ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ನಾಗಿ ನಾನು ಪ್ರಭುತ್ವವನ್ನು ಮಾಡುವುದು ಅಸಾಧ್ಯ, ಮಹಾ ಜನಗಳೆಲ್ಲರೂ ಮನಃ ಪೂರ್ವಕವಾಗಿ ಸಹಾಯ ಮಾಡುವುದಾದರೆ, ನಾನು ನಿಮ್ಮ ಆಜ್ಞೆಯಂತೆ ಪ್ರಭುತ್ವ ವನ್ನು ವಹಿಸುವೆನು. ಈ ರೀತಿಯಲ್ಲಿ ಬೇಲಿಯಾಜಾರನು ಹೇಳಲು, ನಿನ್ನ ಆಜ್ಞೆಗನುಸಾರವಾಗಿ ನಾವೆ ಲ್ಲರೂ ನಿನಗೆ ಸಹಾಯ ಮಾಡುವುದಕ್ಕೆ ಸಿದ್ದರಾಗಿ ಇದೇವೆ ಎಂದು ಹೇಳಿದರು. ಅದಕ್ಕೆ ಬೇಲಿಯಾ ಜರನು ಹೇಳಿದ್ದೇನಂದರೆ :- ( ಆಜ್ಞೆಯನ್ನು ಮಾಡುವುದಕ್ಕೆ ದೇವರು ದಕ್ಷನೇ ಹೊರತು, ಅಜಿತೇಂದ್ರಿಯ ರಾಗಿಯ, ಅರಿಷಡ್ವರ್ಗಗಳಿಗೆ ಅಧೀನರಾಗಿಯ ಇರತಕ್ಕೆ ಜನಗಳು ಎಂದಿಗೂ ಅರ್ಹರಲ್ಲ. ತಮಗೆ ವಿಜ್ಞಾಪನೆಯನ್ನು ಮಾಡುವುದು ನನಗೆ ಕರ್ತವ್ಯ. ನಾನು ಜಗದೀಶ್ವರನ ಕೃತ್ಯನು, ನಿಮ್ಮ ಸೇವೆಯೇ ನನ್ನ ಕರ್ತವ್ಯ. ಈ ಸೇವೆಯು ಸರಿ ಯಾಗಿ ಮಾಡಲ್ಪಟ್ಟಿತೆಂದು ನಿಮಗೆ ತೋರಿದರೆ, ಆಗ ನಾನು ಕೃತಕೃತ್ಯನಾಗುತ್ತೇನೆ. ನನ್ನಲ್ಲಿ ದೇವರು ಪ್ರಸನ್ನನಾಗುತ್ತಾನೆ. ರಾಜ್ಯಭಾರವನ್ನು ವಹಿಸುವುದರಲ್ಲಿ ನಿಮ್ಮಿಂದ ನನಗೆ ಆಗತಕ್ಕ ಕೆಲಸಗಳು ಬೇಕಾದಹಾಗಿರುವುವು. ಪ್ರಭುವಿಗೆ ದೇಶದಲ್ಲಿ ಇರತಕ್ಕೆ ಸಕಲ ಜನಗಳೂ ಮಕ್ಕಳಂತೆ ಪೋಷ್ಯರು, ಯಾರಿಗೆ ಏನು ನ್ಯೂನಾತಿರಿಕ್ತಗಳಾ ದಾಗ್ಯೂ, ಅದಕ್ಕೆ ಪ್ರಭುವು ಉತ್ತರವಾದಿಯಾಗಿರಬೇಕು. ಮನೆಯ ಯಜಮಾನನು ಮನೆಯಲ್ಲಿ ಇರತಕ್ಕೆ ಯಾರಾರಿಗೆ ಯಾವ ಕಷ್ಟ ಬಂದಾಗ್ಯೂ, ಅದನ್ನು ನಿವಾರಣೆ ಮಾಡುವುದರಲ್ಲಿ ಆಸಕ್ತನಾಗಿರಬೇಕು, ಅದೇ ರೀತಿಯಲ್ಲಿ ಪ್ರಭುವು ತನ್ನ ಸಂಸ್ಥಾನ ದಲ್ಲಿರತಕ್ಕವರಿಗೆ ಏನು ಕಷ್ಟ ಬಂದಾಗ್ಯೂ ಅದನ್ನು ನಿವಾರಣೆ ಮಾಡಬೇಕು. ಕೋಟ್ಯಂತರ ಜನ ಪ್ರಜೆಗಳಲ್ಲಿ ಯಾರಾರಿಗೆ ಏನು ಕಷ್ಟಗಳುಂಟಾಗಿರುವುವೋ ಅದು ಸರಿಯಾಗಿ ತಿಳಿದ ಹೊರತು, ನಿವಾರಣೋಪಾಯಗಳನ್ನು ಮಾಡುವುದು ಅಸಾಧ್ಯ. ಇದನ್ನು ತಿಳಿದುಕೊಳ್ಳುವುದಕ್ಕೋಸ್ಕರ ಅನೇಕ ನೌಕರರು ನಿಯಮಿಸಲ್ಪಟ್ಟಿರುವರು. ಇವರಲ್ಲಿ ಧರ್ಮಿಷ್ಟರಾದವರು ಇರುವುದುಂಟು. ಅಧರ್ಮಿಷ್ಟರೂ ಇರುವುದುಂಟು. ವಾಸ್ತವಾಂಶಗಳು ಗೊತ್ತಾಗದಂತೆ ಮಾಡಲ್ಪಟ್ಟಿರುವುದುಂಟು. ನೌಕರರಿಂದ ಒರ ತಕ್ಕ ಅಭಿಪ್ರಾಯಗಳು ನಿಜವೇ ಸುಳ್ಳೇ ಎಂದು ಗೊತ್ತು ಮಾಡಿಕೊಳ್ಳುವುದು ಅತ್ಯಾ ವಶ್ಯಕ, ಈ ಸಂಸ್ಥಾನದ ಮಹಾಜನಗಳೆಲ್ಲರೂ ಮಹಾಜನ ಸಭೆಗಳನ್ನು ಮಾಡಿ