ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(4 ಪ್ರಭುತ್ವವು ಯೋಗ್ಯವಾದದ್ದಲ್ಲ, ಅವರ ಭಾಗಕ್ಕೆ ಅದು ಕಾಲಕೂಟವಾಗಿ ಪರಿಣ ಮಿಸುವುದು, ನಮ್ಮ ತಂದೆ ಯು ಆಸ್ಟಾರ್ಬಳ ಮಾತನ್ನು ಕೇಳಿ, ಧರ್ಮಮಾರ್ಗ ಕಪರಾಯಣನಾದ ನಮ್ಮ ಅಣ್ಣನನ್ನು ಕೊಲ್ಲಿಸಿದನು, ನನಗೆ ಅವನಿಗೆ ಸಂಭವಿಸಿದ ಮರಣಕ್ಕಿಂತಲೂ ಅಧಿಕವಾದ ಮರಣವು ಸನ್ನಿ ಹಿತವಾಗಿತ್ತು, ನಮ್ಮ ತಂದೆಯು ದುರಾತ್ಮಳಾದ ಆಸ್ಟಾರ್ಬಳ ಬಲೆಗೆ ಸಿಕ್ಕಿ, ನಿರಪರಾಧಿಗಳಾದ ಮಕ್ಕಳನ್ನೂ ಕೂಡ ಮೃತ್ಯುವಿಗೆ ತುತ್ತಾಗುವಂತೆ ಮಾಡಿಕೊಂಡನು. ಕೊನೆಗೆ ತಾನೇ ಮೃತ್ಯುವಿಗೆ ತುತ್ತಾದನು. ಇಂಥಾ ಕಷ್ಟವಾದ ಕೆಲಸಕ್ಕೆ ನನ್ನನ್ನು ಒಪ್ಪಬೇಕೆಂದು ಹೇಳು ತೀರಿ, ಈ ಪ್ರಭುತ್ವಕ್ಕೆ ನಾನು ಅರ್ಹನಲ್ಲ. ಪೂರ್ವ ವಯಸ್ಸು ಕಳೆದವನಾ ಗಿಯ, ವಿದ್ಯಾನಿಧಿಯಗಿಯ , ಶಾಂತಿನಿಧಿಯಾಗಿಯ, ಲೋಕಸೇವಾನಿರತನಾ ಗಿಯ ಇರತಕ್ಕೆ ಮನುಷ್ಯನನ್ನು ಪರಿಶೀಲಿಸಿ, ಪ್ರಭುತ್ವಕ್ಕೆ ಚುನಾಯಿಸಿ ಈ ಭಾಗ ದಲ್ಲಿ ನಾನೂ ಸಹಾಯ ಮಾಡುವೆನು, ಪ್ರಭುತ್ವ ಮಾಡತಕ್ಕೆ ಶಕ್ತಿಯು ನನಗೆ ಇಲ್ಲ ಅಪೇಕ್ಷೆಯು ಮೊದಲೇ ಇಲ್ಲ. ನನ್ನಲ್ಲಿ ಕೃಪೆಯಿಟ್ಟು, ಈ ಭಾರವನ್ನು ತಪ್ಪಿಸಬೇಕು, ಸಕಲ ವಿಷಯಗಳಲ್ಲಿ ಸಮರ್ಪಕವಾದ ಯೋಗ್ಯತೆಯುಳ್ಳವ ರನ್ನು ನೋಡಿ, ಅವರಿಗೆ ಈ ಪ್ರಭುತ್ವವನ್ನು ವಹಿಸಬೇಕು, ಪಿಗ್ಮೇಲಿಯನ್ನನು ಈ ರಾಜ್ಯಕ್ಕೆ ಬಹಳ ಅಪಕಾರವನ್ನು ಮೂಡಿದನು, ಅವನ ಮಗನಾದ ನಾನು ಈ ಕೆಲಸಕ್ಕೆ ಸುತರಾಂ ಯೋಗ್ಯನಲ್ಲ, ನನ್ನಲ್ಲಿ ಕೃಪೆಯಿಟ್ಟ, ಈ ಜವಾಬ್ದಾರಿ ಕೆಲಸದಿಂದ ಬಿಡುಗಡೆ ಮಾಡಬೇಕು” ಎಂದು ಮಹಾಜನಗಳನ್ನು ಪ್ರಾರ್ಥಿಸಿದನು. ಇವನು ಹೇಳಿದ್ದನ್ನು ಕೇಳಿ, ಮಹಾಜನಗಳಲ್ಲಿ ಕೆಲವರು ಆಶ್ವಠ್ಯ ಪಟ್ಟರು. ಕೆಲವರು ವಿಷಾದಭರಿತರಾದರು. ಅನೇಕರು ಭಗ್ನ ಮನೋರಥರಾದರು. ಇಂಥಾ ದುರಾತ್ಮನಾದ ಪಿಗ್ಮೇಲಿಯನ್ನನಿಗೆ ನಿಸ್ಸಹ ಚಕ್ರವರ್ತಿಯಾದ ಇವನು ಹೇಗೆ ಮಗನಾದನೆಂದು ಕೆಲವರು ಅಂದುಕೊಂಡರು. ಕೆಲವರು ಕಣ್ಣೀರುಗಳನ್ನು ಬಿಡು ತಿದ್ದರು, ಮಹಾ ಜನಗಳು ಈ ಅವಸ್ಥೆಯಲ್ಲಿರುವಾಗ, ನಾಬ೯ಲ್ಲನು ಬೇಲಿಯಾ ಜ ರನನ್ನು ಕ.ರಿತು ಹೇಳಿದ್ದೇನಂದರೆ:- " ನೀನು ಹೇಳಿದ ಮಾತುಗಳೆಲ್ಲಾ ಸಾಧುವಾದಗಳು. ಮನುಷ್ಯನಲ್ಲಿ ದೇವತಾಂಶಗಳು ಹೇಗೋ ಹಾಗೆ ಪಿಶಾಚಾ೦ಶವೂ ಕೂಡ ಇರುತ್ತವೆ ಸುಶಿಕ್ಷಣವೂ, ಒಳ್ಳೇ ಸಹವಾಸವೂ ಲಭ್ಯವಾದರೆ, ಜನಗಳು ಧರ್ಮಿಷ್ಟರಾಗುವರು, ದುಷ್ಟವಾದ