ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 → # * * * * = + » ಇಲ್ಲಿ ವಾಸಮಾಡುವುದರಿಂದ, ಪರ್ಣಶಾಲೆಯಲ್ಲಿ ವಾಸಮಾಡುವುದರಿಂದ ಉಂಟಾಗ ತಕ್ಕ ಆಯುರಾರೋಗ್ಯಶ್ವರ ಗಳುಂಟಾಗುವುದೇ ಎಂದು ಅವರು ಕೇಳುತ್ತಾರೆ. ಕೋಟ್ಯಂತರ ರೂಪಾಯಿಗಳು ಬಾಳತಕ್ಕ ಉಡಿಗೆತೊಡಿಗೆಗಳ ಭಾರವನ್ನು ವಹಿಸು ವುದರಿಂದ, ನಿಸರ್ಗವಾಗಿ ಇಲ್ಲದ ಪ್ರಯೋಜನಗಳು ಉಂಟಾಗುವುದೇ ಎಂದು ಇವರು ಕೇಳುವರು. ಮಣ್ಣಿನ ಪಾತ್ರೆಗಳಿಗಿಂತಲೂ, ಮರದ ಪಾತ್ರಗಳಿಗಿಂತಲೂ ನವರತ್ನ ಖಚಿತವಾದ ಚಿನ್ನದ ಪಾತ್ರೆಗಳಿಂದಲೂ, ಬೆಳ್ಳಿ ಪಾತ್ರೆಗಳಿಂದಲೂ ಹೆಚ್ಚು ಪ್ರಯೋಜ ನವುಂಟೇ ಎಂದು ಕೇಳುವರು, ಕಸೂತಿ ಬಟ್ಟೆಗಳಿಂದಲೂ, ಜರತಾರಿ ಬಟ್ಟೆಗಳಿ೦ ದಲೂ, ಪೀತಾಂಬರಗಳಿ೦ದಲೂ, ಹೊಲಮಗ್ಗದ ಬಟ್ಟೆಗಳಿಗಿಂತಲೂ ಹೆಚ್ಚಾದ ಪ್ರಯೋಜನವು ಉಂಟೇ ಎಂದು ಕೇಳುವರು. ಹಂಸತೂಲಿಕಾತಲ್ಪಗಳು ಸಾಮಾ ನ್ಯವಾದ ಮಂದಲಿಗೆಗಳಿಗಿಂತಲೂ, ಬಂತೆಗಳಿಗಿಂತಲೂ ಹೆಚ್ಚಾದ ಪ್ರಯೋಜನ ವುಂಟೇ ಎಂದು ಕೇಳುವರು, ಅತ್ಯಂತ ಬೆಲೆಯಾಗತಕ್ಕ ಪದಾರ್ಥಗಳು ಅಪಹ. ರಿಸಲ್ಪಟ್ಟರೆ, ಕೇವಲ ವ್ಯಸನವಾಗುವುದೆಂಬದಾಗಿಯೂ, ಮಣ್ಣಿನ ಪಾತ್ರೆಗಳು, ಮರದ ಪಾತ್ರೆಗಳು, ಬಿದರು ಪಾತ್ರೆಗಳು ಅಪಹರಿಸಲ್ಪಟ್ಟಾಗ್ಯೂ, ಅವುಗಳಿಗೆ ಬದಲಾಗಿ ವಿಶೇಷ ಖರ್ಚಿಲ್ಲದೆ, ಅದೇ ಪಾತ್ರೆಗಳನ್ನು ತಂದುಕೊಳ್ಳಬಹುದೆಂಬ ದಾಗಿಯ, ಸಕಲ ಭಾಗಗಳಲ್ಲಿಯೂ ಅರಮನೆ, ಪ್ರಾಸಾದ ಮೊದಲಾದವುಗ ಳಿಗಿಂತಲೂ ಪರ್ನಶಾಲೆಗಳು, ಗುಡಿಸಲುಗಳು ಉತ್ತಮವೆಂಬದಾಗಿಯ, ಪಡ್ರಸೋ ಪೇತವಾದ ಆಹಾರಗಳಿಗಿಂತಲೂ ಅಂಬಲಿ, ಹಿಟ್ಟು, ಮಜ್ಜಿಗೆ, ನೀರು ಮೊದಲಾದ ಬಡವರ ಆಹಾರಗಳು, ಆಯುರಾರೋಗ್ಯಗಳಿಗೆ ವಿಶೇಷ ಸಾಧಕಗಳಾಗುವುವೆಂಬದಾ ಗಿಯ ಈ ಜನಗಳು ತಿಳಿದುಕೊಂಡಿರುವರು. ಬಹಳ ಬೆಲೆಯುಳ್ಳ ಆಹಾರದ ಇಯ, ಪಾನದಲ್ಲಿಯೂ ಆಸಕ್ತರಾದವರ ಶರೀರಗಳು ಅನೇಕ ರೋಗಗಳಿಗೆ ಮಾತ್ರ ಸ್ಥಾನವಾಗುವುವೆಂಬದಾಗಿಯೂ, ಅಂಥಾ ಜನಗಳಿಗೆ ಧೈರಸ್ಟ್‌ಗಳು ಕಡಮೆ ಯಾಗುವುವೆಂಬದಾಗಿಯೂ, ಅನೇಕ ಭೋಗ್ಯ ವಸ್ತುಗಳು ಉನ್ಮತ್ತತೆಗೆ ಕಾರಣವಾ ಗುವುವೆಂಬದಾಗಿಯ, ಭೋಗ್ಯ ವಸ್ತುಗಳನ್ನು ಉಪಯೋಗಿಸುವ ಪದ್ಧತಿಯು ಬಿದ್ದ ಕೂಡಲೆ, ಅವುಗಳನ್ನು ಸಂಪಾದಿಸಿಕೊಳ್ಳುವುದಕ್ಕೆ ಗತಿಯಿಲ್ಲದೆ ಹೋದರೆ, ಮೋಸ, ಕಳ್ಳತನ ಮೊದಲಾದವುಗಳನ್ನಾದರೂ ಮಾಡಿ, ಅವುಗಳನ್ನು ಸಂಪಾದಿಸಿಕೊಳ್ಳುವ ಪ್ರಯತ್ನವು ಮಾಡಲ್ಪಡುತ್ತದೆಂಬದಾಗಿಯ, ಇಷ್ಟು ಮಾಡಿದಾಗ್ಯೂ, ಆಯುರಾ