ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8j. •hrs -

  • * *r -2

ಕಿರಣಗಳೂ ಕೂಡ ಮನೋಹರವಾಗಿ ಪರಿಣಮಿಸುವುವು. ಈ ಪ್ರಾಂತ್ಯದಲ್ಲಿ ಯಾ ನಾಗೂ ವಸಂತರುತುವಿನ ಧರ್ಮಗಳು ಎಲ್ಲಿ ನೋಡಿದಾಗ್ಯೂ ಕಾಣುತ್ತಿರುವುವು. ಈ ಪ್ರಾಂತ್ಯದ ಕಣಿವೆಗಳಲ್ಲಿಯೂ, ಮೈದಾನಗಳಲ್ಲಿಯ, ಗುಡ್ಡಗಳಲ್ಲಿಯ ವರ್ಷಕ್ಕೆ ಎರಡಾವರ್ತಿ ಭೋಗ್ಯ ವಸ್ತುಗಳು ಬೆಳೆಯುವುವು. ಬೇಲಿಗಳಲ್ಲಿ ನಾನಾ ವಿಧವಾದ ಫಲಪುಷ್ಪಗಳನ್ನು ಬಿಡತಕ್ಕೆ ವೃಕ್ಷಗಳಿರುವುವು, ಪರ್ವತಾಗ್ರಗಳಲ್ಲಿ ದನಕರುಗಳು, ಕುರಿಗಳು, ಆಡುಗಳು ಇವೇ ಮೊದಲಾದ ಜನಗಳ ಸೌಖ್ಯಕ್ಕೆ ಸಾಧ ಕವಾದ ಪ್ರಾಣಿಗಳು ಸ್ವಚ್ಛೆಯಿಂದ ಮೇಯುತ್ತಲಿರುವುವು ಈ ದೇಶದಲ್ಲಿ ಚಿನ್ನ, ಬೆಳ್ಳಿ ಮೊದಲಾದ ಅನೇಕ ವಿಧವಾದ ಲೋಹದ ಗಣಿಗಳು ಇರುವುವು. ಜನಗಳು ಸೋಮಾರಿಗಳಲ್ಲ, ಇವುಗಳನ್ನು ರೂಢಿಸುವುದರಲ್ಲಿ ಎಲ್ಲರೂ ದಕ್ಷರಾಗಿರುವರು. ರೂಢಿಸುವುದಕ್ಕೆ ಬೇಕಾದ ಯಂತ್ರ ಸಾಮಗ್ರಿಗಳು ಇವರಲ್ಲಿ ಗೊತ್ತಿಲ್ಲದ ಹಾಗಿರು ವುವು, ಅವುಗಳನ್ನು ತಯಾರಾಡುವುದರಲ್ಲಿ ಈ ಜನಗಳು ನಿಸೀಮರಾಗಿರುವರು. ಈ ದೇಶದಲ್ಲಿ ಚಿನ್ನ, ಬೆಳ್ಳಿ, ರತ್ನ ಮೊದಲಾದವುಗಳಿಗೆ ಬೆಲೆಯಿಲ್ಲ. ಭೋಗ್ಯ ವಸ್ತು ಗಳ ಪ್ರಾಪ್ತಿಯ ಇವರಿಗೆ ಮುಖ್ಯ ಗುರಿಯಾಗಿರುವುದು, ಈ ದೇಶಕ್ಕೆ ನಾವು ಮೊದಲು ಹೋದಾಗ, ನೇಗಲಿಗೆ ಚಿನ್ನ, ಬೆಳ್ಳಿ ಮೊದಲಾದವುಗಳನ್ನು ಉಪಯೋಗಿಸು ತಿದ್ದರು. ಕ್ರಮಕ್ರಮವಾಗಿ ಈ ಕೆಲಸಕ್ಕೆ ಕಬ್ಬಿಣವು ಪ್ರಯೋಜನಕರವಾದ ದ್ದೆಂದು ಗೊತ್ತಾಯಿತು. ಈಗ ಕಬ್ಬಿಣಕ್ಕೆ ಇರುವ ಬೆಲೆಯು ಆ ದೇಶದಲ್ಲಿ ಚಿನ್ನ, ಬೆಳ್ಳಿಗೆ ಇರುವುದಿಲ್ಲ, ಈ ದೇಶೀಯರು ಕುರುಬರಾಗಿಯೂ, ಕರ್ಷಕರಾಗಿಯ ಇರುವರು, ಅನ್ನ ವಸ್ತ್ರಗಳಿಗೆ ಬೇಕಾದ ಪದಾರ್ಥಗಳನ್ನು ನಿರ್ಮಾಣ ಮಾಡು ವುದೇ ಇವರ ಮುಖ್ಯ ಉದ್ಯೋಗವಾಗಿರುವುದು, ಕರ್ಷಕ ವೃತ್ತಿಗೆ ಸಾಧಕ ವಾದ ಉಪವೃತ್ತಿಗಳೆಲ್ಲಾ ಇವರಲ್ಲಿ ಪರಾಕಾಷ್ಪದಸೆಯನ್ನು ಹೊಂದಿರುವುವು. ದನಕರುಗಳನ್ನು ಸಾಕುವುದು, ಮೇವನ್ನು ಬೆಳೆಯುವುದು, ಗೊಬ್ಬರವನ್ನು ಉಪಯೋಗಿಸುವುದು, ಮನೆಗಳನ್ನು ಕಟ್ಟುವುದು, ಬಡಗಿ ಕೆಲಸ, ಕಬ್ಬಿಣದ ಕೆಲಸ, ತುಪಟದ ಬಟ್ಟೆಗಳನ್ನು ಮಾಡುವುದು, ಅರಳೇ ಬಟ್ಟೆಗಳನ್ನು ಮಾಡುವುದು, ಉಡಿಗೆ ಗಳನ್ನು ಮಾಡುವುದು, ಪಾಕಶಾಸ್ತ್ರ, ಹಣ್ಣುಗಳನ್ನು ಕೊಳೆಯದಂತೆ ಇಡುವುದು, ಕಾಯಿಗಳು ಬಹುಕಾಲದವರೆಗೂ ಇರುವಂತೆ ಮಾಡುವುದು, ಹಾಲನ್ನು ಕೆಡದಂತೆ ಇಡುವುದು, ಸತ್ತ ಪ್ರಾಣಿಗಳ ಆಸ್ತಿ, ಚರ್ಮ ಮೊದಲಾದವುಗಳಿಂದ ಉಡಿಗೆತೊಡಿಗೆ 11