, ಡಾಕ್ಟರುಗಳು ಅವನ ಮರ ಣದ ವಿಷಯದಲ್ಲಿ ಹೇಗೆ ಅಭಿಪ್ರಾಯವನ್ನು ಕೊಟ್ಟರೋ, ಇವಳ ಅಪರಾ ಧವು ಸ್ಪೆಷಲ್ ಕೋರ್ಟಿನಲ್ಲಿ ಹೇಗೆ ರ. ಜುವಾತು ಮಾಡಲ್ಪಟ್ಟಿತೋ, ಅವಳೂ, ಜೋಸರೂ ಇವರ ತೀರ್ಪಿನಂತೆ ಹೇಗೆ ಗಲ್ಲಿಗೆ ಹಾಕಲ್ಪಟ್ಟರೆ, ಬೇಲಿಯಾ ಜರನು • ಪಿಗ' ಮೇಲಿಯನ್ನನ ಮಗನಾದಾಗ್ಯೂ, ಹೇಗೆ ಧರ್ಮಿಷ್ಟನಾಗಿರುವನೋ, ಪ್ರಭುತ್ವವನ್ನು ವಹಿಸಬೇಕೆಂಬುವುದರಲ್ಲಿಯೂ ಕೂಡ ಹೇಗೆ ಉದಾಸೀನನಾ