ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 • 1 ಮೊದಲಾದ ಪದಾರ್ಥಗಳನ್ನು ಮಾಡುವುದು, ಸಕಲ ಪ್ರಾಣಿಗಳನ್ನೂ ಸಾಕಿ, ಅವು ಗಳಿಂದ ನಿರ್ಮಾಣ ಮಾಡಲ್ಪಟ್ಟ ಪದಾರ್ಥಗಳು ಮನುಷ್ಯರಿಗೆ ಉಪಯೋಗವಾಗು ವಂತೆ ಮಾಡುವುದು, ಮನೆಗಳನ್ನೂ, ಉಡಿಗೆ-ತೊಡಿಗೆಗಳನ್ನೂ ನಿರ್ಮಲವಾಗಿರುವಂತೆ ಇಟ್ಟು ಕೊಳ್ಳುವುದು, ಋತುಧರ್ಮಗಳಿಗೆ ಅನುಸಾರವಾದ ಬಟ್ಟೆಗಳನ್ನು ನೇಯು ವುದು, ಮರದಲ್ಲಿಯ, ಕಬ್ಬಿಣದಲ್ಲಿಯ ಗೃಹಕೃತ್ಯಕ್ಕೂ, ಭೋಗ್ಯ ವಸ್ತುಗಳ ನಿರ್ಮಾಣಕ್ಕೂ ಬೇಕಾದ ಸಾಮಾನುಗಳನ್ನು ಮಾಡುವುದು ಇವುಗಳಲ್ಲೆಲ್ಲಾ, ಈ ದೇಶೀಯರು ಕೇವಲ ನಿಭೀಮರಾಗಿರುತ್ತಾರೆ, ಇಲ್ಲಿನ ಜನಗಳು ಕೃಷಿಯನ್ನು ಮಾ ಡುವುದರಲ್ಲಿ ಬಹಳ ಸಮರ್ಥರು, ದನಗಳನ್ನೂ, ಕುರಿಗಳನ್ನೂ ಪುತ್ರನಿರ್ವಿಶೇಷ ವಾಗಿ ಸಾಕುತ್ತಾರೆ. ಇವುಗಳೇ ಇವರ ಧನ, ಮರದಿಂದಲೂ, ಕಬ್ಬಿಣದಿಂದಲೂ, ಗೃಹಕೃತ್ಯಕ್ಕೆ ಬೇಕಾದ ಪಾತ್ರೆಗಳನ್ನೆಲ್ಲಾ ಮಾಡಿಕೊಳ್ಳುತ್ತಾರೆ. ಅಪೂರ್ವವಾಗಿ ಯ, ಕಷ್ಟಸಾಧ್ಯವಾಗಿಯೂ ಇರುವ ಲೋಹಗಳು ಹೆಚ್ಚಾದದ್ದರಿಂದ, ಅವುಗಳನ್ನು ಅವರು ಉಪಯೋಗಿಸುವುದಿಲ್ಲ, ಕಬ್ಬಿಣವನ್ನೂ ಕೂಡ ಜಿರಾಯಿತು ಯಂತ್ರಗಳಿಗೂ, ಮುಟ್ಟುಗಳಿಗೂ ವಿಶೇಷವಾಗಿ ಉಪಯೋಗಿಸುತ್ತಾರೆ. ಅಲಂಕಾರವಾದ ಕಟ್ಟಡಗ ಇಲ್ಲಿಯ, ಭೋಗ್ಯ ವಸ್ತುಗಳಲ್ಲಿಯ ಇವರು ತಮ್ಮ ಕೌಶಲ್ಯವನ್ನು ಉಪಯೋಗಿ ಸುವುದಿಲ್ಲ. ಈ ನಶ್ವರವಾದ ಪ್ರಾಣವನ್ನು ಕಾಪಾಡುವುದಕ್ಕೆ ಶಾಶ್ವತವಾದ ಪ್ರಾಸಾದಗಳಿಂದ ಪ್ರಯೋಜನವಿರುವುದಿಲ್ಲವೆಂದು ಭಾವಿಸಿ, ಅವರು ಕಟ್ಟಡಗಳಿಗೆ ತುಂಬಾ ದ್ರವ್ಯವನ್ನು ವಿನಿಯೋಗಿಸುವುದಿಲ್ಲ. ದುಸ್ಸಹವಾದ ಛಳಿ, ಗಾಳಿ, ಮಳೆ, ಬಿಸಿಲು ಮೊದಲಾದವುಗಳಿಂದ ರಕ್ಷಿಸಿಕೊಂಡರೆ ಸಾಕೆಂದು ಇವರು ಅಭಿಪ್ರಾಯವುಳ್ಳ ವರಾಗಿರುತ್ತಾರೆ, ಗ್ರೀಸ್, ಈಜಿಪ್ಟ್ ಮೊದಲಾದ ದೇಶಗಳಲ್ಲಿ ನಾಗರಿಕತೆಯ ಮಹಿಮೆಯಿಂದ ಚಿತ್ರವಿಚಿತ್ರವಾಗಿಯೂ, ಮನೋಹರವಾಗಿಯ ಇರತಕ್ಕ ಭೋಗ್ಯ ವಸ್ತುಗಳು ಲಕ್ಷಾಧಿಕಾರಿಗಳ ಮತ್ತು ಕೋಟೇಶ್ವರರ ಉಪಯೋಗಕ್ಕಾಗಿ ನಿರ್ಮಿಸ ಲ್ಪಡುತ್ತಲಿರುವುವು. ಅಂಥಾ ಪದಾರ್ಥಗಳಲ್ಲಿ ಅವರು ಆಸಕ್ತರಾಗಿರುವುದಿಲ್ಲ. ಅವುಗಳಲ್ಲಿ ತಿರಸ್ಕಾರ ಬುದ್ದಿಯನ್ನೇ ತೋರಿಸುವರು, ಅರಮನೆಗಳು, ಪ್ರಾಸಾದ ಗಳು, ನವರತ್ನ ಖಚಿತವಾದ ಆಭರಣಗಳು, ಅಮೌಲ್ಯವಾದ ಪೀತಾಂಬರಗಳು ಇವು' ಗಳಿಂದ ಈ ಕ್ಷಣಭಂಗುರವಾದ ದೇಹಗಳಿಗೆ ಪ್ರಯೋಜನವಿಲ್ಲವೆಂದು ಅವರು ತಿಳಿದು ಕೊಂಡು, ಅವುಗಳಲ್ಲಿ ಉದಾಶೀನರಾಗಿರುವರು. ಅತ್ಯಂತ ಸುಂದರವಾದ ಕಟ್ಟಡಗ