ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7೧

  • * * * * * * * * * * *
  • * * *

+ 4 ಅವರ ನ್ಯೂನಾತಿರಿಕ್ತಗಳನ್ನು ಉದ್ಘಾಟಿಸಿದರೆ, ದುರಾಗ್ರಹಪ್ರತಿನಿವಿಷ್ಟರಾಗಿ, ಅವು ಗಳ ಉದ್ಘಾಟಕರಿಗೆ ಬಲವಾದ ಶಿಕ್ಷೆಯನ್ನೂ ಕೂಡ ಮಾಡುವರು. ನ್ಯೂನಾತಿರಿ ಕ್ರಗಳನ್ನು ಉದ್ಘಾಟಿಸದಿದ್ದರೆ, ತನಗೆ ಪ್ರಭುತ್ವವೇ ಬೇಡವೆಂದು ಇವನು ಹೇಳು ಾನೆ. ಇವನು ಕೇವಲ ನಿಸ್ಸಹ ಚಕ್ರವರ್ತಿ, ಪ್ರಭುತ್ವ ಮಾಡುವುದಕ್ಕೆ ಮಹಾಜನಗಳ ಪುಣ್ಯ ಪರಿಪಾಕದಿಂದ ಇಂಥಾ ಮಹಾತ್ಮನು ಸಿಕ್ಕಬೇಕು, ಸಮುದ್ರ ದಲ್ಲಿ ವಿಷ ಹುಟ್ಟಿರುವುದು, ಸತ್ಕುಲದಲ್ಲಿ ದುರಾತ್ಮರು ಹುಟ್ಟಿದರೆ, ಕ್ಷೀರಸಾಗರ ದಲ್ಲಿ ವಿಷ ಹುಟ್ಟಿದಂತಾಗುವುದು, ಕೆಸರಿನಲ್ಲಿ ಮನೋಹರವಾದ ಕಮಲವು ಹುಟ್ಟು ವುದು, ದುರಾತ್ಮನಾದ ಪಿಗ್ಮೇಲಿಯನ್ನ ನಲ್ಲಿ ಇವನು ಜನಿಸಿರುವುದನ್ನು ನೋಡಿ ದರೆ, ಕಮಲದ ಉತ್ಪತ್ತಿ ಸ್ಥಾನವು ಸ್ಮೃತಿಪಥಕ್ಕೆ ಬರುವುದು ಎಂದು ಭಾವಿಸಿ, ಅಲ್ಲಿ ಸೇರಿದ್ದ ಮಹಾಜನಗಳೆಲ್ಲರೂ ಬೇಲಿಯಾಜರನ ಷರತ್ತಿಗೆ ಒಪ್ಪಿದರು. ಶರು ವಾಯ ಬೇಲಿಯಾಚರನು ಮತ್ತೊಂದು ಷರತ್ತನ್ನು ಅಪೇಕ್ಷಿಸಿದನು, ಅವನು ಹೇಳಿದ್ದೇನಂದರೆ:- “ ನಾನು ಇನ್ನೂ ವಿದ್ಯಾರ್ಥಿದೆಸೆಯಲ್ಲಿರುತ್ತೇನೆ. ಲೋಕ ವ್ಯವಹಾರಜ್ಞಾನವು ಸಮರ್ಪಕವಾಗಿ ಇರುವುದಿಲ್ಲ, ಪ್ರಭುತ್ವವು ಪ್ರಜಾರಂಜನೆಗೆ ಸಾಧಕವಾಗಬೇಕಾ ದರೆ, ಸಕಲ ವಿದ್ಯಾ ವಿಶಾರದನಾಗಿಯ, ಸತ್ಯವಂತನಾಗಿಯ, ಧರ್ಮಿಷ್ಟನಾ ಗಿಯ, ಪ್ರಜೆಗಳ ಕ್ಷೇಮವೇ ತನ್ನ ಮೆಹನತ್ತಿಗೆ ಪ್ರತಿಫಲವೆಂಬದಾಗಿಯ ಭಾವಿಸ ತಕ್ಕ ಸಚಿವನ ಸಹಾಯವು ಅತ್ಯಾವಶ್ಯಕ. ಈ ಗುಣಾತಿಶಯಗಳು ನಾರ್ಬಲ್‌ನಲ್ಲಿ ಎಷ್ಟು ಮಟ್ಟಿಗಿರುವುದೋ ಅಷ್ಟು ಮಟ್ಟಿಗೆ ಈ ಸಂಸ್ಥಾನದಲ್ಲಿ ಯಾರಿಗೂ ಇರುವಂತೆ ತೋರುವುದಿಲ್ಲ, ಈತನು ನನಗೆ ಮುಖ್ಯ ಸಚಿವನಾಗುವಂತೆ ಒಪ್ಪಿದರೆ, ಅಥವಾ ಈತನು ಒಪ್ಪುವಂತೆ ನೀವು ಮಾಡಿದರೆ, ಈ ಪ್ರಭುತ್ವವು ನನಗೆ ಇರಲಿ, ಈತನ ಸಹಾಯವು ನನಗೆ ಬೇಕು” ಎಂದು ಬೇಲಿಯಾಜರನು ವಿಜ್ಞಾಪಿಸಿದನು. ಆತನು ಅನೇಕ ಕಾರಾಂತರಗಳನ್ನು ಹೊಂದಿ ಇದ್ದನು. ಆದರೆ, ಬೇಲಿಯಾ ಜರನು ಈ ರೀತಿಯಲ್ಲಿ ವಿಜ್ಞಾಪಿಸಿದ ಕೂಡಲೆ, ಮಹಾಜನಗಳೆಲ್ಲರೂ ಬೇಲಿಯಾಜ ರನ ಪ್ರಾರ್ಥನೆಗೆ ಒಪ್ಪಬೇಕೆಂದು ಬಹಳ ವಿನಯಪೂಲ್ವಿಕವಾಗಿ ಪ್ರಾರ್ಥಿಸಿದರು. ಈ ಪ್ರಾರ್ಥನೆಯನ್ನು ನಿರಾಕರಿಸುವುದು ಧರ್ಮವಲ್ಲವೆಂದು ಆತನು ಸಚಿವ ಪದವಿಯನ್ನು ಅಲಂಕರಿಸುವುದಕ್ಕೆ ಒಪ್ಪಿದನು. ಕೂಡಲೆ ಪ್ರಭುತ್ವವನ್ನು ವಹಿಸುವುದಕ್ಕೆ ಬೇಲಿ