ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

65 ಶಿಕ್ಷಣವೂ, ಕೆಟ್ಟವರ ಸಹವಾಸವೂ ಲಭ್ಯವಾದರೆ ಕೆಟ್ಟವರಾಗುವರು. .ಪಿಗ್ಮೇ ಲಿಯನ್ನನು ದುರದೃಷ್ಟವಂತನು, ಇವನಿಗೆ ಸರಿಯಾದ ಶಿಕ್ಷಣವು ದೊರೆಯಲಿಲ್ಲ. ದುರ್ವಾರ್ಗಪ್ರವರ್ತಕರ ಸಹವಾಸವು ದೊರೆಯಿತು. ಇವನು ಅಜಿತೇಂದ್ರಿಯನಾ ದನು, ದುರ್ವಿಷಯಗಳಲ್ಲಿ ಮನಸ್ಸು ಪ್ರವರ್ತಿಸುವಂತೆ ಮಾಡಿಕೊಂಡನು. ಕಾಮ ಕ್ರೋಧಾದಿಗಳಿಗೆ ಅಧೀನನಾದನು. ದುರ್ಮಾರ್ಗಪ್ರವರ್ತಕರ ಸಹವಾಸವು ಇವ ನಿಗೆ ಉಂಟಾಯಿತು. ಪ್ರಭುತ್ವ ಮಾಡುವುದಕ್ಕೆ ಅನರ್ಹನಾದನು. ಅವರವರ ಪಾಪಗಳಿಗೆ ಅನುರೂಪವಾದ ಪಾಸಫಲವನ್ನು ಈ ಜನ್ಮದಲ್ಲಿಯೇ ಅನುಭವಿಸಬೇಕಾಗು ವುದು, ಅದನ್ನು ಅನುಭವಿಸಿದನು, ದೇವತೆಗಳೂ ಕೂಡ ಅವರವರ ಕರ ಫಲ ವನ್ನು ಅನುಭವಿಸಿಯೇ ಅನುಭವಿಸಬೇಕು. ಇದನ್ನು ಜಗದೀಶ್ವರನೂ ತಪ್ಪಿಸಲಾರನು. ನಿನ್ನ ತಂದೆಯು ಅವನ ದುಷ್ಕರ್ಮಗಳಿಗೆ ಅನುರೂಪವಾದ ಫಲವನ್ನು ಹೇಗೆ ಹೊಂದಿ ದನೋ ಅದನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ನೀನು ಯೋಗನಾಗಿರುವು ದಕ್ಕೆ ಇದಕ್ಕಿಂತಲೂ ಬಲವಾದ ಶಿಕ್ಷಣವು ಬೇರೆ ಉಂಟೇ ? ಆಸ್ಟಾ ರ್ಬಳು ನಿನ್ನನ್ನು ಕೆಲ್ಲಿಸಬೇಕೆಂದು ಮಧ್ಯರಾತ್ರಿಯಲ್ಲಿ ನಿನ್ನನ್ನು ಸಮುದ್ರಕ್ಕೆ ನೂಕಿಸಿದಳು. ಇಂಥಾ ಅವಸ್ಥೆಯಲ್ಲಿ ಮನುಷ್ಯನು ಬದುಕುವುದು ಸಾಧ್ಯವೇ ? ದೇವರ ಸಹಾಯವಿಲ್ಲದಿದ್ದರೆ ನೀನು ಬದುಕುತ್ತಿದ್ದೆಯಾ ? ನಿರಪರಾಧಿಗಳಾಗಿಯೂ, ಸತ್ಯವಂತರಾಗಿಯೂ ಇರತ ಕವರನ್ನು ದೇವರು ರಕ್ಷಿಸುವನು ಎಂಬುವುದಕ್ಕೆ ನೀನೇ ದೃಷ್ಟಾಂತವಲ್ಲವೇ ? ದೇವರಿಂದ ನೀನು ಏತಕ್ಕೆ ರಕ್ಷಿಸಲ್ಪಟ್ಟಿ ? ನಿನ್ನ ತಂದೆಯ ದೌರಾತ್ಮದಿಂದ ನೊಂದ ವರನ್ನು ರಕ್ಷಿಸುವುದಕ್ಕೋಸ್ಕರ ನೀನು ರಕ್ಷಿಸಲ್ಪಟ್ಟಿರುವುದಿಲ್ಲವೇ ? ನಿಮ್ಮ ವಂಶಕ್ಕೆ ನಿನ್ನ ತಂದೆಯಿಂದ ಉಂಟಾದ ಕಳಂಕವನ್ನು ನಿವಾರಣೆ ಮಾಡಿ, ನಿನ್ನ ವಂಶದ ಕೀರ್ತಿಯು ಜಾಜ್ವಲ್ಯಮಾನವಾಗಿ ಶೋಭಿಸುವಂತೆ ಮಾಡುವುದು ನಿನಗೆ ಕರ್ತವ್ಯವ ಲ್ಲವೇ ? ಸೀರಿಯಾ ದೇಶದಲ್ಲಿ ಕುರುಬನಾಗಿದ್ದುಕೊಂಡಿರಬೇಕೆಂದು ಹೇಳುತ್ತೀಯೆ. ಪೂರ್ವಾಪರಜ್ಞರಾದವರು ನಿನ್ನ ಮಾತುಗಳನ್ನು ಕೇಳಿದರೆ ನಗುವುದಿಲ್ಲವೇ ? ಈ ದೇಶದ ಪ್ರಜೆಗಳೆಲ್ಲರೂ ನಿನ್ನ ಮಕ್ಕಳಲ್ಲವೇ ? ಇವರ ರಕ್ಷಣೆ ಯಲ್ಲಿ ಪರಾಲ್ಮುಖ ನಾಗಿ, ಕುರಿಗಳನ್ನು ಕಾಯುವುದಕ್ಕೆ ನೀನು ಹೊರಟು ಹೋದರೆ, ನೀನು ಕೃತಕೃತ್ಯ ನಾಗುತ್ತೀಯಾ ? ಧನ್ಯ ತೆಯು ನಿನಗೆ ಲಭ್ಯವಾಗುವುದೇ ? ಪ್ರಾಜ್ಞರಾದವರು ನಿನ್ನನ್ನು ಕರ್ತವ್ಯ ತಾಮಢನೆಂದು ಹೇಳುವುದಿಲ್ಲವೇ ? ರಾಜ್ಯಭಾರವು ದುಸ್ಸಹವಾ 0