ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

71)

: - - - - - -

ಗುಣಾತಿಶಯಗಳು ನಿನ್ನಲ್ಲಿಯೂ ಇರುವುದು, ಅವುಗಳು ನಿನ್ನಲ್ಲಿ ಎಷ್ಟು ಮಟ್ಟಿಗೆ ಮೂರ್ತಿಭವಿಸಿರುವುವೋ ಅದು ನನಗೆ ಸ್ಪಷ್ಟವಾಗಿ ತಿಳಿಯದು. ಆದರೆ, ಕೆಲಿಪ್ಪಳ ದ್ವೀಪಕ್ಕೆ ಹೋಗಿ, ಅವಳ ಇಂದ್ರಜಾಲ, ಮಹೇಂದ್ರಜಾಲ ಸಿದ್ಯೆಯೆಂಬ ಮಹಾ ಪಾಶದಿಂದ ತಪ್ಪಿಸಿಕೊಂಡು ಬಂದಿರುವುದನ್ನು ನೋಡಿದರೆ, ಮೆಂಟರನಲ್ಲಿ ಇರತಕ್ಕ ಸತ್ಯ, ಧರ್ಮ, ಧೈರಸ್ಟ್ರಗಳು ನಿನ್ನಲ್ಲಿಯೂ ವಿಶೇಷವಾಗಿರುವುವೆಂದು ಊಹಿಸ ಬಹುದು, ಜಗದೀಶ್ವರನ ಲೀಲೆಯು ಅದ್ಭುತವಾದದ್ದು, ಜಗತ್ತಿನ ಸೃಷ್ಟಿಯನ್ನು ನೋಡಿದರೆ, ಇವನ ಅದ್ಭುತವಾದ ಲೀಲೆಯು ಸ್ಪಷ್ಟವಾಗುತ್ತದೆ. ಸತ್ವ ಸಮದೃಷ್ಟಿ ಯಿಂದ ಸಶ್ವೇಶ್ವರನು ಸೃಷ್ಟಿ, ಸ್ಥಿತಿ, ಪ್ರಳಯಗಳಿಗೆ ಸಂಬಂಧಪಟ್ಟ ವಿಧಿಗಳನ್ನು ಏರ್ಪ ಡಿಸಿರುವನು. ಆ ವಿಧಿಗಳಿಗೆ ಅನುಸಾರವಾದ ಸಂಸ್ಕಾರವು ಅಣುಗಳು ಮೊದ ಲ್ಗೊಂಡು ಮಹತ್ತಿನ ವರೆಗೂ ಎಲ್ಲಾ ಪದಾರ್ಥಗಳಲ್ಲಿಯ ವ್ಯಾಪ್ತವಾಗಿರುವುದು. ಎಲ್ಲಾ ಪ್ರಾಣಿಗಳೂ ಅವುಗಳ ಕರಕ್ಕೆ ಅನುರೂಪವಾದ ಫಲವನ್ನು ಹೊಂದಿ, ಜಗದೀ ಶ್ವರನ ನಿಷ್ಪಕ್ಷಪಾತತ್ವವು ದಿಗಂತವಿಶ್ರಾಂತವಾಗುವಂತೆ ಮಾಡುತ್ತಲಿರುವುವು. ಪಾರ್ಥಿವ ಶರೀರವು ಈ ಸಭೆಯಲ್ಲಿರತಕ್ಕೆ ಎಲ್ಲಾ ಜನಗಳಿಗೂ ಇರುವುದು, ಈ ಪ್ರಪಂಚದಲ್ಲರತಕ್ಕೆ ಎಲ್ಲಾ ಪ್ರಾಣಿಗಳಿಗೂ ಇರುವುದು, ಆದರೆ, ಅದೃಷ್ಟವಾದ ಸಂಸ್ಕಾರಕ್ಕೆ ಅನುಸಾರವಾಗಿ ಬುದ್ಧಿ ಪ್ರತಿಭೆಯು ಒಬ್ಬೊಬ್ಬರಲ್ಲಿ ಒಂದೊಂದು ವಿಧ ವಾಗಿರುವುದು, ಕಾಡುಮೃಗಗಳ ಜೊತೆಯಲ್ಲಿರತಕ್ಕೆ ಕುರುಬನ ಮನೋವಾ ಫಾರಗಳನ್ನೂ, ಮೆ೦೬ರನ ಮನೋವ್ಯಾಪಾರಗಳನ್ನೂ ಪರಿಶೀಲಿಸಿದರೆ, ಅದ್ಭುತ ವಾದ ಅಂತರವು ಎಷ್ಟು ಮಟ್ಟಿಗಿರುವುದೋ ಅದು ಗೊತ್ತಾಗುವುದು, ಒತವಸ್ತು ಗಳಗೂ, ಅವನ ಮನಸ್ಸಿಗೂ ಇರುವ ಅಂತರವನ್ನು ನೋಡಿದರೆ ಇನ್ನೂ ಅಧಿಕವಾದ ಅಂತರವು ತೋರುವುದು, ಚರ್ಮಚಕ್ಷು ಸ್ಥಿಗೆ ಹೇಗೋ ಹಾಗೆ ಜ್ಞಾನಚಕ್ಷುಸ್ಸಿಗೂ ಕೂಡ ಅಜ್ಞಾನ ರೂಪವಾದ ಸರೆಯು ಇರುವುದು, ಜ್ಞಾನಾರ್ಜನೆಯ ರೂಪ ವಾದ ಕರ್ಮಪರಿಪಾಕದಿಂದ ಈ ಪರೆಯು ಹೋಗಿ, ಸಕಲ ವಸ್ತುತತ್ವಜ್ಞಾನವೂ ಲಭ್ಯವಾಗುವುದು. ಇದಕ್ಕೆ ಕರ್ಮಪರಿಪಾಕವೆಂದು ಹೇಳಬಹುದು. ಮೆಂ! ರನು ಅಸಾಧಾರಣವಾದ ಕರ್ಮಗಳನ್ನು ಮಾಡಿ, ಅಜ್ಞಾನಾಂಧಕಾರಮಯವಾದ ಪ್ರಪಂಚವನ್ನು ಬಿಟ್ಟು ತೇಜೋಮಯವಾದ ಪ್ರಪಂಚವನ್ನು ಪ್ರವೇಶಿಸಿರುವನು. ಸಕಲ ವಿಷಯಗಳಲ್ಲಿಯೂ ತತ್ವಾರ್ಥವು ಪ್ರಸ್ತಾಪಿಸಲ್ಪಟ್ಟ ಕೂಡ, ಇವ ನಟ