ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 \ryAs 4 4 4 4_.

  • * * * \kk

ದದ್ದೆಂದು ಪ್ರಭುವಾದವನು ಭಯಪಡಬಹುದೇ ? ಪ್ರಜೆಗಳೆಲ್ಲರೂ ಸುಖವಾಗಿರು ವಂತ ಪ್ರಭುತ್ವ ಮಾಡಿ, ಪ್ರಜೆಗಳು ಸಂತೋಷಾತಿಶಯದಲ್ಲಿ ಮುಳುಗಿ ತೇಲುತ್ತಿದ್ದರೆ, ಅದರಿಂದ ಉಂಟಾಗುವ ಸುಖಕ್ಕೆ ಸಮಾನವಾದ ಸುಖವು ಈ ಲೋಕದಲ್ಲಾಗಲಿ, ಲೋಕಾಂತರದಲ್ಲಾಗಲಿ ಇರುವುದೇ ? ಮಹಾ ಪ್ರಾಜ್ಞನಂತೆ ಮಾತನಾಡುತ್ತಾ, ನಿನ್ನ ಕರ್ತವ್ಯವನ್ನೂ ಕೂಡ ನೀನು ಪರಾಲೋಚಿಸುತ್ತಲಿಲ್ಲ, ನಿನ್ನ ಪದವಿಗೆ ಅನ ನುರೂಪವಾದ ಈ ಯೋಚನೆಯನ್ನು ಬಿಡು, ಈ ರಾಜ್ಯ ಭಾರವನ್ನು ವಹಿಸು. ನೀನು ಧರ್ಮದಿಂದ ನಡೆದರೆ, ಈ ರಾಜ್ಯಭಾರವನ್ನು ವಹಿಸುವುದರಲ್ಲಿ ನಿನಗೆ ಮಹಾಜನಗಳ ಸಹಾಯವಾಗುವುದಲ್ಲದೆ, ದೇವರ ಸಹಾಯವೂ ಆಗುವುದು, ? ಈ ರೀತಿಯಲ್ಲಿ ನಾರ್ಬನು ಹೇಳಲು, ಮಹಾಜನಗಳು ಏಕವಾಕ್ಯತೆಯಿಂದ ಅದನ್ನು ಅನುಮೋದಿಸಿದರು, ಸಲ್ವರೂ ಅದಕ್ಕೆ ಒಪ್ಪಿದರು. ನಾರ್ಬಲ್ಲನು ಹೇಳಿದ್ದು ಸರಿಯಾದ ಹಿತೋಪದೇಶವೆಂದು ಬೇಲಿಯೂಜರನಿಗೂ ತೋರಿತು. ಅವನು ಹೇಳಿದ್ದೆ ನಂದರೆ: “ ಎಲೈ ನಾರ್ಬಲ್ಲನೇ..-ನಿನ್ನ ಹಿತೋಪದೇಶದಿಂದ ನಾನು ಜಯಿಸಲ್ಪಟ್ಟನು. ಕರ್ತವ್ಯ ಜ್ಞಾನವು ನನಗೆ ಉಂಟಾಯಿತು. ಸಕಲ ಪ್ರಜೆಗಳೂ ಸುಖವಾಗಿರುವಂತೆ ಮಾಡುವ ಕ್ಷೇಶವೂ ಕೂಡ ಸ್ವರ್ಗಸುಖಕ್ಕಿಂತಲೂ ಉತ್ತಮವಾದದ್ದು, ಇದ ರಲ್ಲಿ ಸಂದೇಹವೇನೂ ಇಲ್ಲ, ಈ ಭಾಗದಲ್ಲಿ ಜ್ಞಾನೋದಯವಾಗುವಂತೆ ನೀನು ಮಡಿದ ಹಿತೋಪದೇಶಕ್ಕೋಸ್ಕರ ನಾನು ಬಹಳ ಕೃತಜ್ಞನಾಗಿ ಇದೇನೆ. ಪ್ರಭುತ್ವ ವನ್ನು ವಹಿಸುವುದಕ್ಕೆ ನಾನು ಒಪ್ಪುತ್ತೇನೆ. ಆದರೆ, ಈ ಸಂಸ್ಥಾನದ ಪ್ರಜೆಗಳೆ ಲ್ಲರೂ ನನ್ನ ಜತೆಯಲ್ಲಿ ಈ ಪ್ರಭುತ್ವದ ಭಾರವನ್ನು ಅವರ ಶಕ್ಕನುಸಾರ ವಹಿಸುವು ದಕ್ಕೆ ಒಪ್ಪಿಕೊಳ್ಳಬೇಕು, ನಾನು ಮಾಡಬೇಕಾದ ಕೆಲಸಗಳನ್ನು ಧರ್ಮಶಾಸ್ತ್ರಗಳು ವಿಧಿಸಿರುವುವು, ನಿಮ್ಮಿಂದ ಅಪೇಕ್ಷಿಸುವ ಉಪಕಾರವನ್ನು ನಾನು ವಿಜ್ಞಾಪಿಸು ತೇನೆ, ಪ್ರಭುಗಳು ಕೇವಲ ದುರದೃಷ್ಟ ಶಾಲಿಗಳು, ಅವರನ್ನು ಆವರಿಸಿಕೊಂಡಿ ರತಕ್ಕವರಲ್ಲಿ ಧರ್ಮಿಷ್ಟರು ಇರುವುದುಂಟು. ಅನೇಕ ಅಧರ್ಮಿಷ್ಟರೂ ಇರುವು ದುಂಟು, ಯಾರಿಗೆ ಧರ್ಮಿಷ್ಟರ ಸಹಾಯವು ದೊರೆಯುವುದೇ ಅವರ ಪ್ರಭು ತ್ವವು ಮನು, ಮಾಂಧಾತ, ಹರಿಶ್ಚಂದ್ರ, ಶ್ರೀ ರಾಮ ಮೊದಲಾದವರ ಪ್ರಭುತ್ವ ದಂತ ಧರ್ಮಕ್ಕೆ ಮಾತೃಸ್ಥಾನವಾಗುವುದು, ಯಾರಿಗೆ ಸತ್ಪುರುಷರ ಸಹಾಯವು