ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1) LHA 4, < +4 - - # - * • • • • • • • • • • • • •, vyAwx ಯಾಜರನು ಒಪ್ಪಿದನು. ವ ಹಾಜನಗಳೆಲ್ಲರೂ ಸಂತೋಷಭರಿತರಾಗಿ ಪಟ್ಟಾಭಿಷೇಕ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿದರು. ಬೇಲಿಯಾಜರನ ಪ್ರ ಭತ್ವವು ಪ್ರಜೆಗಳ ಕ್ಷೇಮಕ್ಕೆ ಸಾಧಕವಾಗಲೆಂಬದಾಗಿಯೂ, ಧರ್ಮವಾದ ಪ್ರಜಾ ರಂಜನೆಯಿಂದ ನಿರ್ದುಷ್ಟವಾದ ಕೀರ್ತಿಯು ಬೇಲಿಯಾಜರನಿಗೆ ಉಂಟಾಗುವಂತ ಜಗದೀಶ್ವರನು ಅನುಗ್ರಹಿಸಲೆಂಬದಾಗಿಯ ದೇವತಾ ಪ್ರಾರ್ಥನೆಯು ಮಾಡಲ್ಪ ಟ್ವಿತು. ಕೂಡಲೆ ಬೇಲಿಯಾಚರನೂ ಮತ್ತು ನಾರ್ಬಲ್‌ನೂ ಪ್ರಜಾರಂಜನೆಯ ಕೆಲಸ ಗಳಲ್ಲಿ ಉದ್ಯುಕ್ತರಾದರು, ಅಹೋರಾತ್ರಿಗಳಲ್ಲಿಯೂ ಪರಾಲೋಚಿಸಿ, ಕೃಷಿ, ಕೈಗಾ ರಿಕ, ವ್ಯಾಪಾರ ಮೊದಲಾದವುಗಳಲ್ಲಿ ಪ್ರಜೆಗಳಿಗೆ ಪ್ರೋತ್ಸಾಹ ಪ್ರಯತ್ನಗಳು ಮಾರ ಲ್ಪಟ್ಟವು. ಸಂಪದಭಿವೃದ್ಧಿಯ ಕೆಲಸಗಳಲ್ಲಿ ವಿಶೇಷ ಮೆಹನತ್ತು ಮಾಡತಕ್ಕವರಿಗೆ ಬಹುಮಾನಗಳು ಮಾಡಲ್ಪಡುತ್ತಾ ಬಂದವು, ಯಾರು ತಮ್ಮ ಕುಟುಂಬಗಳಲ್ಲಿ ಇರತಕ್ಕವರನ್ನು ಸಂತೋಷವಾಗಿ ಇಟ್ಟು ಕೊಂಡಿರುತ್ತಾರೋ, ಸರ್ವರೂ ಅರೋಗ ದೃಢಕಾಯರಾಗಿಯೂ, ಸಚ್ಚರಿತ್ರೆಯುಳ್ಳವರಾಗಿಯೂ ಇರುವಂತೆ ಯಾರು ಮಾಡಿ ಕೊಂಡಿರುತ್ತಾರೋ ಅವರಿಗೆ ಬಿರುದುಗಳೂ, ಬಹುಮಾನಗಳೂ ಕೊಡಲ್ಪಡುತ್ತಾ ಬಂದವು, ಯಾರ ಜಮೀನುಗಳು, ದನಕರುಗಳು, ಅತ್ಯಂತ ಸಮರ್ಪಕವಾದ ಸ್ಥಿತಿಯಲ್ಲಿ ಇಡಲ್ಪಟ್ಟಿರುತ್ತವೆಯೋ, ಯಾರು ಬಹಳ ಮೆಹನತ್ತಿನಿಂದ ಶಾಸ್ತ್ರವಿಧಿಗ ಳಿಗೆ ಅನುಸಾರವಾಗಿ ಕೃಷಿಯನ್ನು ಮಾಡಿ, ನಾನಾ ವಿಧವಾದ ಭೋಗ್ಯ ವಸ್ತುಗ ಳನ್ನು ಬೆಳೆಯುವರೋ ಅವರಿಗೂ ಬಹುಮಾನಗಳು ಕೊಡಲ್ಪಡುತ್ತಾ ಬಂದವು. ಯಾರು ನಾನಾ ವಿಧವಾದ ಕೈಗಾರಿಕೆಗಳನ್ನು ಅವಲಂಬಿಸಿ, ಅವುಗಳಲ್ಲಿ ಕೌಶಲ್ಯವನ್ನು ತೋರಿಸಿ, ಭೋಗ್ಯ ವಸ್ತುಗಳನ್ನು ನಿರ್ಮಾಣ ಮಾಡುವರೋ ಅವರಿಗೆ ಬಹುಮಾನಗಳು ಮಾಡಲ್ಪಡುವುದಕ್ಕೆ ಉಪಕ್ರಮವಾಯಿತು, ಪ್ರಪಂಚದ ವರ್ತಕ ಧರ್ಮವನ್ನು ಪರಿಶೀಲಿಸಿ, ಆಮದು-ರಫ್ತುಗಳ ಮೂಲಕ ದೇಶದಲ್ಲಿ ಭೋಗ್ಯ ವಸ್ತುಗಳು ಬೇಕಾದ ಹಾಗೆ ಸಿಕ್ಕುವಂತೆಯ, ಧಾರಣವಾಸಿಗಳು ಸುಲಭವಾಗಿರುವಂತೆಯ, ಉದ್ಯೋಗಿ ಗಳಿಗೆ ನೆಮ್ಮದಿಯಾಗಿ ಬದುಕುವುದಕ್ಕೆ ಜೀವಿಕೆಯು ಸಿಕ್ಕುವಂತೆ ಯಾರು ಮೆಹನತ್ತು ಮಾಡುತ್ತಲಿದ್ದರೋ ಅವರಿಗೆ ಬಹುಮಾನಗಳು ಮಾಡಲ್ಪಡುತ್ತಾ ಬಂದವು, ಆಯು ರಾರೋಗ್ಯಶ್ವರ ಗಳಿಗೆ ಸಾಧಕವಾದ ಕೆಲಸಗಳನ್ನು ಶ್ರದ್ಧೆಯಿಂದ ಮಾಡತಕ್ಕ ಮ್ಯುನಿಸಿಪಲ್ ಮತ್ತು ಲೋಕಲ ಬೋರ್ಡುಗಳ ನೌಕರರಲ್ಲಿ ಯಾರು ಆಕೃತ್ರಿಮ