ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 hhhhP +ANN v 24 • • • • • • • Afs A ರಾಜ್ಯಭಾರವನ್ನು ಮಾಡುವುದರಲ್ಲಿ ಯಾವ ತೊಡಕುಗಳು ಬಂದಾಗ್ಯೂ, ಬೇಲಿಯಾಚ ರನು ನಾರ್ಬನ ಸಹಾಯವನ್ನು ತೆಗೆದುಕೊಳ್ಳುತ್ತಿದ್ದನು. ತನ್ನ ಸಂಸ್ಥಾನದಲ್ಲಿ ಹಿರಿಯರಾಗಿಯೂ, ಅನುಭವಶಾಲಿಗಳಾಗಿಯೂ ಇರತಕ್ಕವರನ್ನು ಕರೆಸಿಕೊಂಡು, ಅವರೊಡನೆ ಇಂಥಾ ವಿಷಯಗಳ ಗುಣದೋಷಗಳನ್ನು ಕುರಿತು ಚರ್ಚೆ ಮಾಡುತ್ತಿ ದನು. ಪ್ರತಿ ಒಂದು ವಿಷಯದ ಪೂರಾಸರಗಳನ್ನೂ ಖುದ್ದಾಗಿ ನೋಡಿ, ಸಾಕ್ಷಾ ತ್ಯಾಗಿ ವಿಚಾರಣೆ ಮಾಡುತ್ತಿದ್ದನು. ದೊಡ್ಡ ವಿಷಯಗಳಲ್ಲಿ ಬಹಿರಂಗವಾಗಿ ಮಹಾಜನಗಳ ಅಭಿಪ್ರಾಯಗಳನ್ನು ತಿಳಿದು ಕೊಳ್ಳು ವುದಲ್ಲದೆ, ಏಕಾಂತವಾಗಿಯ ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುತ್ತಿದ್ದನು. ನಾರ್ಬಲ್ಲನಿಂದ ಕೊಡಲ್ಪಟ್ಟ ಅಭಿಪ್ರಾಯವು ತನಗೆ ಸಮ್ಮತವಾದರೆ, ತಮ್ಮಿಬ್ಬರ ಅಭಿಪ್ರಾಯವೂ ಮಹಾ ಜನಗಳಿಗೆ ಸಮ್ಮತವಾದರೆ, ಆಗ ಕೆಲಸವನ್ನು ಜಾರಿಗೆ ತರುತ್ತಿದ್ದನು. ಚಾಲಗೆ ತಂದ ಮೇಲೂ ಕೂಡ ತಾನು ಮಾಡಿದ ಸಿರ್ಪಾಡು ತಪ್ಪೆಂದು ರುಜುವಾತು ಬಂದರೆ ಆ ರುಜುವಾ ತನ್ನು ನಮೂದಿಸಿ, ತನ್ನ ತೀರ್ಪನ್ನು ಯುಕ್ತವಾಗಿ ಪುನರಾಲೋಚಿಸಿ, ಫೈಸಲನ್ನು ಕೊಡುತ್ತಿದ್ದನು. ತಾನು ಮಾಡಿದ ತೀರ್ವ ತಪ್ಪೆಂದು ಗೊತ್ತಾದಾಗ್ಯೂ, ಅದನ್ನು ಬದಲಾಯಿಸಕೂಡದೆಂದು ಹತ ವನ್ನು ಹಿಡಿಯುತ್ತಿರಲಿಲ್ಲ, ತನ್ನ ಮಂತ್ರಿಗಳೇ ಮೊದ ಲಾದವರು ಯಾವ ಸಲಹೆಯನ್ನು ಕೊಟ್ಟಾಗ್ಯೂ, ತನ್ನ ಪುತ್ರ, ಮಿತ್ರ, ಕಳತಾದಿಗಳು ಯಾವ ಸಲಹೆಯನ್ನು ಕೊಟ್ಟಾಗ್ಯೂ, ಅದನ್ನೆಲ್ಲಾ ಕೇಳಿ, ಪರಾ ಲೋಚಿಸುವುದಾಗಿ ಅವರಿಗೆ ಕೃತ ಪ೩ 4, ಆತುರಪಡದೆ, ಸಾವಧಾನವಾಗಿ ಪರಾಲೋಕಿಸಿ, ನ್ಯಾಯವಾದ ಏರ್ಪಾಡುಗಳನ್ನು ಮಾಡುತ್ತಿದ್ದನು, ಅಂಗರಕ್ಷಣೆಯ ಏರ್ಪಾಡನ್ನು ಇವನು ಮಾಡಿಕೊಂಡಿರಲಿಲ್ಲ. ಈ ಏರ್ಪಾಡು ಅನಾವಶ್ಯಕವಾಗಿತ್ತು, ಇವರಿಗೆ ಪ್ರಜೆ ಗಳೇ ಅಂಗರಕ್ಷಕರಾಗಿದ್ದರು, ಪ್ರಜೆಗಳಲ್ಲಿ ಪ್ರತಿ ಒಬ್ಬರೂ ಇ೦ಥಾ ಧರೆಗೆ ಅಪಾಯ ಬಂದರೆ, ತಾವು ಒದುಕುತ್ತಿದ್ದರೂ ಸತ್ತಂತೆ ಎಂಬ ಭಾವನೆಯುಳ್ಳ ತಂಪು ಗಿದ್ದರು. ಇವನ ರಕ್ಷಣೆಗೋಸ್ಕರ ಪ್ರಾಣವನ್ನೂ ಕೂಡ ಒಪ್ಪಿಸುವುದಕ್ಕೆ ಸಕಲರೂ ಸಿದ್ದವಾಗಿದ್ದರು. ಅವನು ಸುವಿಯಾಗಿದ್ದನು, ಅವನ ಸೆಟ್ಟಕ್ಕೆ ಪ್ರಜೆಗಳ ಸೌಖ್ಯವೇ ಕಾರಣವಾಗಿತ್ತು. ಅವನು ಧರ್ಮವಾದ ಕಂದಾಯವನ್ನು ಮಾತ್ರ ತೆಗೆಯುತ್ತಿದ್ದನು, ನ್ಯಾಯವಾದ ಮೊಬಲಗಿಗಿಂತ ಹೆಚ್ಚು ಮೊಬಲಗು ಯಾವ ಪ್ರಜೆಯಿಂದಲೂ ವಸೂಲಾಗುತ್ತಿರಲಿಲ್ಲ, ನ್ಯಾಯವಾದ ಮೊಬಲಗಿಗಿಂತ ಕಡಮೆ 10,