ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ದೊರೆಯುವುದಿಲ್ಲವೋ ಅವರ ಪ್ರಭುತ್ವವು ರಾವಣನೇ ಮೊದಲಾದವರ ಪ್ರಭುತ್ವಕ್ಕೆ ಸಮಾನವಾಗುವುದು, ದುರ್ಮ೦ತ್ರಿಗಳ ಮಾತುಗಳೇ ಸತ್ಯವೆಂದು ಪ್ರಭುವು ನಡೆ ಯುವನು, ಕೊನೆಗೆ ಅವನೂ, ಅವನ ಪುತ್ರವಿತ್ರಕಳ ತಾದಿಗಳೂ ಎಲ್ಲರೂ ನಾಶ ವಾಗುವ ಗತಿಯು ಬರುವುದು, ಇದಕ್ಕೆ ನಮ್ಮ ತಂದೆಯ ಪ್ರಭುತ್ವವೇ ಸಾಕ್ಷಿ ಯಾಗಿರುವುದು, ನೀನು ಹೇಳಿದ ಹಿತೋಪದೇಶವು ಸಾಧುವಾಗಿದ್ದಾಗ, ಪ್ರಭುತ್ವ ವನ್ನು ವಹಿಸುವುದು ಬಹಳ ಕಷ್ಟವಾಗಿ ತೋರುತ್ತದೆ. ಮಹಾಜನಗಳ ಕುಂದು ಕೊರತೆಗಳನ್ನು ಸಮಗ್ರವಾಗಿ ತಿಳಿದ ಹೊರತು, ಅವುಗಳನ್ನು ನಿವಾರಣೆ ಮಾಡುವುದು ಅಸಾಧ್ಯ, ಪ್ರಭುಗಳಿಗೆ ಅನೇಕ ವಿಷಯಗಳಲ್ಲಿ ನಿಜಸ್ಥಿತಿಯು ಗೊತ್ತಾಗುವುದಿಲ್ಲ. ಇವರುಗಳಿಗೆ ಕಣ್ಣುಗಳು ಇದ್ದಾಗ್ಯೂ, ಇತರರ ಕಣ್ಣುಗಳಿಂದ ಲೋಕದ ವಿದ್ಯಮ ನಗಳನ್ನು ನೋಡಬೇಕು, ಇವರಿಗೆ ಕಿವಿಗಳಿದ್ದಾಗ್ಯೂ, ಇತರರ ಕಿವಿಗಳ ಸಹಾಯ ದಿಂದ ಬಂದ ವರ್ತಮಾನಗಳು ಸತ್ಯವಾದವುಗಳೆಂದು ನಂಬಬೇಕು. ಇವರಿಗೆ ಬುದ್ದಿ ಇದ್ದಾಗ್ಯೂ, ಇತರರು ಯೋಚಿಸಿ ಹೇಳಿದ್ದನ್ನು ಕೇಳಿ, ಅದರಂತೆ ಅನೇಕ ಬಾಬುಗ ಳನ್ನು ವ್ಯವಸ್ಥೆ ಮಾಡಬೇಕು, ಸ್ತುತಿಪಾಠಕರ ಹಾವಳಿಯನ್ನು ತಡೆಯುವುದು ಕಷ್ಟ. ನೀನೇ ಇಂದ್ರ, ಚಂದ್ರ, ದೇವೇಂದ್ರನೆಂದು ಹೇಳಿ, ಮುಖೋಲ್ಲಾಸವಾಗುವಂತೆ ಮಾಡಿ, ಮಾಡಬಾರದ ಕೆಲಸಗಳನ್ನು ನಮ್ಮಿಂದ ಮಾಡಿಸತಕ್ಕವರು ನಮ್ಮನ್ನೇ ಆವ ರಿಸಿಕೊಂಡಿರುತ್ತಾರೆ, ನಮ್ಮ ಬಂಧು, ಪುತ್ರ, ಮಿತ್ರ, ಕಳತ್ರಾದಿಗಳು ತಮಗೆ ಬೇಕಾದ ಕೆಲಸಗಳನ್ನು ನಾವು ಮಾಡುವ ಹಾಗೆ ಮಾಡುತ್ತಾರೆ. ಅಧರ್ಮವಾದ ಕೆಲಸವನ್ನು ಮಾಡಬೇಕೆಂದು ಅವರು ಆಜ್ಞಾಪಿಸಿದಾಗ್ಯೂ ನಾವು ಮಾಡಬೇಕು. ಹಾಗೆ ಮಾಡದಿದ್ದರೆ, ನಮ್ಮ ಪಾಲಿಗೆ ಸಂಸಾರವೇ ನರಕವಾಗುವುದು, ಪ್ರಭುಗಳಾ ದವರು ಕೇವಲ ಪರಾಧೀನರು, ತಮಗೆ ಬೇಕಾದ ಕೆಲಸಗಳನ್ನು ಸ್ವಯಂ ಮಾಡುವ ಶಕ್ತಿಯು ಇವರಿಗೆ ಇರುವುದಿಲ್ಲ, ನೃತ್ಯರೂ ಕೂಡ ಇವರ ಮೇಲೆ ಸವಾರಿ ಮಾಡು ವರು, ಅವರ ಮಾತುಗಳನ್ನು ಕೇಳದೆ ಇದ್ದಾಗ್ಯೂ ಎಷ್ಟೋ ಕಷ್ಟವು ಬರುವುದು. ಪ್ರಭುಗಳ ಅವಸ್ಥೆಯು ಹೀಗಿರುವುದರಿಂದ, ಅವರು ನಿಸ್ಸಹ ಚಕ್ರವರ್ತಿಗಳಾಗಿರ ಬೇಕೆಂದು ಯಾರಾದರೂ ಅಪೇಕ್ಷಿಸಿದರೆ, ಅದು ಸಾಧ್ಯವಾಗುವುದೆ ? ಇದನ್ನು ಪರಾಲೋಚಿಸಿದರೆ ನನಗೆ ಭಯವಾಗುತ್ತದೆ. ನಮ್ಮ ತಂದೆಯ ಅವಸ್ಥೆಯು ನನಗೂ ಎಲ್ಲಿ ಬರುವುದೋ ಎಂಬ ಸಂದೇಹವು ನನಗೆ ಉಂಟಾಗುತ್ತದೆ, ಅಸಹಾಯ